ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಒಲೆಯಿಲ್ಲ, ಒತ್ತಡವಿಲ್ಲ: ಮನೆಯಲ್ಲಿ ತಯಾರಿಸಿ ಕ್ರಿಸ್​ಮಸ್​​ ಕೇಕ್​! Cake

Recipe: ಕ್ರಿಸ್​ಮಸ್​ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬಂದೇ ಬಿಡ್ತು. ಅನೇಕ ಜನರಿಗೆ ಕೇಕ್​ ಕತ್ತರಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ, ಕೆಲವರು ಬೇಕರಿಯಲ್ಲಿ ಸಿಗುವಂತಹ ಕೇಕುಗಳು ಇಷ್ಟವಾಗಿರುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಓವನ್​​, ಒಲೆ ಇಲ್ಲದೇ 20 ನಿಮಿಷಗಳಲ್ಲಿ ಈ ಕೇಕನ್ನು ಮಾಡಿ ಸೇವಿಸಿರಿ.

ಬೇಕಾಗುವ ಪದಾರ್ಥಗಳು

* 200 ಗ್ರಾಂ ಡಾರ್ಕ್ ಚಾಕೊಲೇಟ್
* 100 ಗ್ರಾಂ ಬೆಣ್ಣೆ
* 1/2 ಕಪ್ ಹಾಲು
* 300 ಗ್ರಾಂ ಒಣಗಿದ ಹಣ್ಣುಗಳು
* 200 ಗ್ರಾಂ ಪುಡಿಮಾಡಿದ ಬಿಸ್ಕತ್ತು
* 1 ಚಮಚ ಮಿಕ್ಸ್ಡ್ ಸ್ಪೈಸ್ (ದಾಲ್ಚಿನ್ನಿ, ಜಾಯಿಕಾಯಿ, ಏಲಕ್ಕಿ ಪೌಡರ್)
* ಚೆರ್ರಿ, ನಟ್ಸ್ ಅಥವಾ ಪೌಡರ್ ಸುಗರ್

ಮಾಡುವ ವಿಧಾನ

ಮೊದಲು ಒಂದು ಬಟ್ಟಲಿಗೆ ಡ್ರೈ ಫ್ರೂಟ್ಸ್​ ಹಾಕಿ ಅದನ್ನು ಯಾವುದಾದರೂ ಜ್ಯೂಸ್​ನಲ್ಲಿ 2 ಗಂಟೆ ನೆನಸಿಡಿ. ನಂತರ ಒಂದು ಬೌಲ್​ಗೆ ಚಾಕೊಲೇಟ್ ಮತ್ತು ಬೆಣ್ಣೆಯನ್ನು ಹಾಕಿ ಅದನ್ನು ಕರಗಿಸಿಕೊಳ್ಳಿ. ಈ ಮಿಶ್ರಣಕ್ಕೆ ಹಾಲು, ಸ್ಪೈಸ್ ಪೌಡರ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಅದಕ್ಕೆ ಬಿಸ್ಕತ್ತು ಪುಡಿ, ನೆನೆಸಿದ ಡ್ರೈ ಫ್ರೂಟ್ಸ್ ಮತ್ತು ನಟ್ಸ್‌ಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ದಪ್ಪವಾಗಿಟ್ಟುಕೊಳ್ಳಿ.
ಒಂದು ಕೇಕ್ ಟಿನ್​ಗೆ ಬೆಣ್ಣೆ ಹಚ್ಚಿ ಮಿಶ್ರಣವನ್ನು ಹಾಕಿ ಅದಕ್ಕೆ ಚೆರ್ರಿ, ನಟ್ಸ್ ಅಥವಾ ಚಾಕೊಲೇಟ್ ಡ್ರಿಜಲ್ ಹಾಕಿ ಡೆಕೊರೇಟ್ ಮಾಡಿ. ಫ್ರಿಜ್​ನಲ್ಲಿ 4-6 ಗಂಟೆ ರಾತ್ರಿಯಿಡೀ ಫ್ರಿಜ್​ನಲ್ಲಿಡಿ ನಂತರ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.