ಲೈಫ್‌ಸ್ಟೈಲ್

ಹೆಣ್ಣಿನ ಮೈಮೇಲೆ ಹಲ್ಲಿ ಬಿದ್ದರೆ ಏನಾಗುತ್ತದೆ? ಶುಭ ಸೂಚನೆಯೇ..? ಅಶುಭ ಸೂಚನೆಯೇ..?Lizard Astrology for Female..

Webdesk - Savina Naik

Lizard Astrology for Female: ಹಲ್ಲಿ ಸದ್ದು ಕೇಳಿದರೆ ಹೆದರಿ ಓಡಿ ಹೋಗುತ್ತೇವೆ. ಮೇಲಾಗಿ ನಮ್ಮ ಮೇಲೆ ಹಲ್ಲಿ ಬಿದ್ದರೆ ಯಾವುದೋ ಶಕುನ ಎನ್ನಲಾಗುತ್ತದೆ. ಏನಾದ್ರೂ ಅನಾಹುತ ಆಗಬಹುದೆಂಬ ಭಯ.. ಶುಭ ಸೂಚನೆಯೇ..? ಅಶುಭ ಸೂಚನೆಯೇ..? ಎನ್ನುವ ಹಲವಾರು ಪ್ರಶ್ನೆಗಳು ಎದುರಾಗುತ್ತವೆ. ಹಾಗಾದರೆ ಹಲ್ಲಿ ಮಹಿಳೆಯ ದೇಹದ ಯಾವುದೇ ಭಾಗದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ? ಎನ್ನುವ ಕುರಿತಅಗಿ ನಾವು ಇಂದು ತಿಳಿದುಕೊಳ್ಳೋಣ...

ಹೆಣ್ಣಿನ ತಲೆಯ ಮೇಲೆ ಹಲ್ಲಿ ಬಿದ್ದರೆ ಪ್ರಾಣಭಯವಿದೆ ಎಂದು ಶಾಸ್ತ್ರ ಹೇಳುತ್ತದೆ.

ಹಲ್ಲಿ ಕಾಲ್ಬೆರಳುಗಳನ್ನು ಮುಟ್ಟಿದರೆ, ಅದು ಮನೆಗೆ ತೊಂದರೆಗಳು ಬರುವ ಸೂಚನೆಯಾಗಿದೆ.

ಎಡಗಣ್ಣಿಗೆ ಹಲ್ಲಿ ತಾಗಿದರೆ ನಿಮ್ಮ ಪತಿ ಅಥವಾ ಆಪ್ತ ಸ್ನೇಹಿತರಿಂದ ಅಪಾರವಾದ ವಾತ್ಸಲ್ಯವನ್ನು ಪಡೆಯುತ್ತೀರಿ. ಬಲಗಣ್ಣನ್ನು ಸ್ಪರ್ಶಿಸಿದರೆ ಮಾನಸಿಕ ಚಿಂತೆ ಕಾಡುತ್ತದೆ.

ಹೆಣ್ಣಿನ ಬೆನ್ನ ಮೇಲೆ ಹಲ್ಲಿ ಬಿದ್ದರೆ ಸಾವಿನ ಸುದ್ದಿ ಕೇಳುತ್ತೀರಿ. ಮತ್ತು .. ಅರ್ಥಹೀನ ಜಗಳಕ್ಕೆ ಕಾರಣವಾಗುವ ಪರಿಸ್ಥಿತಿ ಎದುರಾಗುತ್ತದೆ ಎನ್ನಲಾಗಿದೆ.

ಕೆಳಗಿನ ತುಟಿಯ ಮೇಲೆ ಹಲ್ಲಿ ಬಿದ್ದರೆ ಅದು ಹೊಸ ವಸ್ತು ಲಾಭವನ್ನು ತರುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಹೆಂಗಸರ ಉಗುರುಗಳ ಮೇಲೆ ಹಲ್ಲಿ ಬೀಳುತ್ತದೆ. ಉಗುರುಗಳನ್ನು ಮುಟ್ಟದೆ ಕೇವಲ ಬೆರಳುಗಳನ್ನು ಮುಟ್ಟಿದರೆ ಆಭರಣ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಪಂಡಿತರು.

ಬಲ ಭುಜವನ್ನು ಹಲ್ಲಿ ಮುಟ್ಟಿದರೆ ಹೆಂಗಸರಲ್ಲಿ ವಿಪರೀತ ಕಾಮಕಾಂಕ್ಷೆಗಳಿರುತ್ತವೆ.

ಎದೆಯ ಮೇಲೆ ಬಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ ಎಂಬ ಸೂಚನೆಯಾಗಿದೆ. ಹೆಣ್ಣಿನ ಕಾಲಿನ ಮೇಲೆ ಬಿದ್ದರೆ ಆಕೆಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ.

ಹುಬ್ಬಿನ ಮೇಲೆ ಹಲ್ಲಿ ಬಿದ್ದರೆ ಕಚೇರಿಯಲ್ಲಿ ಅಧಿಕಾರಿಗಳ ಸಹಾಯ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಬಲ ಎದೆಯ ಮೇಲೆ ಹಲ್ಲಿ ಬಿದ್ದರೆ ಲಾಭ. ಎಡ ಎದೆಯ ಮೇಲೆ ಹಲ್ಲಿ ಬಿದ್ದರೆ ಸುಖ. ಕುತ್ತಿಗೆಯ ಎಡಭಾಗದಲ್ಲಿ ಬಿದ್ದರೆ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ.

ಕುತ್ತಿಗೆಯ ಮೇಲೆ ಹಲ್ಲಿ ಬಿದ್ದರೆ ಸಂಬಂಧಿ ಅಥವಾ ಇತರೆ ವ್ಯಕ್ತಿಯೊಂದಿಗೆ ದ್ವೇಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ.

ಗಮನಿಸಿ: ಶಾಸ್ತ್ರದ ಪ್ರಕಾರ ಹಲ್ಲಿ ಮಹಿಳೆಯರ ಮೇಲೆ ಬೀಳುವ ಫಲಿತಾಂಶಗಳು ಅವರ ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಷಯಗಳನ್ನು ನಂಬುವವರು ಕೆಲವರು ಇದ್ದರೆ, ಕೆಲವರು ವಿಜ್ಞಾನವನ್ನು ಗೌರವಿಸುತ್ತಾರೆ.