Peaceful sleep: ನೀವು ಪ್ರತಿನಿತ್ಯ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದೀರಾ? ಮಲಗಿದರೂ ಆಗ್ಗಾಗೆ ಎಚ್ಚರಗೊಳ್ಳುತ್ತೀರಾ? ಆಧುನಿಕ ಜೀವನಶೈಲಿ, ನಿರಂತರ ಪರದೆಯ ನೋಟ, ಮಾನಸಿಕ ಒತ್ತಡ ಇವೆಲ್ಲವೂ ನಿದ್ರೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಸರಿಯಾಗಿ ನಿದ್ರೆ ಮಾಡದ ಕಾರಣ ಜನರು ಒತ್ತಡ, ಆಯಾಸ, ಕಿರಿಕಿರಿ ಏಕಾಗ್ರತೆಯ ಮೇಲೆ ಕೊರತೆ ಇಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ನಿಮ್ಮ ದೇಹದ ಕೆಲವು ಭಾಗಗಳಲ್ಲಿ ಒತ್ತಡ ಹೇರುವುದರಿಂದ ನೀವು ಆರಾಮವಾಗಿ ಮಲುಗಬಹುದು ಎಂದರೆ ನೀವು ನಂಬುತ್ತೀರಾ? ಹಾಗಿದ್ದರೆ ಈ ರೀತಿ ಮಾಡಿ ಆರಾಮದಾಯಕ ನಿದ್ರೆ ಮಾಡಿ...
ಈ ವಿಧಾನವನ್ನು ಆಕ್ಯಪ್ರೆಶರ್ ಥೆರಪಿ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿನ ಶಕ್ತಿಯ ಹರಿವನ್ನು ಸರಾಗಗೊಳಿಸುತ್ತದೆ ಹಾಗೆಯೇ ಮನಸ್ಸು ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ. ಈ ಚಿಕಿತ್ಸಾ ವಿಧಾನವು ನಿದ್ರೆಯನ್ನು ಸುಧಾರಿಸುವುದಲ್ಲದೇ, ಒತ್ತಡ, ತಲೆನೋವು, ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಿಂದೂ ದೇವರುಗಳ ಮತ್ತು ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮತ್ತು ಚೀನಾ ನಿರ್ಮಿತ ಪಟಾಕಿಗಳನ್ನು ನಿಷೇಧಿಸುವ ಕುರಿತು
ಕತ್ತಿನ ಎರಡೂ ಬದಿ ಮಸಾಜ್ ಮಾಡುವುದರಿಂದ ಇದು ಕಾರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡಿ, ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ಹಾಗೂ ಮನಸ್ಸು ಶಾಂತವಾಗುತ್ತದೆ. ಇದು ಆಯಾಸ, ಒತ್ತಡ, ಮಾನಸಿಕ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ 5 ನಿಮಿಷ ಕತ್ತಿನ ಹಿಂಭಾಗವನ್ನು ಮಸಾಜ್ ಮಾಡಿ ಇದು ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ.
ಹೆಬ್ಬೆರಳು ಮತ್ತು ತೋರು ಬೆರಳು ನಡುವೆ ಇರುವಂತಹ ಪ್ರದೇಶವನ್ನು ಹ್ಯಾಂಡ್ ವ್ಯಾಲಿ ಪಾಯಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಮಸಾಜ್ ಮಾಡುವುದರಿಂದ ಇದು ಎಂಡಾರ್ಫಿನ್ ಹಾರ್ಮೋನುಗಳನ್ನು ಹೆಚ್ಚಿಸಿ, ಕಾರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿನ ಒತ್ತಡ, ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ 5 ನಿಮಿಷ ಈ ಪ್ರದೇಶವನ್ನು ಮಸಾಜ್ ಮಾಡಿ.
ಪ್ರತಿನಿತ್ಯ ಹುಬ್ಬುಗಳ ನಡುವಿನ ಮಸಾಜ್ ಮಾಡುವುದರಿಂದ ನಿದ್ರೆಯನ್ನು ಸುಧಾರಿಸಬಹುದು. ಈ ರೀತಿ ಮಾಡುವುದರಿಂದ ಇದು ಕಾರ್ಟಿಸಾಲ್ ಹಾರ್ಮೋನ್ ಮಟ್ಟವನ್ನು ಕಡಿಮೆಗೊಳಿಸಿ, ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ನಿಮ್ಮಲ್ಲಿರುವ ಒತ್ತಡ, ತಲೆನೊವನ್ನು ಕಡಿಮೆ ಮಾಡಿ ಶಾಂತ ರೀತಿಯಿಂದ ಮಲಗುವಂತೆ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಪ್ರೆಶರ್ ಕುಕ್ಕರ್ ಹೆಚ್ಚು ಲೀಕ್ ಆಗುತ್ತಿದೆಯೇ? ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ… Pressure cooker
ಮಣಿಕಟ್ಟಿನ ಒಳಭಾಗದಲ್ಲಿರುವ ಈ ಬಿಂದುವು ನರಮಂಡಲವನ್ನು ಸಮತೋಲಗೊಳಿಸುತ್ತದೆ. ಮಲಗುವ ಮುನ್ನ ಈ ಪ್ರದೇಶವನ್ನು ಲಘುವಾಗಿ ಮಸಾಜ್ ಮಾಡಿ ಇದು ಹೃದಯದ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದಲ್ಲಿ ರಕ್ತಸಂಚಾರವನ್ನು ಸುಧಾರಿಸುತ್ತದೆ.
ಹೊಕ್ಕಳಿನ ಮೇಲೆ ಲಘುವಾಗಿ ಮಸಾಜ್ ಮಾಡುವುದರಿಂದ ಇದು ಉಸಿರಾಟವನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಮಲಗುವ ಮುನ್ನ ಈ ಪರಿಹಾರವನ್ನು ಮಾಡುವುದರಿಂದ ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ