Foods for mental health  
ಲೈಫ್‌ಸ್ಟೈಲ್

ಆತಂಕ, ಒತ್ತಡ, ಕ್ಷಣಕ್ಕೆ ಬದಲಾಗುವ ಮೂಡ್​ನಿಂದ ಮುಕ್ತಿ ಬೇಕಾ?; ಮಾನಸಿಕ ಆರೋಗ್ಯ ಕಾಪಾಡುವ ಈ ಆಹಾರ ಸೇವಿಸಿ..Mental Health

ಪ್ರಮುಖ ಮುಖ್ಯಾಂಶಗಳು

  • ಮಾನಸಿಕ ಆರೋಗ್ಯ, ಕ್ಷಣಕ್ಕೆ ಬದಲಾಗುವ ಮೂಡ್​ ನಿಯಂತ್ರಿಸಲು ಏನು ಮಾಡಬೇಕು?.
  • ಮೆಗ್ನೀಶಿಯಂ ಅಂಶವುಳ್ಳ ಫುಡ್, ಒಮೆಗಾ-3 ಸಮೃದ್ಧವಾಗಿರುವ ಆಹಾರ ಸೇವಿಸುವಂತೆ ಸಲಹೆ.
  • ಬೆರ್ರಿ ಹಣ್ಣುಗಳು ಮತ್ತು ಗ್ರೀನ್ ಟೀ ಏಕಾಗ್ರತೆಯ ಕೊರತೆಯನ್ನು ನೀಗಿಸುತ್ತದೆ.
Foods for mental health: ಮಾನಸಿಕ ಖಿನ್ನತೆ, ಭಾವನೆಗಳು, ಒತ್ತಡವನ್ನು ಸಹಿಸಿಕೊಂಡು ಜೀವನ ನಡೆಸುವುದು ಇಂದಿನ ಕಾಲಘಟ್ಟದ ಜನರಿಗೆ ಕಷ್ಟ. ಮೆಟ್ರೋದಲ್ಲಿ ಅಳುವುದನ್ನು, ಬಸ್​​ಗಳಲ್ಲಿ ಗೆಳತಿ ಪಕ್ಕ ಕುಳಿತು ರೋದಿಸುವುದು. ರಸ್ತೆಗಳಲ್ಲಿ ಪೋನ್ ಹಿಡಿದು ಇನ್ಯಾರ ಬಳಿಯೋ ಕಿರುಚಾಡುವರನ್ನು ನಿತ್ಯ ನೋಡುತ್ತಲೇ ಇರುತ್ತೇವೆ. ಇದು ಪ್ರತಿಯೊಬ್ಬ ಮನುಷ್ಯನಿಗೂ ಕಾಡುವ ಸಾಮಾನ್ಯ ಸಮಸ್ಯೆ. ಇದಕ್ಕೆ ಮದ್ದೇನು ಎನ್ನುವುದನ್ನು ಪೌಷ್ಟಿಕತಜ್ಞರಾದ ನಮಾಮಿ ಅಗರ್ವಾಲ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.
ಇಂದಿನ ಧಾವಂತದ ಜೀವನಶೈಲಿಯಲ್ಲಿ ಅತಿಯಾದ ಆತಂಕ, ಮೂಡ್​ ಬದಲಾಗುವುದು ಸಾಮಾನ್ಯ ಈ ವೇಳೆ ಇವನ್ನು ನಿಭಾಯಿಸಲು ನಿದ್ರೆ ಮಾಡಿದರೆ ಸಾಕಾಗೋದಿಲ್ಲ. ಬದಲಾಗಿ ನಮ್ಮ ಆಹಾರ ಪದ್ಧತಿಯನ್ನೂ ಬದಲಾಯಿಸಿಕೊಳ್ಳಬೇಕು. ನಮ್ಮ ಜೀರ್ಣಾಂಗ ವ್ಯವಸ್ಥೆ ಹಾಗೂ ಮೆದುಳಿನ ಕಾರ್ಯ ವೈಖರಿಗೆ ನಾವು ತಿನ್ನುವ ಆಹಾರ ಸಹಕಾರಿಯಾಗುತ್ತದೆ. ಇದು ನಮ್ಮ ಮೂಡ್​, ಆತಂಕವನ್ನು ಆರೋಗ್ಯಕರವಾಗಿ ನಿಭಾಯಿಸುತ್ತದೆ ಎಂದಿದ್ದಾರೆ. ಉತ್ತಮವಾದ ಮೆದುಳಿನ ಆರೋಗ್ಯಕ್ಕೆ ಏನನ್ನು ತಿನ್ನಬೇಕು ಎಂಬುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.

ಆತಂಕ ನಿಭಾಯಿಸಲು ಈ ಫುಡ್​ ಬೆಸ್ಟ್​

ನಮ್ಮನ್ನು ಕಾಡುವ ಆತಂಕ ಮತ್ತು ದೇಹದ ನಡುವೆ ಸಂಬಂಧವಿದೆ. ಆಗಾಗ್ಗೆ ಎಲ್ಲ ವಿಚಾರಕ್ಕೂ ಆತಂಕ ಕಾಡುತ್ತಿದ್ದರೆ. ಮೆಗ್ನೀಶಿಯಂ ಅಂಶ ಸಮೃದ್ಧವಾಗಿರುವ ಚಿಯಾ ಬೀಜಗಳು, ಬಾದಾಮಿ, ಕುಂಬಳಕಾಯಿ ಬೀಜ, ಪಾಲಾಕ್​ ಸೊಪ್ಪು, ಡಾರ್ಕ್​ ಚಾಕೋಲೇಟ್ ತರಕಾರಿಯನ್ನು ತಿನ್ನುವುದು ಉತ್ತಮ. ಇದು ಮೆದುಳಿನ ನರವನ್ನು ಶಾಂತಗೊಳಿಸುವ ಮೂಲಕ, ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ನಮಾಮಿ ಬರೆದುಕೊಂಡಿದ್ದಾರೆ.

ಆಗಾಗ್ಗೆ ಬೇಸರವಾಗ್ತಿದ್ರೆ ಹೀಗೆ ಮಾಡಿ

ಕೆಲವೊಮ್ಮೆ ಕಾರಣವೇ ಇಲ್ಲದೆ ಬೇಸರವಾಗುತ್ತದೆ. ಅಳು ಬಂದಂತಾಗುತ್ತದೆ. ಕ್ಷುಲ್ಲಕ ಕಾರಣಕ್ಕೆ ಅಸಮಾಧಾನವಾಗುತ್ತದೆ. ಇಂತಹ ಸಂದರ್ಭದಲ್ಲಿ ವಿಟಮಿನ್​ ಡಿ ನಿಮ್ಮ ದೇಹಕ್ಕೆ ಸೇರಿಸಿಕೊಳ್ಳಬೇಕು. ನಿಮ್ಮ ದೇಹ ಮತ್ತು ಮೆದುಳು ಪ್ರಶಾಂತದಿಂದ ಕೂಡಿರಲು ಸೂರ್ಯನ ಬೆಳಕು, ಅಣಬೆ, ಮೀನು, ಬಾಳೆ ಹಣ್ಣು ತಿನ್ನುವುದು ವಿಟಮಿನ್​ ಡಿ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಚೆನ್ನಾಗಿದ್ದರೆ ಮೂಡ್ ಕೂಡ ಚೆನ್ನಾಗಿರುತ್ತದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಕರುಳನ್ನು ಆರೋಗ್ಯವಾಗಿಟ್ಟು, ಮೆದುಳಿಗೆ ಧನಾತ್ಮಕ ಸಂಕೇತಗಳನ್ನು ರವಾನಿಸುತ್ತದೆ.

ಏಕಾಗ್ರತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?

ಮೊಬೈಲ್​ ಬಂದ ನಂತರ ಅದರಲ್ಲಿರುವ ರೀಲ್ಸ್ ನೋಡುತ್ತಾ ಕುಳಿತು ಬಿಡುತ್ತೇವೆ. ಕೆಲಸ ಮಾಡಲು ಕುಳಿತರೆ ಗಮನ ಹರಿಸಲು ಸಾಧ್ಯವಾಗೋದಿಲ್ಲ. ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡುವುದು ಎಲ್ಲವೂ ಮರೆತಂತೆ ಆಗಿ, ಮತ್ತೆ ನೆನಪಾಗುವುದು ಇಂತಹ ಸಮಸ್ಯೆ ಕಾಡುತ್ತಿದ್ದರೆ, ಬ್ಲೂಬೆರ್ರಿ, ಸ್ಟ್ರಾಬೆರಿಗಳಂತಹ ಹಣ್ಣು, ಗ್ರೀನ್​ ಟೀ. ಮೊಟ್ಟೆ ಹಾಗೂ ಧಾನ್ಯಗಳನ್ನು ಸೇವಿಸಿ ಎನ್ನುತ್ತಾರೆ ಆಹಾರ ತಜ್ಞರು, (ಏಜೆನ್ಸೀಸ್).