ಸಾಂದರ್ಭಿಕ ಚಿತ್ರ  
ಲೈಫ್‌ಸ್ಟೈಲ್

ಈ ಸಣ್ಣ ವಿಷಯಗಳು ಕೂಡ ನಿಮ್ಮ ದಾಂಪತ್ಯ ಜೀವನಕ್ಕೆ ಅತಿ ಮುಖ್ಯ... ಅನೇಕ ಮಂದಿಗೆ ತಿಳಿದಿಲ್ಲದ ಸಂಗತಿಗಳಿವು! Life Partner

ಪ್ರಮುಖ ಮುಖ್ಯಾಂಶಗಳು

  • ಉಡುಗೊರೆ ನೀಡುವುದು ಅಥವಾ ರೊಮ್ಯಾಂಟಿಕ್​ ಪ್ರವಾಸಗಳಿಂದ ಮಾತ್ರ ದಾಂಪತ್ಯ ಗಟ್ಟಿಯಾಗುವುದಿಲ್ಲ
  • ದೈನಂದಿನ ಜೀವನದ ಸಣ್ಣ ವಿಷಯಗಳು ಕೂಡ ಸಂಗಾತಿಯೊಂದಿಗಿನ ನಿಮ್ಮ ಬಂಧವನ್ನು ಹೆಚ್ಚಿಸುತ್ತದೆ
  • ಇಂದು ಪರಸ್ಪರ ಮಾತನಾಡುವುದಕ್ಕಿಂತ ಮೊಬೈಲ್​ ಹಾಗೂ ಟಿವಿಯಲ್ಲಿ ಮುಳುಗಿ ಹೋಗಿರುತ್ತಾರೆ
  • ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುವ 'ಸಣ್ಣ' ರಹಸ್ಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ
Life Partner : ಉಡುಗೊರೆಗಳನ್ನು ನೀಡುವುದು ಅಥವಾ ರೊಮ್ಯಾಂಟಿಕ್​ ಪ್ರವಾಸಗಳಿಂದ ದಂಪತಿ ಹಾಗೂ ಪ್ರೇಮಿಗಳ ನಡುವಿನ ಪ್ರೀತಿ ಗಟ್ಟಿಯಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ, ದೈನಂದಿನ ಜೀವನದಲ್ಲಿನ ಸಣ್ಣ ವಿಷಯಗಳು ಕೂಡ ಸಂಗಾತಿಯೊಂದಿಗಿನ ನಿಮ್ಮ ಬಂಧವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯದ ಆಳದಿಂದ ಬರುವ ಸಣ್ಣ ಸಣ್ಣ ಪ್ರಯತ್ನಗಳು ಕೂಡ ನಿಮ್ಮ ಬಂಧವನ್ನು ಬಲಪಡಿಸುತ್ತವೆ. ಆದರೆ, ಇಂದು ಅನೇಕ ಮಂದಿ ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಒಂದೇ ಮನೆಯಲ್ಲಿದ್ದರೂ ದೂರದಲ್ಲಿರುವಂತೆ ಅನಿಸುತ್ತಿದೆ. ಏಕೆಂದರೆ, ಪರಸ್ಪರ ಮಾತನಾಡುವುದಕ್ಕಿಂತ ಮೊಬೈಲ್​ ಹಾಗೂ ಟಿವಿಯಲ್ಲಿ ಮುಳುಗಿ ಹೋಗಿರುತ್ತಾರೆ. ಹೀಗಾಗಿ ಈ ಆಧುನಿಕ ಕಾಲದಲ್ಲಿ ಬ್ರೇಕಪ್​ ಹಾಗೂ ಡಿವೊರ್ಸ್​ಗಳು ಹೆಚ್ಚಾಗುತ್ತಿವೆ. ಆದ್ದರಿಂದ ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುವ 'ಸಣ್ಣ' ರಹಸ್ಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಸಣ್ಣ ಮಾತು

ಸಂಗಾತಿ ಮತ್ತು ನಿಮ್ಮ ನಡುವಿನ ಬಂಧ ಗಟ್ಟಿಯಾಗುವುದು ನೀವು ನೀಡುವ ಉಡುಗೊರೆ ಹಾಗೂ ಪ್ರವಾಸ ಸೇರಿದಂತೆ ಪ್ರಮುಖ ವಿಷಯಗಳಿಂದ ಮಾತ್ರವಲ್ಲ, ಪ್ರತಿದಿನ ನಾವು ನಡೆಸುವ ಸಣ್ಣ ಸಣ್ಣ ಮಾತುಕತೆಯ ಮೇಲೂ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನೀವು ಕಚೇರಿಯಿಂದ ಮನೆಗೆ ಬಂದ ತಕ್ಷಣ ಟಿವಿ ಆನ್ ಮಾಡುವ ಬದಲು, ನಿಮ್ಮ ಸಂಗಾತಿಗೆ ಒಂದು ಕಪ್​ ಕಾಫಿ ಕೊಟ್ಟು ನಿನ್ನ ಈ ದಿನ ಹೇಗಿತ್ತು? ಎಂದು ಪ್ರಾಮಾಣಿಕವಾಗಿ ಕೇಳುವುದು ತುಂಬಾನೇ ಮುಖ್ಯ. ಇದು ಕೇವಲ ಒಂದು ಪದವಲ್ಲ, ನಾನು ನಿಮ್ಮ ಬಗ್ಗೆ ಸದಾ ಯೋಚನೆ ಮಾಡುತ್ತಿರುತ್ತೇನೆ ಎಂದು ಹೇಳುವ ಭಾವನೆಯಾಗಿದೆ.
ನಿಮ್ಮ ಸಂಗಾತಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಷಯಗಳನ್ನು ನೆನಪಿಸಿಕೊಳ್ಳುವುದು, ಅವರಿಗಾಗಿ ಅವರ ನೆಚ್ಚಿನ ತಿಂಡಿಯನ್ನು ಖರೀದಿಸುವುದು ಅಥವಾ ಸಂಗಾತಿ ಹೇಳಿದ ಮಾತುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಅವರಿಗೆ ನೆನೆಪಿಸುವುದು, ಇವೆಲ್ಲವೂ ನೀವು ಅವರ ಮೇಲೆ ಎಷ್ಟು ಗಮನವಿಟ್ಟಿದ್ದೀರಿ ಎಂಬುದನ್ನು ತೋರಿಸುತ್ತದೆ. ನೀವು ಮಾಡುವ ಈ ಸಣ್ಣ ಪ್ರಯತ್ನಗಳು ಭಾವನಾತ್ಮಕ ಅನ್ಯೋನ್ಯತೆಯನ್ನು ಬೆಳೆಸುತ್ತದೆ. ನೀವು ಮಾಡುವ ದೊಡ್ಡ ಪ್ರಯತ್ನಗಳಿಗಿಂತ ಇವು ಹೆಚ್ಚಿನ ಪರಿಣಾಮ ಬೀರುತ್ತದೆ.

ನಿರೀಕ್ಷೆಗಳನ್ನು ಬಿಡುವುದು

ಅಂದಹಾಗೆ, ಸಂಬಂಧದಲ್ಲಿ ಅನ್ಯೋನ್ಯತೆ ಬೆಳೆಸುವ ಇನ್ನೊಂದು ಕೀಲಿಕೈ ಎಂದರೆ ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸುವ ಬದಲು ಅವರನ್ನು ಹಾಗೆಯೇ ಸ್ವೀಕರಿಸುವುದು. ಇಂದಿನ ಅನೇಕ ಮಂದಿ ಅವರು ಹೀಗಿದ್ದರೆ ಚೆನ್ನ, ಹಾಗಿದ್ದರೆ ಇಷ್ಟ ಎನ್ನುತ್ತಾರೆ. ಅಲ್ಲದೆ, ನನ್ನ ಇಚ್ಛೆಯಂತೆ ಬದಲಾದರೆ ನಾನು ಇನ್ನಷ್ಟು ಹತ್ತಿರವಾಗುತ್ತಿದ್ದೆ ಎಂದು ಹೇಳುತ್ತಾರೆ. ಆದರೆ, ಇದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ನೀವು ಅವರ ನ್ಯೂನತೆಗಳನ್ನು ಪ್ರೀತಿಯಿಂದ ನೋಡಿದಾಗ ಮಾತ್ರ ನಿಜವಾದ ಅನ್ಯೋನ್ಯತೆ ಬೆಳೆಯುತ್ತದೆ.

ಮೊಂಡು ವಾದ ಬೇಡ

ದಂಪತಿ ಮಧ್ಯೆ ವಾದಗಳು ಅಥವಾ ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗ, ಓಡಿಹೋಗದೆ ಅಥವಾ ವಾದಿಸದೆ, ಸರಿ, ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಈ ಸಣ್ಣ ಮಾತುಗಳು ಜೀವನದಲ್ಲಿ ಭಾರಿ ಬದಲಾವಣೆಯನ್ನು ತರುತ್ತದೆ ಮತ್ತು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗಿಸುತ್ತದೆ.

ದೈಹಿಕ ಸ್ಪರ್ಶ

ಸ್ಪರ್ಶವು ಪದಗಳಲ್ಲಿ ವ್ಯಕ್ತಪಡಿಸಬಹುದಾದ ಭಾವನೆಯೂ ಆಗಿದೆ. ಇದು ಕೇವಲ ಪ್ರಣಯ ಸಂದರ್ಭಗಳಲ್ಲಿ ಮಾತ್ರವಲ್ಲ, ದೈನಂದಿನ ಜೀವನದಲ್ಲೂ ತುಂಬಾ ಮುಖ್ಯವಾಗಿದೆ. ಸೋಫಾದ ಮೇಲೆ ಕುಳಿತಾಗ ಸಂಗಾತಿಯ ಕೈ ಹಿಡಿಯುವುದು ಮತ್ತು ಕೆಲಸದ ನಿಮಿತ್ತ ಹೊರ ಹೋಗುವಾಗ ಸಂಗಾತಿಯನ್ನು ಬಿಗಿಯಾಗಿ ಅಪ್ಪಿಕೊಳ್ಳುವುದು ಇವೆಲ್ಲವೂ ದೇಹದಲ್ಲಿ "ಪ್ರೀತಿಯ ಹಾರ್ಮೋನ್" ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ಯಾವುದೇ ಬಂಧವನ್ನು ಬಲಪಡಿಸುತ್ತದೆ.
ಇದಿಷ್ಟೇ ಅಲ್ಲದೆ, ನಿಮ್ಮ ಸಂಗಾತಿಯ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದು ಮತ್ತು ನಗುವುದು ಮುಂತಾದ ಮೌಖಿಕ ಸೂಚನೆಗಳು ಕೂಡ ನೀವು ಎಷ್ಟು ಲಭ್ಯವಿರುತ್ತೀರಿ ಮತ್ತು ನೀವು ಅವರನ್ನು ಎಷ್ಟು ಗೌರವಿಸುತ್ತೀರಿ ಎಂಬುದನ್ನು ಅವರಿಗೆ ತೋರಿಸಬಹುದು. ಹೀಗಾಗಿ, ಈ ಸಣ್ಣ ಬದಲಾವಣೆಗಳನ್ನು ಕೂಡ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಇವುಗಳನ್ನು ಪಾಲಿಸಿದ್ದೇ ಆದಲ್ಲಿ ನಿಮ್ಮ ದಾಂಪತ್ಯ ಜೀವನ ತುಂಬಾ ಗಟ್ಟಿಯಾಗುತ್ತದೆ ಮತ್ತು ಸಂತೋಷದಾಯವಾಗಿರುತ್ತದೆ.