ಲೈಫ್‌ಸ್ಟೈಲ್

ಬ್ಯಾಚುಲರ್ಸ್​​ಗಾಗಿ ಸಿಂಪಲ್​ Food Recipes; ರೋಗನಿರೋಧಕ ಶಕ್ತಿ ಹೆಚ್ಚಿಸುವ ಗೊಂಗುರ ಸೊಪ್ಪಿನಿಂದ 15 ನಿಮಿಷದಲ್ಲಿ ತಯಾರಿಸಿ ಚಟ್ನಿ

  • ಜೀರ್ಣಕ್ರಿಯೆ, ಮಲಬದ್ಧತೆಗೆ ಮದ್ದು ಗೊಂಗುರ ಸೊಪ್ಪು

  • ಗೊಂಗುರ ಸೊಪ್ಪಿನಲ್ಲಿ ಚಟ್ನಿ ತಯಾರಿಸುವುದು ಹೇಗೆ?

  • ಕಡಿಮೆ ಸಮಯದಲ್ಲಿ ಗೊಂಗುರ ಚಟ್ನಿ ಮಾಡುವ ವಿಧಾನ ಹೀಗೆ

ಪುಂಡಿ ಅಥವಾ ಗೊಂಗುರ ಸೊಪ್ಪು ಮಸ್ಸೊಪ್ಪಿಗೆ ಬಳಸೋದಿಲ್ಲ. ಇದರಲ್ಲಿರುವ ಅತೀ ಹುಳಿ ಇದಕ್ಕೆ ಕಾರಣ. ಗೊಂಗುರದಿಂದ ಚಟ್ನಿ ತಯಾರಿಸಿ ಮುದ್ದೆ, ಅನ್ನ, ಚಪಾತಿ, ರೊಟ್ಟಿ ಜೊತೆ ಸೇವನೆ ಮಾಡುತ್ತಾರೆ. ಇದರಿಂದ ಉಪ್ಪಿನಕಾಯಿಯನ್ನು ತಯಾರಿಸುವುದು ಉಂಟು. ಗೊಂಗುರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದ್ರಿಂದ ಚಟ್ನಿ ಮಾಡೋದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.

ಆರೋಗ್ಯಕ್ಕೆ ಮದ್ದು ಗೊಂಗುರ

ಗೊಂಗುರದಲ್ಲಿ ಫಾಲಿಕ್​ ಆಮ್ಲ ಹಾಗೂ ಕಬ್ಬಿಣಾಂಶ ಇರುವ ಕಾರಣ ಇದು ರಕ್ತಹೀನತೆಗೆ ತಡೆಯೊಡ್ಡುತ್ತದೆ. ಜೊತೆಗೆ ಇದರಲ್ಲಿರುವ ನಾರಿನಾಂಶವು ಮಲಬದ್ಧತೆಯಿಂದ ಬಳಲುತ್ತಿರುವವರ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಇನ್ನು ಗೊಂಗುರದಲ್ಲಿ ವಿಟಮಿನ್​ ಸಿ ಇದ್ದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೇಳೆ ಹಾಕಿ ಸೊಪ್ಪು ಕುದಿಸಿ ಸೊಪ್ಪಿನ ಸಾರು ಮಾಡಿ ತಿಂದು ಬೋರಾಗಿದ್ದರೆ, ಈ ಸಲ 15-20 ನಿಮಿಷದಲ್ಲಿ ಗೊಂಗುರ ಸೊಪ್ಪಿನ ಚಟ್ನಿ ಜೊತೆಗೆ ತುಪ್ಪ ಬೆರೆಸಿಕೊಂಡು ರೊಟ್ಟಿ ಹಾಗೂ ಅನ್ನ, ಮುದ್ದೆ ಜೊತೆ ತಿನ್ನಬಹುದು. ಮೊದಲಿಗೆ ಚಟ್ನಿ ಮಾಡುವುದು ಹೇಗೆ, ಏನೆಲ್ಲ ಬೇಕು ಎನ್ನುವ ಲಿಸ್ಟ್ ಇಲ್ಲಿದೆ.

ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿ

  • ತೊಳೆದ ಗೊಂಗುರ ಸೊಪ್ಪು ಒಂದು ಕಟ್ಟು ಕಡಿಮೆ ಕಡ್ಡಿಗಳಿರಲಿ

  • ಎಣ್ಣೆ

  • ಜೀರಿಗೆ 1 ಚಮಚ

  • ಸಾಸಿವೆ- 1/4 ಚಮಚ

  • ಉಪ್ಪು ರುಚಿಗೆ ತಕ್ಕಷ್ಟು

  • ಬೆಳ್ಳುಳ್ಳಿ5-6

  • ಒಣ ಮೆಣಸಿನಕಾಯಿ ಎರಡು

  • ಕರಿಬೇವು

  • ಅರಿಶಿನ ಅರ್ಧ ಚಿಟಿಗೆ

  • ಈರುಳ್ಳಿ

  • ಉದ್ದಿನ ಬೇಳೆ, ಕಡಲೇ ಬೇಳೆ ತಲಾ 1 ಚಮಚ

  • ಇಂಗು

ಇದನ್ನೂ ಓದಿ: ಬ್ಯಾಚುಲರ್ಸ್​ಗಾಗಿ ಸಿಂಪಲ್​ ರೆಸಿಪಿ; ಮಂಗಳೂರು ಸೌತೆಕಾಯಿ- ಕೊಬ್ಬರಿ ಹಾಕಿ 20 ನಿಮಿಷದಲ್ಲಿ ಮಾಡಿ ಚಟ್ನಿ..Food Recipes

ಗೊಂಗುರ ಚಟ್ನಿ ತಯಾರಿಸುವ ವಿಧಾನ

ತೊಳೆದ ಗೊಂಗುರ ಎಲೆಯನ್ನು ಪಾತ್ರೆಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಮೆತ್ತಗಾಗುವವರೆಗೂ ರೋಸ್ಟ್​ ಮಾಡಿ, ಆನಂತರ ಅದೇ ಬಾಂಡ್ಲಿಗೆ ಉದ್ದಿನ ಬೇಳೆ ಮತ್ತು ಕಡಲೇ ಬೇಳೆ, ಒಣ ಮೆಣಸಿನ ಕಾಯಿ ಹಾಗೂ ಜೀರಿಗೆ ಹಾಕಿ ಉರಿದುಕೊಳ್ಳಿ.ಈಗ ಉರಿದಿಟ್ಟುಕೊಂಡ ಸೊಪ್ಪು ಹಾಗೂ ಮಸಾಲೆ ಪದಾರ್ಥ ತಣ್ಣಗಾದ ಮೇಲೆ ಮಿಕ್ಸರ್​ಗೆ ಹಾಕಿ ಗ್ರೈಂಡ್​ ಮಾಡಿಕೊಳ್ಳಿ. ಅದರೊಂದಿಗೆ ಉಪ್ಪು ಹಾಗೂ ಬೆಳ್ಳುಳ್ಳಿಯೂ ಇರಲಿ. ನೆನಪಿಡಿ ಇದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇರೋದಿಲ್ಲ, ಹಾಕಿಕೊಳ್ಳಲು ಬೇಡಿ.

ಈಗ ಬಾಂಡ್ಲಿಗೆ ಎಣ್ಣೆ ಹಾಕಿ ಇಂಗು ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ ಹಾಕಿ ಕತ್ತರಿಸಿದ ಈರುಳ್ಳಿ ಫ್ರೈ ಮಾಡಿಕೊಳ್ಳಿ ನಂತರ ಮಿಕ್ಸರ್​ಗೆ ಹಾಕಿದ ಸೊಪ್ಪನ್ನು ಪಾತ್ರೆಗೆ ಹಾಕಿ ಕಲಿಸಿಕೊಳ್ಳಿ. ಈಗ ನೀವು ಮಾಡಿದ ಗೊಂಗುರ ಚಟ್ನಿ ತಿನ್ನಲು ರೆಡಿ, (ಏಜೆನ್ಸೀಸ್).