ಲೈಫ್‌ಸ್ಟೈಲ್

ಎಲೆಯಲ್ಲಿನ ಔಷಧೀಯ ಗುಣಗಳಿಂದ ಮಧುಮೇಹ ನಿಯಂತ್ರಿಸಿ!

ಮಧುಮೇಹ ಎನ್ನುವುದು, ದುರದೃಷ್ಟಕರ ರೋಗ ಎಂದರೆ ತಪ್ಪಾಗ ಲಾರದು. ಈ ಕಾಯಿಲೆ ಬೇರೆ ಕಾಯಿಲೆಗಳಂತೆ ಬಂದು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಈ ಕಾಯಿಲೆ ಕಾಣಿಸಿಕೊಂಡ ಬಳಿಕ, ಇದರ ಜೊತೆಗೆಯೇ ಜೀವನ ನಡೆಸುವ ಪರಿಸ್ಥಿತಿ ಬಂದೊದಗುತ್ತದೆ.
ಹೀಗಾಗಿ ಈ ಕಾಯಿಲೆ ಕಾಣಿಸಿಕೊಂಡವರು, ಕಟ್ಟುನಿಟ್ಟಿನ ಆಹಾರ ಪದ್ಧತಿ, ಆರೋಗ್ಯಕಾರಿ ಜೀವನಶೈಲಿ, ವೈದ್ಯರು ನೀಡಿರುವ ಮಾತ್ರೆಗಳು, ಸಲ ಹೆಗಳು ಹಾಗೂ ಕೆಲವೊಂದು ಮನೆಮದ್ದುಗಳನ್ನು ಸರಿಯಾಗಿ ಅಸು ಸರಿಸಿ ಕೊಂಡು ಹೋದರೆ, ಖಂಡಿತವಾಗಿಯೂ ಕೂಡ, ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ.


ಮಧುಮೇಹ ನಿಯಂತ್ರಿಸೋಕೆ ತುಳಸಿ ಎಲೆ ತುಂಬಾ ಉಪಯುಕ್ತ ಹೇಗೆ ಅಂತೀರಾ?
ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳ ಭಂಡಾ ರವೇ ಇದೆ. ಹಾಗಾಗಿ ತುಳಸಿ ಎಲೆಗಳನ್ನು ಚಹಾ ಮಾಡುವಾಗ, ಅಥವಾ ಖಾಲಿ ಹೊಟ್ಟೆಗೆ ಒಂದೆರಡು ಎಲೆಗಳನ್ನು ಚೆನ್ನಾಗಿ ಜಗಿದು, ಅದರ ರಸವನ್ನು ಹೀರುತ್ತಾ ಬಂದರೂ ಕೂಡ ತಿಂದರೂ ಸಾಕು, ದೇಹದ ರೋಗನಿರೋಧಕ ಶಕ್ತಿ ಬಲವಾ ಗುತ್ತದೆ.

ಇದರಿಂದ ದೀರ್ಘಕಾಲದ ಕಾಯಿಲೆಗಳನ್ನು ನಿಯಂ ತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ. ಪ್ರಮುಖ ವಾಗಿ ಮಧುಮೇಹ ರೋಗಿಗಳು, ಈ ಮೇಲೆ ತಿಳಿಸಿರುವ ಟಿಪ್ಸ್ ಅನ್ನು ಅನು ಸರಿಸಿದರೆ, ರಕ್ತದಲ್ಲಿ ಕಂಡು ಬರುವ ಗ್ಲುಕೋಸ್ ಹಾಗೂ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು.
ಸಾಧ್ಯವಾದರೆ, ಟೀ-ಕಾಫಿ ಕುಡಿಯುವ ಬದಲು, ತುಳಸಿ ಎಲೆಗಳ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂ ಡರೆ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ನೆರವಾಗುತ್ತದೆ.


ರಿ ಬೇವಿನ ಎಲೆಗಳಲ್ಲಿ ವಿಟಮಿನ್ ಸಿ ಹಾಗೂ ಬೀಟಾ-ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳನ್ನು ನಿಯಂತ್ರಣ ಮಾಡುವ ತಾಕತ್ತು, ಈ ಎಲೆಗಳಲ್ಲಿ ಕಂಡು ಬರುತ್ತದೆ ಎಂದರೆ ಅಚ್ಚರಿ ಯಾಗುತ್ತದೆ
ಪ್ರಮುಖವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಿ ಮಧುಮೇಹದ ಲಕ್ಷಣಗಳು ಹೆಚ್ಚಾಗದಂತೆ ನೋಡಿ ಕೊಂಡು, ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತದೆ.