Betel leaves health benefits 
ಲೈಫ್‌ಸ್ಟೈಲ್

ಬಾಯಿ ದುರ್ವಾಸನೆ, ಗ್ಯಾಸ್ಟ್ರಿಕ್​​​​ ಎಲ್ಲದಕ್ಕೂ ಮದ್ದು ಈ ವೀಳ್ಯದೆಲೆ; ತಿನ್ನುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ..Betel Leaf

ಪ್ರಮುಖ ಮುಖ್ಯಾಂಶಗಳು

  • ವೀಳ್ಯದೆಲೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನ ಸಿಗುತ್ತದೆ ಗೊತ್ತಾ?.
  • ವೀಳ್ಯದೆಲೆ ತಿನ್ನುವುದರಿಂದ ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್​ ಸಮಸ್ಯೆಗೆ ನಿಧಾನವಾಗಿ ಮುಕ್ಯಿ ನೀಡುತ್ತದೆ.
  • ಬಾಯುಣ್ಣು, ಹೊಟ್ಟೆ ಉಣ್ಣುನಿಂದ ಬಳಲುತ್ತಿರುವವರು ಈ ಎಲೆಯನ್ನು ತಿನ್ನುವುದು ಅವಾಯ್ಡ್​ ಮಾಡಿ
Betel leaves health benefits: ನಾನ್​ ವೆಜ್​ ಊಟವಾದ ನಂತರ ಎಲೆ ಅಡಿಕೆ ತಿನ್ನುವುದು ವಾಡಿಕೆ. ಈಗಿರುವ ಹಿಂದದಿನ ಕಾಲದ ಹಿರಿಯರಿಗೆ ಇದೊಂದು ವಾಡಿಕೆ. ಜೊತೆಗೆ ತಾಂಬೂಲ ಕೊಡೋದು, ದೇವರ ಕಲಶಕ್ಕೆ ಈ ಎಲೆ ಇಡೋದು ಒಂದು ಶುಭ ಸೂಚಕ. ಧಾರ್ಮಿಕ ಪೂಜಾ ವಿಧಿ ವಿಧಾನಕ್ಕೆ ಬಳಕೆಯಾಗುವ ಈ ವೀಳ್ಯದೆಲೆಯಲ್ಲಿ ಎಷ್ಟೆಲ್ಲ ಆರೋಗ್ಯಕಾರಿ ಪ್ರಯೋಜನವಿದೆ ಗೊತ್ತಾ?, ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ವೀಳ್ಯದೆಲೆಯಲ್ಲಿ ಚಾವಿಕೋಲ್​, ಯುಜೆನಾಲ್​ ಹಾಗೂ ಆಂಟಿ ಆಕ್ಸಿಡೆಂಟ್​​​ನಂತಹ ಪ್ರಮುಖ ರಾಸಾಯನಿಕ ಅಂಶಗಳು ಇವೆ. ಇವು ನಿಮ್ಮ ಬಾಯಿಯ ವಾಸನೆ, ಜೀರ್ಣಕ್ರಿಯೆ ಹಾಗೂ ಶೀತ-ಕೆಮ್ಮು ಕಡಿಮೆ ಮಾಡಲು ಸಹಕಾರಿ.

ಜೀರ್ಣಕ್ರಿಯೆ ಜೊತೆಗೆ ಹೇಗೆ ಕೆಲಸ ಮಾಡುತ್ತದೆ

ಭಾರಿ ಆಹಾರ ಪದಾರ್ಥವನ್ನು ಸೇವನೆ ಮಾಡಿದಾಗ ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯಲ್ಲಿ ಪಾನ್​ ಅಥವಾ ಎಲೆ ಅಡಿಕೆ, ಸುಣ್ಣ ಬೆರಸಿ ತಿನ್ನುತ್ತಾರೆ. ಇದರಲ್ಲಿರುವ ಅಂಶದಿಂದ ಬಾಯಿಯಲ್ಲಿ ಯಥೇಚ್ಛವಾಗಿ ಲಾಲಾರಸ ಉತ್ಪತ್ತಿಯಾಗುತ್ತದೆ. ಇದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಗ್ಯಾಸ್ಟ್ರಿಕ್​ಗೆ ಮದ್ದು

ಗ್ಯಾಸ್ಟ್ರಿಕ್​, ಮಲಬದ್ಧತೆ ಹಾಗೂ ಆಮ್ಲೀಯತೆ, ಉರಿಯೂತದಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಯನ್ನು ಸೇವಿಸುವುದು ಒಳಿತು. ಇದರಲ್ಲಿರುವ ಸಾರಭೂತ ತೈಲ ಜೀರ್ಣಕಾರಿ ಕಿಣ್ವಗಳ ಸ್ವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬವುದು ಹಾಗೂ ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗೆ ಮುಕ್ತಿ ನೀಡುತ್ತದೆ.

ಬಾಯಿ ದುರ್ವಾಸನೆಗೆ ಮುಕ್ತಿ

ವೀಳ್ಯದೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶವಿದೆ. ಇದನ್ನು ಜಗಿದು ತಿನ್ನುವುದರಿಂದ ಬಾಯಲ್ಲಿ ಸೃಷ್ಟಿಯಾಗುವ ಬ್ಯಾಕ್ಟೀರಿಯಾಗಳನ್ನು ಕೊಂದು ಬಾಯಿ ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತದೆ. ಹಲ್ಲು ಕುಳಿ, ವಸಡಿಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಕೆಮ್ಮಿಗೆ, ಗಂಟಲು ಕಿರಿಕಿರಿಗೆ ಮುಕ್ತಿ

ಆಯುರ್ವೇದದಲ್ಲಿ ಎಲೆಗೆ ಸುಣ್ಣ ಹಚ್ಚಿ ಕರುಳಿನ ಮೇಲೆ ಇಡುವುದು, ಅಥವಾ ಅರಳೆಣ್ಣೆ ಹಚ್ಚಿ ಇಡುವುದು ವಾಡಿಕೆ ಇದರಿಂದ ಹೊಟ್ಟೆಯಲ್ಲಾಗುತ್ತಿರುವ ಕಸಿವಿಸಿಗೆ ಒಕ್ಕಳಿನ ಮೂಲಕ ಪರಿಹಾರ ನೀಡುತ್ತದೆ ಎನ್ನುವುದು ನಂಬಿಕೆ. ಆದರೆ, ಗಂಟಲು ಕಿರಿಕಕಿರಿಯಂತಹ ಸಮಸ್ಯೆ ಕಾಣಿಸಿಕೊಂಡಾಗ ಎಲೆಗೆ ಜೇನು ತುಪ್ಪ ಹಚ್ಚಿ ತಿನ್ನುವುದು ಆರೋಗ್ಯಕ್ಕೆ ಸಹಕಾರಿ ಎನ್ನಲಾಗುತ್ತದೆ.
ತಲೆನೋವು ನಿವಾರಕ
ವೀಳ್ಯದ ಎಲೆಗಳು ತಲೆನೋವು ನಿವಾರಕ. ತಲೆ ನೋವನ್ನು ಕಡಿಮೆ ಮಾಡಲು ಬಳಸಬಹುದು. ಇದರಲ್ಲಿರುವ ನೈಸರ್ಗಿಕ ಗುಣಗಳು ತಂಪನ್ನು ನೀಡಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೀಳ್ಯದೆಲೆಯನ್ನು ಹೀಗೆ ತಿನ್ನಿ

  • ವೀಳ್ಯದೆಲೆ ಜೊತೆಗೆ ಸೋಂಪು, ತುಪ್ಪ, ಏಲಕ್ಕಿ ಜೊತೆಗೆ ಸೇವಿಸಬಹುದು.
  • ಊಟ ಮಾಡಿದ ಬಳಿಕ ಒಂದು ವೀಳ್ಯದೆಲೆಯನ್ನು ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ
  • ಹೊಟ್ಟೆ ಉಣ್ಣು, ಬಾಯಿಯಲ್ಲಿ ಪದೇ ಪದೆ ಗಾಯವಾಗುವುದಾದರೆ ಅಂತವರು ಎಲೆ ತಿನ್ನುವ ವಿಚಾರದಲ್ಲಿ ಗಂಭೀರ ಎಚ್ಚರಿಕೆ ವಹಿಸಿ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.