Jackfruit Papad: ಮಲೆನಾಡಿನ ಸಾಂಪ್ರದಾಯಿಕ ಹಾಗೂ ಸದಾಕಾಲದ ಪ್ರೀತಿಯ ತಿಂಡಿಯಾದ ಹಲಸಿನಕಾಯಿ ಹಪ್ಪಳ ಮಾಡುವುದು ಒಂದು ಕಲೆ. ಮಳೆಗಾಲದಲ್ಲಿ ಸುಟ್ಟು ಅಥವಾ ಕರೆದು ತಿನ್ನಲು ಹಲಸಿನಕಾಯಿ ಹಪ್ಪಳ ಬಹಳ ಅದ್ಭುತವಾಗಿರುತ್ತದೆ. ಜೊತೆಗೆ ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹೇಗಂತೀರಾ? ಇಲ್ಲಿದೆ ನೋಡಿ ಮಾಹಿತಿ..
ಬೇಕಾಗುವ ಪದಾರ್ಥಗಳು
* 1 ದೊಡ್ಡ ಬೌಲ್ ಬಲಿತ ಹಲಸಿನಕಾಯಿ ತೊಳೆಗಳು
ಮಾಡುವ ವಿಧಾನ
ಮೊದಲಿಗೆ ಬೀಜ ಮತ್ತು ನಾರು ತೆಗೆದ ಹಲಸಿನಕಾಯಿ ತೊಳೆಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇವುಗಳನ್ನು ಕುಕ್ಕರ್‌ನಲ್ಲಿ ಹಾಕಿ, ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ 2-3 ವಿಸಲ್ ಬರುವವರೆಗೆ ಚೆನ್ನಾಗಿ ಬೇಯಿಸಿಕೊಂಡು ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ, ಇವುಗಳನ್ನು ಮಿಕ್ಸಿ ಜಾರ್ ಅಥವಾ ಗ್ರೈಂಡರ್‌ಗೆ ಹಾಕಿ. ಇದರೊಂದಿಗೆ ಜೀರಿಗೆ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹಾಕದೆಯೇ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಎಲ್ಲೂ ತರಿತರಿಯಾಗಿರದೆ ಬೆಣ್ಣೆಯಂತೆ ಮೃದುವಾಗಿರಬೇಕು.
ರುಬ್ಬಿದ ಹಿಟ್ಟನ್ನು ಒಂದು ಅಗಲವಾದ ಪಾತ್ರೆಗೆ ತೆಗೆದುಕೊಂಡು ಚೆನ್ನಾಗಿ ನಾದಿಕೊಳ್ಳಿ. ನಂತರ ಕೈಗೆ ಎಣ್ಣೆ ಸವರಿಕೊಂಡು ಹಿಟ್ಟಿನಿಂದ ಸಣ್ಣ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ.
ಒಂದು ಹಪ್ಪಳ ಒತ್ತುವ ಮಣೆ ಅಥವಾ ಚಪಾತಿ ಲಟ್ಟಣಿಗೆಯನ್ನು ಬಳಸಿ ಹಪ್ಪಳ ಉದ್ದಿಟ್ಟುಕೊಳ್ಳಿ. ನಂತರ ಬಿಸಿಲಿನಲ್ಲಿ ಹರಡಿರುವ ಶುದ್ಧವಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಮ್ಯಾಟ್ ಮೇಲೆ ಹಾಕಿ. ಗರಿಗರಿಯಾಗುವವರೆಗೆ ಕನಿಷ್ಠ 2 ದಿನಗಳ ಕಾಲ ತೀವ್ರವಾದ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಬೆಂಕಿಯಲ್ಲಿ ಸುಟ್ಟು ಅಥವಾ ಎಣ್ಣೆಯಲ್ಲಿ ಕರಿದು ತಿನ್ನಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.