ಲೈಫ್‌ಸ್ಟೈಲ್

ದೈನಂದಿನ ಬಳಕೆಯ ವಾಕ್ಯಗಳು

vijayavani

ಅವಳು ಹೆಚ್ಚು ಸಲಿಗೆಗೆ ಅವಕಾಶ ಕೊಡದೆ ನನ್ನನ್ನು ಸ್ವಲ್ಪ ದೂರದಲ್ಲೇ ಇಟ್ಟಿದ್ದಾಳೆಂಬುದು ನನಗೆ ಅರಿವಾಯ್ತು.

I realized that she had kept me at arm’s length.

ನಾನು ನನ್ನ ಮಗನಿಗೆ ಕರಾಟೆ ತರಬೇತಿಗೆ ಹೋಗಲು ವ್ಯವಸ್ಥೆ ಮಾಡಿದ್ದೇನೆ.

I’ve arranged for my son to go to Karate class.

ಪ್ರ

ದರ್ಶಕದಲ್ಲಿ ವಿವಿಧ ನಮೂನೆಯ ಸಿಹಿ ತಿಂಡಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು.

Different types of sweets were arrayed in the showcase.

ಅವರು ತಾವು ತೆಗೆದ ಅಡವು ಸಾಲದ ಕಂತುಗಳನ್ನು ಬಾಕಿ ಇರಿಸಿಕೊಂಡಿದ್ದಾರೆ.

He is in arrears with the mortgage payments.

ಅವರು ತಮ್ಮ ಮಾತು ಕೇಳದವರನ್ನು ಶಿಕ್ಷಿಸುವ ಅಧಿಕಾರವನ್ನು ತಾವಾಗಿಯೇ ಕೈಗೆ ತೆಗೆದುಕೊಂಡಿದ್ದಾರೆ.

They arrogate to themselves the power to punish those who don’t obey them.

ಅವಳ ಸಮ್ಮುಖದಲ್ಲಿ ನನ್ನ ಭಾವನೆಗಳಿಗೆ ಶಬ್ದರೂಪ ಕೊಡುವುದು ತುಂಬಾ ಕಷ್ಟಕರವೆನಿಸಿತು.

I found it difficult to articulate my feelings in her presence.

ಒಬ್ಬ ವಯಸ್ಕ ಜರ್ಮನ್ ಕೊಡಚಾದ್ರಿಯಲ್ಲಿ ಪ್ರಾಪಂಚಿಕ ಸುಖಭೋಗಗಳಿಲ್ಲದ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.

An elderly German has been living a very ascetic life in Kodachadri with his wife.

ನಿಮ್ಮ ಯಶಸ್ಸಿಗೆ ಕಾರಣವಾದ ವಿಷಯ ಯಾವುದೆನ್ನುವಿರಿ?

What do you ascribe your success to?