ಲೈಫ್‌ಸ್ಟೈಲ್

ಮಾವಿನ ಹಣ್ಣನ್ನು ತಿನ್ನುವಾಗ ನೀವು ಮಾಡುವ ಈ ಸಣ್ಣ ಮಿಸ್ಟೇಕ್​ ನಿಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್​!

ಬೇಸಿಗೆ ಕಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಮಾವಿನ ಹಣ್ಣನ್ನು ಕಾಣಬಹುದು. ಈ ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ ಎಂದು ಹೇಳಬಹುದು. ತನ್ನ ಸುವಾಸನೆಯಿಂದಲೇ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಇನ್ನು ಮಾವಿನ ಹಣ್ಣಿನ ರುಚಿ ಸವಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ಹಾಗಾಗಿಯೇ ಮಾವಿನ ಹಣ್ಣನ್ನು ಹೆಚ್ಚು ತಿನ್ನುತ್ತಾರೆ. ಒಂದು ಸೀಸನ್​ನಲ್ಲಿ ಮಾತ್ರ ಲಭ್ಯವಾಗುವ ಮಾವಿನ ಹಣ್ಣಿಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.

ಆದರೆ, ಆರೋಗ್ಯ ತಜ್ಞರ ಪ್ರಕಾರ ಒಮ್ಮೆ ಮಾವಿನ ಹಣ್ಣು ಕೊಂಡರೆ ಹಾಗೆ ತಿನ್ನಬೇಡಿ ಎನ್ನುತ್ತಾರೆ. ಮಾವಿನ ಹಣ್ಣು ತಿನ್ನುವ ಮುನ್ನ ಕೆಲವು ಸಲಹೆಗಳನ್ನು ಫಾಲೋ ಮಾಡಬೇಕು ಎಂದಿದ್ದಾರೆ. ತಡಮಾಡದೆ ಆ ಸಲಹೆಗಳು ಏನು ಎಂಬುದನ್ನು ನಾವೀಗ ತಿಳಿಯೋಣ.

ಮಾವಿನಹಣ್ಣುಗಳು ವಿಟಮಿನ್ ಎ ಮತ್ತು ಸಿ ಯಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ. ಈ ಹಣ್ಣುಗಳು ಫೈಬರ್​ನಲ್ಲಿ ಸಮೃದ್ಧವಾಗಿವೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾವಿನಹಣ್ಣುಗಳಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಫ್ಲೇವನಾಯ್ಡ್​ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಸ್ವತಂತ್ರ ರಾಡಿಕಲ್​ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಆದರೆ, ಮಾವಿನಹಣ್ಣನ್ನು ತಿನ್ನುವಾಗ ಎಲ್ಲರು ಸಾಮಾನ್ಯವಾಗಿ ಒಂದು ತಪ್ಪನ್ನು ಮಾಡುತ್ತಿದ್ದಾರೆ. ಖರೀದಿಸಿದ ತಕ್ಷಣ ತೊಳೆದು ತಿನ್ನುತ್ತಾರೆ. ಆದರೆ, ಇದರಿಂದ ಹೆಚ್ಚು ಪ್ರಯೋಜನವಿಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ, ಮಾವಿನ ಹಣ್ಣಿನ ಸಿಪ್ಪೆಯ ಮೇಲೆ ಹೆಚ್ಚು ರಾಸಾಯನಿಕಗಳು ಮತ್ತು ಕೀಟನಾಶಕಗಳು ಇರುತ್ತವೆ. ಹಾಗಾಗಿ ಹಣ್ಣುಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಸಿಪ್ಪೆಯ ಮೇಲಿನ ಕೊಳೆ ಅಥವಾ ಕೀಟನಾಶಕಗಳು ಹೋಗುತ್ತವೆ. ಆಮೇಲೆ ತೊಳೆದು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಇನ್ನು ಮಾವಿನ ಹಣ್ಣನ್ನು ಸರಿಯಾಗಿ ತೊಳೆಯದಿದ್ದರೆ ಅಥವಾ ಶೇಖರಣೆಯ ಸಮಯದಲ್ಲಿ ಅವು ಕಲುಷಿತಗೊಂಡರೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಮಾವಿನ ಹಣ್ಣನ್ನು ತಿನ್ನುವಾಗ ತಂಬಾ ಎಚ್ಚರಿಕೆ ವಹಿಸುವುದು ಉತ್ತಮ. (ಏಜೆನ್ಸೀಸ್​)