ಲೈಫ್‌ಸ್ಟೈಲ್

ಸದಾ ಯಂಗ್ ಆಗಿ ಕಾಣಲು ರಾತ್ರೆ ಮಲಗುವ ಮುನ್ನ ಈ ಸಲಹೆಗಳನ್ನು ಅನುಸರಿಸಿ...

Webdesk - Savina Naik

ಬೆಂಗಳೂರು: ನೀವು ಯೌವನದ ಹೊಳಪಿನಿಂದ ಸುಂದರವಾದ ಚರ್ಮವನ್ನು ಹೊಂದಲು ಬಯಸಿದರೆ ಪ್ರತಿದಿನ ಮಲಗುವ ಮೊದಲು ನಿಮ್ಮ ತ್ವಚೆಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ.  ಚರ್ಮದ ಆರೈಕೆಗೆ ಎನ್ನುವ ಬಗ್ಗೆ ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...

ನಿಮಗೆ ಮೇಕಪ್ ಹಾಕಿಕೊಳ್ಳುವ ಅಭ್ಯಾಸವಿದ್ದರೆ ರಾತ್ರಿ ಮಲಗುವ ಮುನ್ನ  ತೆಗೆಯಿರಿ. ಇದು ಚರ್ಮವನ್ನು ಉಸಿರಾಡಲು ಸಹಾಯ ಮಾಡುತ್ತದೆ.

ರಾತ್ರಿ ಮಲಗುವ ಮುನ್ನ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಬಿಸಿನೀರಿನ ಬದಲು ತಣ್ಣೀರಿನಿಂದ ಮುಖ ತೊಳೆಯುವುದು ತುಂಬಾ ಪ್ರಯೋಜನಕಾರಿ.

ರೋಸ್ ವಾಟರ್ ನಲ್ಲಿ ಗ್ಲಿಸರಿನ್ ಬೆರೆಸಿ ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ತ್ವಚೆಯ ಮೇಲಿನ ಮೊಡವೆ, ಕಲೆಗಳು ಕಡಿಮೆಯಾಗುತ್ತವೆ.

ಹಗಲಿನಲ್ಲಿ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಬಳಸುವಂತೆಯೇ ರಾತ್ರಿಯಲ್ಲಿ ಮಾಯಿಶ್ಚರೈಸರ್ ಅನ್ನು ಅನ್ವಯಿಸುವುದು ಮುಖ್ಯವಾಗಿದೆ.

ಸಾಧ್ಯವಾದರೆ ಅಲೋವೆರಾ ಜೆಲ್​ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿದರೆ ಮುಖದಲ್ಲಿ ಯಾವುದೇ ಕಲೆ ಇದ್ದರೆ ಕಡಿಮೆ ಆಗುತ್ತದೆ.

ನಿಮ್ಮ ತ್ವಚೆಯನ್ನು ಕಲುಷಿತ ಗಾಳಿ, ಬಿಸಿಲು, ಮಳೆ, ಧೂಳಿನಿಂದ ರಕ್ಷಿಸಲು, ಸುಂದರ, ನಯವಾದ ತ್ವಚೆಯನ್ನು ಹೊಂದಲು ಮತ್ತು ತ್ವಚೆಯ ಯೌವನವನ್ನು ಕಾಪಾಡಿಕೊಳ್ಳಲು ರಾತ್ರಿಯಲ್ಲೂ ತ್ವಚೆಯ ಆರೈಕೆಯನ್ನು ಮಾಡುವುದು ಬಹಳ ಮುಖ್ಯ. ಹೊಳೆಯುವ, ಯೌವನಭರಿತ ತ್ವಚೆಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.