ಲೈಫ್‌ಸ್ಟೈಲ್

Paneer Kheer Recipe | ದೀಪಾವಳಿ ಹಬ್ಬಕ್ಕೆ ಸ್ಪೇಷಲ್​​ ಪನ್ನೀರ್​​ ಖೀರ್​​ ರೆಸಿಪಿ

ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳಿದೆ. ಹಬ್ಬಕ್ಕೆ ಮನೆಯಲ್ಲಿ ವಿಶೇಷವಾದ ಸಿಹಿ ತಿಂಡಿಯನ್ನು ತಯಾರಿಸಬೇಕು ಎಂದು ಆಲೋಚಿಸುತ್ತಿದ್ದೀರಾ. ಎಲ್ಲ ಸಂದರ್ಭಗಳಲ್ಲು ಮನೆಯಲ್ಲಿ ಸುಲಭವಾಗಿ ಮಾಡುವ ಸಿಹಿ ಎಂದರೆ ಅದು ಖೀರ್​​. ಆದರೆ ಈ ಬಾರಿ ಹಬ್ಬದ ಉಡುಗೊರೆಯಾಗಿ ನಿಮಗಾಗಿ ಪನೀರ್​​ ಖೀರ್ ರೆಸಿಪಿಯನ್ನು(Paneer Kheer Recipe) ಇಲ್ಲಿ ತಿಳಿಸಲಾಗಿದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನ್ನಿಸುವ ಪನೀರ್​ ಖೀರ್​​​ ಮಾಡುವುದು ಸುಲಭ.

ಪನೀರ್​ ಖೀರ್​ ತಯಾರಿಸಲು ಯಾವುದೇ ವಿಶೇಷ ಪದಾರ್ಥಗಳ ಅಗತ್ಯವಿಲ್ಲ, ಈ ರೆಸಿಪಿಯನ್ನು ನೀವು ಖಂಡಿತವಾಗಿ ಟ್ರೈ ಮಾಡಲೇಬೇಕು.

ಪನೀರ್​ ಖೀರ್​ ಮಾಡಲು ಬೇಕಾಗುವ ಪದಾರ್ಥಗಳು

  • 1 ಲೀಟರ್ ಹಾಲು (4 ಕಪ್​ಗಳು)
  • 200 ಗ್ರಾಂ ಚೀಸ್
  • 1/2 ಕಪ್ ಸಕ್ಕರೆ
  • 10 ಕೇಸರಿ ಎಳೆ
  • 1/2 ಟೀಚಮಚ ಏಲಕ್ಕಿ ಪುಡಿ
  • 2 ಟೀಸ್ಪೂನ್ ಕತ್ತರಿಸಿದ ಬಾದಾಮಿ, ಗೋಡಂಬಿ, ಪಿಸ್ತಾ (ಬೇಕಿದ್ದರೆ ಮಾತ್ರ)

ಪನೀರ್​ ಖೀರ್​ ಮಾಡುವ ವಿಧಾನ

ಮೊದಲಿಗೆ ಚೀಸ್ ಅನ್ನು ತುರಿದು ಇಟ್ಟುಕೊಳ್ಳಿ. ಪಾತ್ರೆಗೆ ಕೆನೆ ಹಾಲನ್ನು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ. ತೆಗೆದುಕೊಂಡ ಹಾಲು ಅರ್ಧದಷ್ಟು ಆಗುವವರೆಗೂ ಕುದಿಸಿ, ಬಳಿಕ ಸಕ್ಕರೆ ಸೇರಿಸಿ. ನಂತರ ಕೇಸರಿ ಎಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೆ ಕೆಲವು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ತುರಿದ ಚೀಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಬೇಯಿಸಿದ ಬಳಿಕ ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಡ್ರೈಫ್ರೂಟ್​ಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಗ್ಯಾಸ್ ಆಫ್ ಮಾಡಿ. ಈಗ ಪನೀರ್​ ಖೀರ್​​ ಸವಿಯಲು ಸಿದ್ಧವಾಗಿದೆ.