ಲೈಫ್‌ಸ್ಟೈಲ್

ಹಂಪಿ, ಬೇಲೂರು ಮಾತ್ರವಲ್ಲ; ಒಂದಕ್ಕಿಂತ ಒಂದು ಭಿನ್ನವಾಗಿರುವ ಭಾರತದಲ್ಲಿರುವ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

ವಿಜಯವಾಣಿ ಸುದ್ದಿ ಜಾಲ

ಚೆನ್ನಕೇಶವ ದೇವಾಲಯ

ಮೈಸೂರಿನಿಂದ 35-38 ಕಿ.ಮೀ ದೂರದಲ್ಲಿ, ಕಾವೇರಿಯ ನದಿ ದಡದಲ್ಲಿ ಚೆನ್ನಕೇಶವ ದೇವಾಲಯವಿದೆ. 12ನೇ ಶತಮಾನದ ಪ್ರಸಿದ್ಧ ವಿಷ್ಣು ದೇವಾಲಯ ಇದಾಗಿದೆ. ಹೊಯ್ಸಳರ ಪವಿತ್ರ ಸಮೂಹ ಭಾಗ ಎಂದು ಗುರುತಿಸಲಾಗಿದೆ. 2023ರಲ್ಲಿ ಯುನೆಸ್ಕೋದಿಂದ ಪರಂಪರೆಯ ತಾಣ ಎನ್ನುವ ಮಾನ್ಯತೆ ಪಡೆದುಕೊಂಡಿದೆ. ಇಲ್ಲಿನ ಕಂಬಗಳ ಮೇಲೆ ಅದ್ಭುತವಾದ ಕೆತ್ತನೆಗಳಿವೆ. ಕಂಬಗಳನ್ನು ಹೂವಿನ ವಿನ್ಯಾಸದಿಂದ ಕೆತ್ತನೆ ಮಾಡಲಾಗಿದೆ.

ರಣಕ್‌ಪುರ ಜೈನ ದೇವಾಲಯ

ರಣಕ್‌ಪುರ ಜೈನ ದೇವಾಲಯ ರಾಜಸ್ಥಾನದ ಅರಾವಳಿ ಬೆಟ್ಟದಲ್ಲಿ ನೆಲೆಗೊಂಡಿದೆ. ಇದು 15ನೇ ಶತಮಾನದಲ್ಲಿ ಕಟ್ಟಲಾದ ರಣಕ್​ಪುರ ಜೈನ ದೇವಾಲಯವಾಗಿದೆ. ಇದನ್ನು ಜೈನ ಧರ್ಮದ ಮೊದಲ ತೀರ್ಥಂಕರ ಭಗವಾನ್​ ಆದಿನಾಥನಿಗೆ ಸಮರ್ಪಿಸಲಾಗಿದೆ. 48,00 ಚದರ ಅಡಿ ವಿಸ್ತೀರಣ ಸಂಕೀರ್ಣದಲ್ಲಿ 1,444 ಕಂಬಗಳಿವೆ,. ಅಚ್ಚರಿ ಎಂದರೆ ಇಲ್ಲಿರುವ ಕಂಬಗಳ ಮೇಳೆ ಒಂದೇ ರೀತಿಯ ಕೆತ್ತನೆ ಇಲ್ಲ. ಮುಖ್ಯ ಗರ್ಭಗುಡಿಯಲ್ಲಿ ನಾಲ್ಕು ದಿಕ್ಕಿಗೂ ಮುಖ ಮಾಡಿರುವ ಆದಿನಾಥನ ನಾಲ್ಕು ಮುಖ ಇದೆ. ಸಂಕೀರ್ಣದಲ್ಲಿ 29 ಸಬಾಂಗಣ ಮತ್ತು 80 ಗುಮ್ಮಟ ಇದೆ.

ಸಾವಿರ ಕಂಬದ ದೇವಾಲಯ

ರುದ್ರೇಶ್ವರ ಸ್ವಾಮಿ ದೇವಾಲಯ ಎಂತಲೂ ಕರೆಸಿಕೊಳ್ಳುವ ಸಾವಿರ ಕಂಬದ ದೇವಾಲಯವು ತೆಲಂಗಾಣದ ಹನುಮಕೊಂಡದಲ್ಲಿದೆ. ಕಾಕತೀಯ ದೊರೆ ರುದ್ರದೇವನಿಂದ ನಿರ್ಮಿಸಲ್ಪಟ್ಟ ಹಿಂದೂ ದೇವಾಲಯ ಎಂದು ನಂಬಲಾಗಿದೆ. ತ್ರಿಕೂಟಾಲು ಶೈಲಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.

ಐರಾವತೇಶ್ವರ ದೇವಾಲಯ

ತಮಿಳುನಾಡಿನ ದಾರಾಸುರಂನಲ್ಲಿರುವ ಚೋಳರ ಕಾಲದ ಐರಾವತೇಶ್ವರ ದೇವಾಲಯ. ಇದನ್ನು ರಾಜರಾಜ ಚೋಳ2 ನಿರ್ಮಿಸಿದ್ದು ಎನ್ನಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಗ್ರೇಟ್ ಲಿವಿಂಗ್​ ಚೋಳ ದೇವಾಯಲಯದ ಗುಂಪಿಗೆ ಇದು ಸೇರಿದೆ. ಬಿಳಿ ಆನೆಯಾದ ಐರಾವತ ಇಲ್ಲಿ ಶಿವನನ್ನು ಪೂಜಿಸಿ ತನ್ನ ಶಾಪ ವಿಮೋಚನೆ ಪಡೆದುಕೊಂಡಿತು ಎನ್ನುವ ಪ್ರತೀತಿ ಇದೆ.

ವೀರಭದ್ರ ದೇವಾಲಯ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಾಲಯ ಇದೆ. ಶಿವನ ಉಗ್ರರೂಪವಾದ ವೀರಭದ್ರನಿಗೆ ಸಮರ್ಪಿತವಾದ ಹದಿನಾರನೇ ಶತಮಾನದ ಹಿಂದೂ ದೇವಾಲಯ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅಚ್ಯುತ ದೇವಾರಾಯ ಆಳ್ವಿಕೆಯಲ್ಲಿ ನಿರ್ಮಿಸಿದ ದೇವಾಲಯ. ಇದು ಕೂರ್ಮ ಶೈಲದ ಮೇಲೆ ಇದು ರೂಪುಗೊಂಡಿದೆ. ತೂಗುಕಂಬ, ಏಕಶಿಲಾ ನಂದಿ, ವರ್ಣ ಚಿತ್ರಗಳು ಇಲ್ಲಿ ಫೇಮಸ್ಸು, (ಏಜೆನ್ಸೀಸ್).