ಲೈಫ್‌ಸ್ಟೈಲ್

ಫ್ಯಾಷನ್​ಗಾಗಿ ದುಬಾರಿ ಹಣ ಖರ್ಚು ಮಾಡೋದು ಬಿಡಿ; ಎಲಿಗೆಂಟ್​ ಆಗಿ ಕಾಣಲು ನಿತ್ಯ ಹೀಗೆ ಮಾಡಿ ಸಾಕು..Fashion Tips

  • ಕಡಿಮೆ ಬಜೆಟ್‌ನಲ್ಲೂ ನಿಮ್ಮ ಲುಕ್ ದುಬಾರಿಯಾಗಿ ಕಾಣಬೇಕೆ?

  • ಉತ್ತಮ ಲುಕ್​​ಗಾಗಿ ಸರಳತೆ, ಸ್ವಚ್ಛತೆ ಬಗ್ಗೆ ಹೆಚ್ಚು ಗಮನಕೊಡಿ

  • ಸರಳ ಆಭರಣ, ದೇಹಕ್ಕೆ ಒಪ್ಪುವ ಸೂಕ್ತ ಬಟ್ಟೆ ಇವು ನಿಮ್ಮ ಅಂದ ಹೆಚ್ಚಿಸುತ್ತೆ

ದುಬಾರಿ ಬಟ್ಟೆ, ಬೆಲೆಬಾಳುವ ಆಭರಣ, ಬ್ರ್ಯಾಂಡೆಡ್ ವಸ್ತುಗಳಿಂದ ಮಾತ್ರ ಸ್ಟೈಲಿಶ್​ ಆಗಿ ಕಾಣುತ್ತೇವೆ ಎನ್ನುವ ಊಹೆ ತಪ್ಪು. ನಾವು ಧರಿಸುವ ಬಟ್ಟೆ, ಬಣ್ಣಗಳ ಹೊಂದಾಣಿಕೆ, ಸಿಂಪಲ್​ ಆಭರಣ, ಒಟ್ಟಾರೆಯಾಗಿ ನಮ್ಮ ಲುಕ್ ಅನ್ನು​ ಬದಲಿಸಬಹುದು. ಹೆಚ್ಚು ಹಣ ಖರ್ಚು ಮಾಡದೆ. ಸರಳವಾಗಿ ಕಡಿಮೆ ಹಣದಲ್ಲಿ ನಮ್ಮ ಲುಕ್​ ಅನ್ನು ಆಕರ್ಷಕವಾಗಿ ಇಟ್ಟುಕೊಳ್ಳೋದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಿಲಾಗಿದೆ.

ನಮ್ಮ ಲುಕ್​​​​ ಸರಳವಾಗಿದ್ದರೂ ಉತ್ತಮವಾಗಿ ಕಾಣಲು ಏನು ಮಾಡಬೇಕು?

ನಿಮ್ಮ ದೇಹಕ್ಕೆ ತಕ್ಕುದಾದ ಬಟ್ಟೆ ಧರಿಸಿ

ಬಟ್ಟೆ ಎಷ್ಟು ದುಬಾರಿಯಾಗಿದೆ ಎನ್ನುವುದಕ್ಕಿಂತ ಅದು ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆಯೇ ಎನ್ನುವುದು ಮುಖ್ಯ. ತುಂಬಾ ಸಡಿಲವಾಗಿರುವ ಅಥವಾ ಅತಿಯಾಗಿ ಬಿಗಿಯಾಗಿರುವ ಬಟ್ಟೆಗಳು ನಿಮ್ಮ ಲುಕ್ ಹದಗೆಡಿಸುತ್ತದೆ. ಹೀಗಾಗಿ ದೇಹದ ಗಾತ್ರಕ್ಕೆ ಹೊಂದಿಕೆಯಾಗುವ ಬಟ್ಟೆಯನ್ನು ಆರಿಸಿ, ಮಳಿಗೆಯಲ್ಲೇ ಫಿಟ್​ ಚೆಕ್​ ಮಾಡಿ. ಒಂದೇ ಬಣ್ಣದ ಉಡುಪು ಧರಿಸುವ ಬದಲಾಗಿ. ಬಿಳಿ, ಕಪ್ಪು, ಕ್ರೀಮ್, ಬೂದು, ಕಂದು ಮತ್ತು ನೀಲಿ ಬಣ್ಣಗಳಂತಹ ಗಾಢ ಮತ್ತು ಪೀಚ್​ ಬಣ್ಣದ ಬಟ್ಟೆ ಆಯ್ಕೆ ಮಾಡಿ.

ಸ್ವಚ್ಛತೆ ಮುಖ್ಯ

ನೀವು ಧರಿಸುವ ಬಟ್ಟೆ ಸ್ವಚ್ಛತೆಯಾಗಿ, ಲುಕ್​ ಆಗಿ ಕಾಣಬೇಕು. ಹೆಚ್ಚಾಗಿ ಇಸ್ತ್ರಿಯಾಗಿರಬೇಕು. ಎಷ್ಟೇ ದುಬಾರಿ ಬಟ್ಟೆ ಧರಿಸಿದರೂ ಸಹ ನಾವು ಯಾರನ್ನಾದರೂ ಭೇಟಿಯಾದಾಗ ನಮ್ಮ ಭೇಟಿ ಅವರಿಗೆ ಕಸಿವಿಸಿಯನ್ನುಂಟು ಮಾಡಬಾರದು ಸುಕ್ಕುಗಟ್ಟಿದ ಬಟ್ಟೆ ಎಷ್ಟೇ ಬೆಲೆಯದ್ದಾಗಿದ್ದರೂ ಲುಕ್ ಕಡಿಮೆ ಮಾಡಬಹುದು ಹಾಗೂ ಇದರಿಂದ ನಿಮ್ಮ ವ್ಯಕ್ತಿತ್ವಕ್ಕೂ ಧಕ್ಕೆಯುಂಟಾಗುವ ಸಾಧ್ಯತೆ ಇದೆ.

ಆಭರಣ ಕಡಿಮೆ ಹಾಕಿದ್ರೂ ಸರಿಯಾದ ಆಯ್ಕೆ ಇರಲಿ

ಮನೆಯಲ್ಲಿರುವ ಎಲ್ಲ ಆಭರಣ ಮೈಮೇಲಿರಬೇಕು ಎಂದು ಬಯಸುವ ಜನರಿದ್ದಾರೆ. ಆದರೆ, ಇದು ನೋಡುವ ಕೆಲವರಿಗೆ ಅಭಾಸವನ್ನು ತಂದಿಡುತ್ತದೆ. ಹೀಗಾಗಿ, ಸರಳವಾದ ಆಭರಣವನ್ನು ಆಯ್ಕೆ ಮಾಡಿ. ಕೈತುಂಬಾ ಬಳೆ, ಉಗುರುಗಳಲ್ಲಿ ಉಂಗುರವು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ಚಿಕ್ಕದಾಗಿ ಇರುವ ಪೆಂಡೆಂಟ್​ಗಳನ್ನು ಬಳಸುವುದರಿಂದ ಸಿಂಪಲ್ಲಾಗಿ ಇನ್ನಷ್ಟು ಆಕರ್ಷಿತವಾಗಿ ಕಾಣಬಹುದು.

ಚಪ್ಪಲಿ ಮತ್ತು ಬ್ಯಾಗ್‌ ಹೀಗಿರಲಿ

ನಿಮ್ಮ ಲುಕ್​ಗೆ ಆಭರಣ, ಬಟ್ಟೆ, ಸ್ವಚ್ಛತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಕೆಲವರು ಚಪ್ಪಲಿಯನ್ನು ಗಮಿಸುತ್ತಾರೆ. ನೀವು ಅಟೆಂಡ್​ ಮಾಡುವ ಇಂಟರ್ವ್ಯೂನಲ್ಲಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್​ ಬಹಳ ಮುಖ್ಯವಾಗುತ್ತದೆ. ಸರಳವಾದ ಉಡುಪಿನ ಜೊತೆಗೆ ಸ್ವಚ್ಛವಾಗಿರುವ ಚಪ್ಪಲಿ ಮತ್ತು ಹೊಂದಿಕೆಯಾಗುವ ಬ್ಯಾಗ್ ಬಳಸಿದರೆ ನೋಟ ಅಂದವಾಗಿ ಕಾಣತ್ತೆ.

ಒಂದೇ ಬಟ್ಟೆಯನ್ನು ಬೇರೆ ರೀತಿಯಲ್ಲಿ ಬಳಸಿ

ಹೊಸ ಬಟ್ಟೆ ಖರೀದಿಸುವುದೇ ಫ್ಯಾಷನ್ ಬದಲಿಸುವ ಏಕೈಕ ಮಾರ್ಗವಲ್ಲ. ಒಂದೇ ಕುರ್ತಾ, ಜೀನ್ಸ್ ಅಥವಾ ಸ್ಕರ್ಟ್‌ನ್ನು ಬೇರೆ ಬಣ್ಣದ ಮೇಲಂಗಿ, ದುಪಟ್ಟಾ, ಆಭರಣ ಅಥವಾ ಚಪ್ಪಲಿಯೊಂದಿಗೆ ಸಂಯೋಜಿಸಿ ಹೊಸ ಲುಕ್ ಪಡೆಯಬಹುದು. ಹೀಗೆ ಮಾಡಿದರೆ ಖರ್ಚು ಕಡಿಮೆಯಾಗುವುದರ ಜೊತೆಗೆ ವಾರ್ಡ್‌ರೋಬ್‌ನಲ್ಲಿರುವ ಬಟ್ಟೆಗಳು ಕಾಲಕಾಲಕ್ಕೆ ಹೆಚ್ಚು ಬಳಕೆಯಾಗುತ್ತದೆ.

ಸರಳತೆಯೇ ಸೊಗಸು

ತುಂಬಾ ವಿನ್ಯಾಸ, ಮಿನುಗುವ ಬಣ್ಣಗಳು ಅಥವಾ ಹೆಚ್ಚು ಅಲಂಕಾರಗಳಿಗಿಂತ ಸರಳವಾದ ಉಡುಪು ಮತ್ತು ಅಚ್ಚುಕಟ್ಟಾದ ನೋಟ ಹೆಚ್ಚು ಗಮನ ಸೆಳೆಯಬಹುದು. ನಿಮ್ಮ ಉಡುಪು ನಿಮಗೆ ಆರಾಮವಾಗಿರುವುದು ಅಷ್ಟೇ ಮುಖ್ಯ. ಆತ್ಮವಿಶ್ವಾಸದಿಂದ ಧರಿಸುವ ಸರಳ ಬಟ್ಟೆಯೇ ನಿಮ್ಮ ಲುಕ್‌ಗೆ ವಿಶೇಷತೆ.

ಹೀಗಾಗಿ ಸ್ಟೈಲಿಶ್ ಆಗಿ ಕಾಣಲು ಪ್ರತಿ ತಿಂಗಳು ದೊಡ್ಡ ಮೊತ್ತವನ್ನು ಫ್ಯಾಷನ್‌ಗಾಗಿ ಖರ್ಚು ಮಾಡಬೇಕೆಂದಿಲ್ಲ. ಇರುವ ಬಟ್ಟೆಗಳನ್ನು ಸರಿಯಾಗಿ ಸಂಯೋಜಿಸುವುದು, ಸ್ವಚ್ಛತೆ ಕಾಪಾಡುವುದು, ಸರಿಯಾದ ಅಳತೆ ಮತ್ತು ಬಣ್ಣಗಳನ್ನು ಆಯ್ಕೆ ಮಾಡುವುದು ಹಾಗೂ ಸಣ್ಣಪುಟ್ಟ ಪರಿಕರಗಳನ್ನು ಸೂಕ್ತವಾಗಿ ಬಳಸುವುದು ಸಾಕು.(ಏಜೇಸ್ಸಿಸ್​).