ಲೈಫ್‌ಸ್ಟೈಲ್

ನೀವು ಪ್ರತಿದಿನ ಹೆಚ್ಚು ಆಲೂಗಡ್ಡೆ ಚಿಪ್ಸ್ ತಿನ್ನಬಹುದೇ? ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ಚಿಪ್ಸ್ ತಿನ್ನಬೇಡಿ

ತರಕಾರಿಯಲ್ಲಿ ಆಲೂಗಡ್ಡೆ ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಆಲೂಗಡ್ಡೆ ಇಂದ ಪಲ್ಯ, ಚಿಪ್ಸ್ ಇತ್ಯಾದಿ ವಿಭಿನ್ನವಾದ ಆಹಾರ ಚಾಟ್ಸ್ ಗಳನ್ನು ಮಾಡಿ ಸೇವನೆ ಮಾಡುತ್ತಾರೆ. ಇದು ರುಚಿಯಲ್ಲಿ ತಿನ್ನಲು ಬಲು ಚೆನ್ನಾಗಿರುತ್ತದೆ. ಆಲೂಗಡ್ಡೆಯನ್ನು ಉಪಯೋಗಿಸಿ ಬಹಳ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ.

ಆಲೂಗಡ್ಡೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ ಕಾರಣ ಇದರಲ್ಲಿರುವ ಅಮೈನೋ ಆಮ್ಲಗಳು. ಆಲೂಗಡ್ಡೆಯನ್ನು ಮೂರು ಭಾಗಗಳು ಆಗಿ ವಿಂಗಡನೆ ಮಾಡಬಹುದು. ಮೊದಲಿಗೆ ಸಿಪ್ಪೆ, ಸಿಪ್ಪೆ ಕೆಳಗೆ ಇರುವ ತೆಳುವಾದ ಪೊರೆ, ಮತ್ತು ಮೂರನೆಯದು, ಒಳ ಪಿಸ್ಟ ಭಾಗ ಅಂತ ವಿಂಗಡನೆ ಮಾಡಲಾಗಿದೆ. ಮೊದಲನೇ ಭಾಗದಲ್ಲಿ ಖನಿಜಗಳು ಮತ್ತು ಜೀವ ಸತ್ವಗಳು ಇರುತ್ತವೆ ಎರಡನೆಯದು ಪದರಿನಲ್ಲಿ ಸಸಾರಜನಕ ಮತ್ತು ವರ್ಣ ದ್ರವ್ಯ ಇರುತ್ತದೆ.

ಸಸಾರಜನಕ ದ ಅರ್ಥ ಏನೆಂದರೆ, ನಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಅನ್ನು ಒದಗಿಸುತ್ತದೆ.
ಎಣ್ಣೆಯುಕ್ತ ಆಲೂಗಡ್ಡೆ ಚಿಪ್ಸ್ ಅಥವಾ ಇನ್ಯಾವುದೇ ಕುರುಕಲು ತಿಂಡಿಯನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಎಣ್ಣೆಯ ಅಂಶ ಕರಗದೆ ಕೊಬ್ಬಿನಾಂಶ ಶೇಖರಣೆಯಾಗುವುದು. ಅವು ತಾಯಿ ಮತ್ತು ಮಗುವಿಗೆ ಚರ್ಮ ಸಂಬಂಧಿ ಸಮಸ್ಯೆ ಮತ್ತು ಸ್ಥೂಲ ಕಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಪ್ರಸವದ ಸಮಯದಲ್ಲಿ ತಾಯಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು.
ಮಹಿಳೆಯರು ಗರ್ಭಾವಸ್ಥೆಯಲ್ಲಿ ಕುರುಕಲು ಆಹಾರವನ್ನು ತಿನ್ನಲು ಬಯಸುವರು. ಅದರಲ್ಲೂ ಆಲೂಗಡ್ಡೆ ಚಿಪ್ಸ್ ತಿನ್ನಲು ಬಹುತೇಕ ಮಹಿಳೆಯರು ಆಶಿಸುತ್ತಾರೆ ಎಂದು ವರದಿಯಾಗಿದೆ. ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮತ್ತು ಆಲೂಗಡ್ಡೆ ಚಿಪ್ಸನ್ನು ಅತಿಯಾಗಿ ತಿಂದರೆ ಮಗುವಿನ ಬೆಳವಣಿಗೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಆಲೂಗಡ್ಡೆಯ ಚಿಪ್ಸ್ ಅಧಿಕ ಎಣ್ಣೆಗಳನ್ನು ಹೀರಿಕೊಳ್ಳುತ್ತವೆ. ಎಣ್ಣೆಯಲ್ಲಿ ಒಮೆಗಾ 6 ಕೊಬ್ಬುಗಳಿಂದ ಕೂಡಿರುತ್ತವೆ.

ವಿಶೇಷವಾಗಿ ಲಿನೋಲಿಕ್ ಆಮ್ಲ ಮತ್ತು ಪೋಷಕಾಂಶದ ಅತಿಯಾದ ಸೇವನೆಯು ಉರಿಯೂತವನ್ನು ಉತ್ತೇಜಿಸುತ್ತದೆ. ಅಲ್ಲದೆ ಮಗುವಿಗೆ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿರುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.


ಆಲೂಗಡ್ಡೆ ಚಿಪ್ಸ್ ಅಥವಾ ಇನ್ಯಾವುದೇ ಕುರುಕಲು ತಿಂಡಿಯನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಎಣ್ಣೆಯ ಅಂಶ ಕರಗದೆ ಕೊಬ್ಬಿನಾಂಶ ಶೇಖರಣೆಯಾಗುವುದು. ಅವು ತಾಯಿ ಮತ್ತು ಮಗುವಿಗೆ ಚರ್ಮ ಸಂಬಂಧಿ ಸಮಸ್ಯೆ ಮತ್ತು ಸ್ಥೂಲ ಕಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರಸವದ ಸಮಯದಲ್ಲಿ ತಾಯಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು.