ಮಂಗಳೂರು: ಯುವಜನರಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುತ್ತೂರಿನ ಪಡವನ್ನೂರು ಗ್ರಾಮದಲ್ಲಿ ನವವಿವಾಹಿತೆ ಬಲಿಯಾಗಿದ್ದಾರೆ.
ಪುತ್ತೂರು ತಾಲೂಕು ಪಡವನ್ನೂರಿನ ಪದಡ್ಕದ ಪುಷ್ಪಾ ಮೃತಪಟ್ಟಿದ್ದಾರೆ. ಪುಷ್ಪಾ ಅವರಿಗೆ ಮಂಗಳವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗಮಧ್ಯೆ ಮೃತಪಟ್ಟರು ಎನ್ಲಾಗಿದೆ. ಪುಷ್ಪಾ ಅವರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ಪತಿ ಮತ್ತು ತವರು ಮನೆಯಲ್ಲಿ ದುಃಖ ಮಡುಗಟ್ಟಿತ್ತು.