Peanut vs almond protein comparison
- ಬಾದಾಮಿಗೆ ಹೋಲಿಸಿದರೆ ಕಡಲೇಕಾಯಿಯಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಿನ ಪ್ರೊಟೀನ್ ಇದೆ.
- ಬಾದಾಮಿಯು ವಿಟಮಿನ್ ಇ, ಫೈಬರ್ ಮತ್ತು ಹೃದಯಕ್ಕೆ ಹಿತಕರವಾದ ಕೊಬ್ಬನ್ನು ಹೊಂದಿದೆ.
- ಕಡಲೇಕಾಯಿ ಆರ್ಥಿಕವಾಗಿ ಬಜೆಟ್ ಸ್ನೇಹಿಯಾಗಿದ್ದರೆ, ಬಾದಾಮಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹೆಚ್ಚು ಸಹಕಾರಿ.
Peanut vs almond protein comparison: ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನಲಾಗುತ್ತದೆ. ದುಬಾರಿ ಹಣಕ್ಕೆ ಮಾರಾಟವಾಗುವ ಬಾದಾಮಿಯಷ್ಟೇ ಇದು ಪ್ರೋಟಿನ್ವುಳ್ಳದ್ದು ಎನ್ನುವುದು ಹಿರಿಯರ ವಾದ. ಸ್ನಾಯುಗಳ ದುರಸ್ತಿ, ಹಾರ್ಮೋನು ಉತ್ಪಾದನೆ, ರೋಗನಿರೋಧ ಶಕ್ತಿ, ಕೂದಲಿನ ಬೆಳವಣಿಗೆ, ಚರ್ಪದ ಕಾಂತಿಗೆ ಪ್ರೋಟಿನ್ ಅತ್ಯಗತ್ಯ. ಸಸ್ಯಾಹಾರಿಗಳಿಗೆ ಬಾದಾಮಿ ಮತ್ತು ಕಡಲೇಕಾಯಿ ಪ್ರೊಟೀನ್ ಪಡೆಯಲು ಅತ್ಯುತ್ತಮ ಆಯ್ಕೆ. ಆದರೆ, ಇವೆರಡರಲ್ಲಿ ಹೆಚ್ಚು ಪ್ರೋಟೀನ್ ಹೊಂದಿರೋದು ಯಾವುದು ಆರೋಗ್ಯಕ್ಕೆ ಉತ್ತಮ ಯಾವುದು ಎಂಬುದಕ್ಕೆ ಮಾಹಿತಿ ಇಲ್ಲಿದೆ
ಯಾವುದರಲ್ಲಿ ಹೆಚ್ಚು ಪ್ರೋಟೀನ್ ಇದೆ?
ಬಾದಾಮಿ ಮತ್ತು ಕಡಲೆಕಾಯಿ ಎರಡನ್ನು ತುಲನೆ ಮಾಡಿ ನೋಡಿದಾಗ ಪ್ರೊಟೀನ್ ಪ್ರಮಾಣವನ್ನು ಬಾದಾಮಿಗಿಂತ ಕಡಲೇಕಾಯಿ ಹೊಂದಿದೆ. ಬಾದಾಮಿಗಿಂತ ಸುಮಾರು 15% ರಿಂದ 20% ರಷ್ಟು ಹೆಚ್ಚಿನ ಪ್ರೊಟೀನ್ ಇರುತ್ತದೆ.ಕಡಲೇ ಕಾಯಿಯಲ್ಲಿ 25ರಿಂದ 25 ಗ್ರಾಂ ಪ್ರೋಟೀನ್ ಇದ್ದರೆ, ಬಾದಾಮಿಯಲ್ಲಿ 21 ಗ್ರಾಂ ಇದೆ ಎನ್ನುವುದು ತಜ್ಞರು ಅಭಿಪ್ರಾಯ.
ಬಾದಾಮಿಯಲ್ಲಿ ಏನೆಲ್ಲ ಆರೋಗ್ಯಕಾರಿ ಪ್ರಯೋಜನವಿದೆ?
ಬಾದಾಮಿಯಲ್ಲಿ ಆರೋಗ್ಯಕರ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು, ನಾರಿನಂಶ ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಬಾದಾಮಿಯನ್ನು ಹಸಿಯಾಗಿ, ಹುರಿದು, ಹಾಲಿನ ರೂಪದಲ್ಲಿ ಅಥವಾ ಆಲ್ಮಂಡ್ ಬಟರ್ ರೂಪದಲ್ಲಿ ಸುಲಭವಾಗಿ ಸೇವಿಸಬಹುದು.
ಕಡಲೇಕಾಯಿಯಲ್ಲಿ ಏನಿದೆ?
ಕಡಲೇಕಾಯಿಯಲ್ಲಿ ಆರೋಗ್ಯಕರ ಕೊಬ್ಬು, ನಿಯಾಸಿನ್, ಫೋಲೇಟ್ ಮತ್ತು ವಿಟಮಿನ್ ಇ ಇರುತ್ತದೆ. ಇದಲ್ಲದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ದೇಹಕ್ಕೆ ಪ್ರಯೋಜನಕಾರಿ. ಬಾದಾಮಿಗೆ ಹೋಲಿಸಿದರೆ ಕಡಲೆಕಾಯಿಯ ಬೆಲೆ ಕಡಿಮೆ. ಹೀಗಾಗಿ ಇದನ್ನು ಬಡವರ ಬಾದಾಮಿ ಎನ್ನಲಾಗುತ್ತಿತ್ತು
ಹೀಗೆ ತಿನ್ನಿ
- ಬೀಜಗಳಲ್ಲಿ ಕ್ಯಾಲೋರಿ ಇರುವ ಕಾರಣ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಮಿತವಾಗಿ ಸೇವಿಸಿ
- ಹಸಿ ಅಥವಾ ಒಣಗಿಸಿ ಹುರಿದ ಬಾದಾಮಿ ಅಥವಾ ಕಡಲೇಕಾಯಿ ತಿನ್ನೋದೆ ಉತ್ತಮ
- ಮೊಸರು ಅಥವಾ ಹಣ್ಣುಗಳೊಂದಿಗೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನ
ಯಾವುದು ಬೆಸ್ಟ್ ?
ಪ್ರೊಟೀನ್ ವಿಷಯದಲ್ಲಿ ಕಡಲೇಕಾಯಿ ಮೇಲುಗೈ ಸಾಧಿಸಿದರೆ, ವಿಟಮಿನ್ ಇ ಮತ್ತು ಫೈಬರ್ ವಿಷಯದಲ್ಲಿ ಬಾದಾಮಿ ಉತ್ತಮವಾಗಿದೆ. ನಿಮ್ಮ ಬಜೆಟ್ ಮತ್ತು ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ಎರಡನ್ನು ಮಿತವಾಗಿ ಸೇವಿಸಬಹುದಾಗಿದೆ, (ಏಜೆನ್ಸೀಸ್).