ಲೈಫ್‌ಸ್ಟೈಲ್

ಐಸ್ ಕ್ರೀಂನಲ್ಲಿ ಮಾನವನ ಬೆರಳು…ಬೆಚ್ಚಿಬಿದ್ದ ವೈದ್ಯ ಮಾಡಿದ್ದೇನು?

ಮುಂಬೈ: ತಿನ್ನುತ್ತಿದ್ದ ಐಸ್ ಕ್ರೀಂನಲ್ಲಿ ಮಾನವನ ಬೆರಳು ನೋಡಿದ ವೈದ್ಯರು ಬೆಚ್ಚಿಬಿದ್ದಾರೆ. ಮುಂಬೈ ನಗರದಲ್ಲಿ ಈ ಘಟನೆ ನಡೆದಿದೆ.

ಮುಂಬೈನ ವೆಸ್ಟ್ ಮಲಾಡ್‌ನಲ್ಲಿ ವಾಸಿಸುವ ವೈದ್ಯರೊಬ್ಬರು (26) ಮಧ್ಯಾಹ್ನದ ಊಟದ ನಂತರ ಬಟರ್ ಸ್ಕಾಚ್ ಕೋನ್ ಐಸ್ ಕ್ರೀಂಗಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರು. ಮನೆಗೆ ಬಂದ ಐಸ್ ಕ್ರೀಂ ತಿನ್ನುವಾಗ ಅದರಲ್ಲಿ ಅರ್ಧ ಇಂಚು ಬೆರಳು ಇರುವುದು ಗಮನಕ್ಕೆ ಕಂಡುಬಂದಿದೆ.

ಬೆರಳಿಗೆ ಉಗುರು ಮತ್ತು ತಿರುಳಿರುವ ಚರ್ಮ ಇದ್ದುದರಿಂದ ವೈದ್ಯರು ಗಾಬರಿಗೊಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಪೊಲೀಸರು ಬೆರಳನ್ನು ಬೆರಳಚ್ಚು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ ಇದು ಯಾರ ಬೆರಳು? ಇದು ಮನುಷ್ಯನದೇ? ಅದು ಐಸ್ ಕ್ರೀಂಗೆ ಹೇಗೆ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಐಸ್ ಕ್ರೀಂ ಕಂಪನಿಯ ಸಿಬ್ಬಂದಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.