ಲೈಫ್‌ಸ್ಟೈಲ್

ಮನೋಲ್ಲಾಸ: ಮರೆಯದಿರು ಮನವೇ...

|ಚಿದಂಬರ ಮುನವಳ್ಳಿ, ಬೆಳಗಾವಿ

ಅದು 1937ನೇ ಇಸ್ವಿಯ ಚಳಿಗಾಲ. ಲಂಡನ್​ ನಗರದ ಚೆಲ್ಸಿಯಾ ಹಾಗೂ ಚಾರಲ್ಟನ್​ ುಟ್​ಬಾಲ್​ ಕ್ಲಬ್​ ತಂಡಗಳ ನಡುವೆ ನಡೆಯಲಿರುವ ರೋಮಾಂಚಕಾರಿ ಹಣಾಹಣಿ ನೋಡಲು ಸ್ಟ್ಯಾಂಫೋರ್ಡ್‌ ಬ್ರಿಜ್​ ಕ್ರೀಡಾಂಗಣ ುಟ್​ಬಾಲ್​ ಪ್ರೇಮಿಗಳಿಂದ ಕಿಕ್ಕಿರಿದು ತುಂಬಿತ್ತು. ುಟ್​ಬಾಲ್​ ಜಗತ್ತಿನಲ್ಲಿ ಪ್ರಸಿದ್ಧನಾದ ಸ್ಯಾಮ್​ ರ್ಬಟ್ರಾಮ್​, ಚಾರಲ್ಟನ್​ ತಂಡದ ಗೋಲ್​ಕೀಪರ್​ನಾಗಿದ್ದ. ಎದುರಾಳಿಗಳು ಎಷ್ಟೇ ಪ್ರಯತ್ನಪಟ್ಟರೂ ತಡೆಗೋಡೆಯಾಗಿ ನಿಂತು ತನ್ನ ತಂಡವನ್ನು ಗೆಲ್ಲಿಸುವ ಅವನ ಕೌಶಲಕ್ಕೆ ಯಾರೂ ಸರಿಸಾಟಿ ಇರಲಿಲ್ಲ. ಆಟ ಆರಂಭವಾಗಿ ಒಂದು ಗಂಟೆ ಕಳೆದಿರಬಹುದು. ಒಮ್ಮೆಲೇ ದಟ್ಟವಾದ ಮಂಜು ಮುಸುಕಿ ಏನೂ ಕಾಣದಾದ್ದರಿಂದ ನಿರ್ಣಾಯಕರು ಆಟವನ್ನು ನಿಲ್ಲಿಸಿದರು.

ಆದರೆ ಇದು ಸ್ಯಾಮ್​ಗೆ ಗೊತ್ತಾಗಲಿಲ್ಲವಾದ್ದರಿಂದ ಎಂದಿನಂತೆ ಕೆಗಳನ್ನು ವಿಶಾಲವಾಗಿ ಚಾಚಿ, ಯಾವುದೇ ಕಾರಣಕ್ಕೂ ಎದುರಾಳಿಗಳಿಗೆ ಗೋಲ್​ ಮಾಡಲು ಬಿಡಬಾರದೆಂಬ ಛಲದಿಂದ ಸನ್ನದ್ಧವಾಗಿಯೇ ನಿಂತಿದ್ದ. ಸುಮಾರು ಹೊತ್ತಾದರೂ ಚೆಂಡು ತನ್ನೆಡೆಗೆ ಬಾರದ್ದನ್ನು ಕಂಡು ಸ್ಯಾಮ್​ ತನ್ನ ತಂಡದವರು ಗೋಲ್​ಪೋಸ್ಟ್​ ಕಡೆಗೆ ಚೆಂಡು ಬಾರದ ಹಾಗೆ ದೂರ ಒಯ್ದಿರಬಹುದೆಂದು ಅವರನ್ನು ಮನಸ್ಸಿನಲ್ಲಿಯೇ ಶ್ಲಾಘಿಸುತ್ತ ನಿಂತಿದ್ದ. ಆಗ ಸ್ಯಾಮ್​ನನ್ನು ನೋಡಿದ ಕ್ರೀಡಾಂಗಣದ ಪೊಲೀಸ್​ನೊಬ್ಬ, "ಮಂಜಿನಿಂದಾಗಿ ಆಟ ನಿಲ್ಲಿಸಿ ಹದಿನೆದು ನಿಮಿಷಗಳಾದವು. ಎಲ್ಲರೂ ಮೆದಾನದಿಂದ ತೆರಳಿದ್ದಾರೆ. ನೀನೊಬ್ಬನೇ ಇನ್ನೂ ಏಕೆ ಇಲ್ಲಿಯೇ ನಿಂತಿರುವೆ?' ಎಂದ. ಸ್ಟೇಡಿಯಂನಲ್ಲಿರುವ ಜನರ ಗದ್ದಲ ಹಾಗೂ ಕೇವಲ ತನ್ನ ಗುರಿಯೆಡೆಗೆ ಮಗ್ನನಾದ ಸ್ಯಾಮ್​ಗೆ ನಿರ್ಣಾಯಕರು ಊದಿದ ಸೀಟಿಯ ಶಬ್ದವೂ ಕೇಳಿಸಿರಲಿಲ್ಲ. ಅದನ್ನು ಕೇಳಿ ಅಚ್ಚರಿಗೊಂಡ ಸ್ಯಾಮ್​, ಮೆದಾನದಿಂದ ಹೊರಬರುತ್ತ ಗದ್ಗದಿತ ದನಿಯಲ್ಲಿ ಹೇಳಿದ ಮಾತುಗಳು ಇಂದಿಗೂ ಕ್ರೀಡಾಪ್ರೇಮಿಗಳ ಮನ ಕಲಕುತ್ತವೆ. "ಅವರ ಗೋಲ್​ಪೋಸ್ಟನ್ನು ಎವೆಯಿಕ್ಕದೆ ಕಾಯುತ್ತಿರುವ ನನ್ನನ್ನೇ ಮರೆತು ಒಬ್ಬಂಟಿಗನನ್ನಾಗಿ ಮಾಡಿ ಹೋಗಿಬಿಟ್ಟರಲ್ಲ ಈ ನನ್ನ ಮಿತ್ರರು?'

ಇಂಥ ಅನುಭವಗಳು ನಮಗೂ ಆಗುತ್ತಿರುತ್ತವೆ. ಸಾಕಿ ಸಲುಹಿದ ಹಿರಿಯರಿಗೆ ಸೌಜನ್ಯಕ್ಕಾದರೂ ಜೀವನದಲ್ಲಿಯ ಮಹತ್ವದ ಟನೆಗಳನ್ನು ತಿಳಿಸುವುದಿಲ್ಲ. ಕಷ್ಟದಲ್ಲಿ ಸಹಾಯ ಮಾಡಿದವರಿಗೆ ಜನುಮ ದಿನದ ಒಂದು ಶುಭಾಶಯವನ್ನೂ ಹೇಳುವುದಿಲ್ಲ. ಪರೀಾ ಕೊಠಡಿಗೆ, ಸಂದರ್ಶನಕ್ಕೆ ಹೋಗುವಾಗ ಕೆ ಮುಗಿದು ದೇವರಿಗೆ ಕೇಳಿಕೊಳ್ಳುತ್ತೇವೆ. ಆದರೆ, ಒಳ್ಳೆಯ ಪರಿಣಾಮ ಬಂದಾಗ ಆ ದೇವರು ಕೂಡ ಸ್ಮ$ತಿಪಟಲದಿಂದ ಹಾರಿ ಹೋಗಿರುತ್ತಾನೆ. ಆ ಸ್ಥಾನವನ್ನು ಮೊಬೆಲ್​ ಸಂದೇಶ, ಪಾಟಿರ್ಗಳು ಆಕ್ರಮಿಸಿರುತ್ತವೆ ಎಂಬುದು ನಿಜಕ್ಕೂ ವಿಪರ್ಯಾಸ. ಸಮುದ್ರ ಮಂಥನ ಸಮಯದಲ್ಲಿ ಪ್ರಥಮವಾಗಿ ಬಂದ ವಿಷವನ್ನು ಸ್ವೀಕರಿಸಿ ಎಲ್ಲರನ್ನೂ ಸಂಕಟದಿಂದ ಪಾರು ಮಾಡಿದ ನೀಲಕಂಠನಿಗೇ ಅಲ್ಲಿದ್ದವರು ನಂತರ ಬಂದ ಅಮೂಲ್ಯ ವಸ್ತುಗಳಲ್ಲಿ ಯಾವುದನ್ನೂ ಕೊಡಲಿಲ್ಲ. ಇದರಿಂದ ಆ ದೊಡ್ಡ ವ್ಯಕ್ತಿಗಳ ಹಿರಿಮೆ ಏನೂ ಕಡಿಮೆಯಾಗುವುದಿಲ್ಲ. ಆದರೆ ತಾತ್ಸಾರ ತೋರಿದವರು ಮಾತ್ರ ಇನ್ನಷ್ಟು ಸಣ್ಣವರಾಗುತ್ತಾರೆ. ಇತರರ ಮನಸ್ಸಿಗೆ ಘಾಸಿಯನ್ನು ಉಂಟು ಮಾಡುತ್ತಾರೆ. ಹಾಗಾಗದ ಹಾಗೆ ಕಾಳಜಿ ವಹಿಸಿದರೆ ಸಂಬಂಧಗಳು ಅರಳಬಲ್ಲವು, ಉಳಿಯಬಲ್ಲವು.

(ಲೇಖಕರು ನಿವತ್ತ ಬ್ಯಾಂಕ್​ ಅಧಿಕಾರಿ)