ಲೈಫ್‌ಸ್ಟೈಲ್

ದೈನಂದಿನ ಬಳಕೆಯ ವಾಕ್ಯಗಳು

vijayavani

ನೋವು ನಿವಾರಕ ತೆಗೆದುಕೊಂಡ ಒಂದು ಘಂಟೆಯ ನಂತರ ಅವಳ ತಲೆನೋವು ಕಡಿಮೆಯಾಯಿತು.

Her headache alleviated an hour after taking the pain killer.

ಅಪ್ಪಾ, ಒಂದು ಕಾರ್ ನಮ್ಮ ಗೇಟ್​ನ ಬಳಿಯಲ್ಲಿ ಬಂದು ನಿಂತಿತು ಮತ್ತು ಅದರ ಚಾಲಕ ಶಬ್ದ ಮಾಡುತ್ತಿದ್ದಾನೆ.

Dad, a car pulled up alongside our gate and the driver is sounding horn.

ಪ್ರತಿಯೊಂದು ಕೋಣೆಯಲ್ಲೂ ಕಸದಂತೆ ಚೆಲ್ಲಲ್ಪಟ್ಟಿರುವ ವಸ್ತುಗಳನ್ನು ನೋಡುವಾಗ ನನ್ನ ತಲೆ ಕೆಡುತ್ತದೆ.

I get addled by the sight of things bestrewn in every room of the house.

ಕೋಣೆ ಖಾಲಿ ಮಾಡಲು ಹೇಳುವುದರ ಹೊರತು ನನಗೆ ಬೇರೆ ದಾರಿ ಇಲ್ಲ.

I am afraid I’ve no alternative but ask you to vacate the room.

ಬೇರೆ ದಾರಿಯೆಂದರೆ ಗುಡ್ಡವನ್ನು ಕೊರೆದು ರಸ್ತೆ ಮಾಡುವುದು ಮಾತ್ರವೆ?

Is tunneling a route through the hill only alternative?

ಅವನು ತನಗೆ ತೊಂದರೆ ಆಗುವುದಾದರೂ ಇನ್ನೊಬ್ಬರಿಗೆ ಉಪಕಾರ ಮಾಡುವವ.

He is an altruist.

ನನಗೆ ಅವನೊಡನೆ ಗೆಳೆತನ ಮುಂದುವರಿಸುವ ಬಗ್ಗೆ ಗೊಂದಲವಿತ್ತು / ನಿಖರತೆ ಇರಲಿಲ್ಲ.

I was ambivalent about developing friendship with him.