ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ನಿಮ್ಮ ಬಾತ್​ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿದೆಯಾ..? ಈ ಒಂದು ರುಪಾಯಿ ವಸ್ತುವಿನಿಂದ ಸಿಗಲಿದೆ ಮುಕ್ತಿ... Bathroom

Bathroom: ಕೆಲವೊಮ್ಮೆ ಸ್ನಾನಗೃಹಗಳು ಮತ್ತು ಶೌಚಾಲಯಗಳಲ್ಲಿನ ಕೆಟ್ಟ ವಾಸನೆಗಳು ಜನರನ್ನು ಕಾಡುತ್ತದೆ. ಅವುಗಳನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ದುಬಾರಿ ಫ್ರೆಶ್ನರ್​ಗಳನ್ನು ಬಳಸಿದರೂ ಕೆಟ್ಟ ವಾಸನೆಗಳು ಬರುತ್ತವೇ ಇರುತ್ತವೆ. ಆದರೆ, ಈ ಒಂದು ರೂಪಾಯಿಯ ವಸ್ತುವು ನಿಮ್ಮ ಸ್ನಾನದ ಕೋಣೆಯನ್ನು ಸುಗಂಧಗೊಳಿಸುತ್ತದೆ. ಹೌದು, ಯಾವುದೇ ರಾಸಾಯನಿಕಗಳಿಲ್ಲದೇ, ಕಡಿಮೆ ವೆಚ್ಚದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ ಬನ್ನಿ....
ನಾವು ಈಗ ಮಾತನಾಡುತ್ತಾ ಇರುವುದು ಒಂದು ರೂಪಾಯಿ ಬೆಂಕಿ ಕಡ್ಡಿ ಬಗ್ಗೆ. ಇದರಿಂದ ಹೇಗಪ್ಪ ದುರ್ವಾಸನೆ ಹೋಗಿಸೋದು ಅಂತ ಯೋಚನೆ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ. ವಾಸ್ತವವಾಗಿ, ಸಕ್ರಿಯ ಇದ್ದಿಲು ಬೆಂಕಿಕಡ್ಡಿಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯ ಇದ್ದಿಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ವಿಶೇಷ ಉತ್ಪಾದನಾ ವಿಧಾನವು ಲಕ್ಷಾಂತರ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ.
ಈ ಬೆಂಕಿ ಕಡ್ಡಿಯು ಗಾಳಿಯಿಂದ ತೇವಾಂಶ ಮತ್ತು ವಾಸನೆಯನ್ನು ಆಯಸ್ಕಾಂತದಂತೆ ಆಕರ್ಷಿಸಿ ಒಳಗೆ ಹಿಡಿದಿಟ್ಟುಕೊಳ್ಳುತ್ತದೆ. ಇದು ವಾಸನೆಯನ್ನು ಮರೆಮಾಚುವುದಲ್ಲದೇ, ಅದನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ. ಹಾಗಿದ್ದರೆ, ಬೆಂಕಿಕಡ್ಡಿಗಳಿಂದ ನೈಸರ್ಗಿಕ ಗಾಳಿ ಶುದ್ಧೀಕರಣವನ್ನು ಹೇಗೆ ತಯಾರಿಸಬೇಕೆಂದು ನೋಡೋಣ ಬನ್ನಿ...

ನೈಸರ್ಗಿಕ ಗಾಳಿ ಶುದ್ಧೀಕರಣ ಯಂತ್ರವನ್ನು ತಯಾರಿಸುವುದು ಹೇಗೆ?

* ಬಾತ್​ರೂಮ್​ನಲ್ಲಿ ನೈಸರ್ಗಿಕ ಗಾಳಿ ಶುದ್ಧೀಕರಣ ಮಾಡಲು ಯಂತ್ರವನ್ನು ತಯಾರಿಸಲು, ನಿಮಗೆ ಬೇಕಾಗಿರುವುದು ಖಾಲಿ ಬೆಂಕಿಕಡ್ಡಿ ಪೆಟ್ಟಿಗೆ ಮತ್ತು ಸಕ್ರಿಯ ಇದ್ದಿಲು ಮಾತ್ರೆಗಳು
* ಇದ್ದಿಲು ಮೆಡಿಕಲ್​ಗಳು ಅಥವಾ ಆನ್​ಲೈನ್​ ಪ್ಲಾಟ್​ಫಾರ್ಮ್​ಗಳಲ್ಲಿ ಸಿಗುತ್ತವೆ. ಸುಮಾರು 5 ಇದ್ದಿಲು ಮಾತ್ರೆಗಳನ್ನು ನುಣ್ಣಗೆ ಪುಡಿಮಾಡಬೇಕು
* ಪುಡಿಮಾಡಿದ ಇದ್ದಿಲುಗಳನ್ನು ಬೆಂಕಿಕಡ್ಡಿ ಪೆಟ್ಟಿಗೆಗೆ ತುಂಬಿಸಿ ಪೆಟ್ಟಿಗೆಯನ್ನು ಮುಚ್ಚಿ ಮತ್ತು ಸೂಜಿ ಅಥವಾ ಪಿನ್‌ನಿಂದ ಮೇಲ್ಭಾಗದಲ್ಲಿ ಸಣ್ಣ ರಂಧ್ರಗಳನ್ನು ಮಾಡಿಕೊಳ್ಳಬೇಕು
* ಗಾಳಿಯು ಈ ರಂಧ್ರಗಳ ಮೂಲಕ ಹಾದುಹೋಗುವುದರ ಜೊತೆಗೆ ರೂಂನ್ನು ಸ್ವಚ್ಛಗೊಳಿಸುತ್ತದೆ
* ಈ ವಿಧಾನವನ್ನು 2 ರಿಂದ 3 ತಿಂಗಳು ನಿರಂತರವಾಗಿ ಅನುಸರಿಸಿ. ಇದು ತೇವಾಂಶ ಮತ್ತು ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಈ ಪಾತ್ರೆಯನ್ನು ಸರಿಯಾದ ಸ್ಥಳದಲ್ಲಿ ಸಂಗ್ರಹಿಸುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನು ಶೌಚಾಲಯ ತೊಟ್ಟಿಯ ಹಿಂದೆ ಅಥವಾ ಪಕ್ಕದಲ್ಲಿ, ಕಪಾಟಿನಲ್ಲಿ ನೇರವಾಗಿ ನೆಲದ ಮೇಲೂ ಇಡಬಹುದು. ಇದನ್ನು ನಿಮ್ಮ ಮಕ್ಕಳು ತಲುಪದಂತೆ ನೋಡಿಕೊಳ್ಳಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.