ಲೈಫ್‌ಸ್ಟೈಲ್

ಮುಖಕ್ಕೆ ಮೊಸರು ಹಚ್ಚುವುದರಿಂದ ಏನೆಲ್ಲಾ ಪ್ರಯೋಜನೆಗಳು ತಿಳಿಯಿರಿ.. | Health Benefits

Health Benefits : ಯುವತಿಯರು ಮತ್ತು ಯುವಕರು ಮುಖದ ಸೌಂದರ್ಯ ಹೆಚ್ಚಿಸಲು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ವಿವಿಧ ರೀತಿಯ ದುಬಾರಿ ತ್ವಚೆಯ ಉತ್ಪನ್ನಗಳ ಕೊಳ್ಳುವುದು ಸಹಜ. ಆದರೆ, ಏನೆಲ್ಲಾ ಪ್ರಯತ್ನಗಳು ಮಾಡಿದರು ಮುಖದ ತ್ವಚೆ ಮಾತ್ರ ಮೊದಲಿನ ತರನೇ ಇದೆ ಎಂದು ಎಷ್ಟೋ ಜನ ನಿರಾಸೆ ಭಾವನೆ ವ್ಯಕ್ತಪಡಿಸಿರುತ್ತಾರೆ. ಆದರೆ, ದುಬಾರಿ ತ್ವಚೆಯ ಉತ್ಪನ್ನಗಳ ಬದಲಾಗಿ ಮನೆಯಲ್ಲಿಯೇ ಸಿಗುವ ನೈಸರ್ಗಿಕವಾಗಿ ಉತ್ಪನ್ನಗಳನ್ನು ಬಳಸುವುದು ಉತ್ತಮ.

ಮನೆಯಲ್ಲಿಯೇ ಸಿಗುವ ನೈಸರ್ಗಿಕ ಉತ್ಪನ್ನ ಅಥವಾ ಮನೆ ಮದ್ದುಗಳಿಂದ ಸಹಜವಾಗಿ ಆರೋಗ್ಯ ಸೇರಿದಂತೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಅದರಲ್ಲೂ ಮೊಸರು ಮುಖಕ್ಕೆ ಹಚ್ಚುವುದರಿಂದ ಅನೇಕ ಲಾಭಗಳಿವೆ.

ಮುಖಕ್ಕೆ ಮೊಸರು ಹಚ್ಚುವುದರಿಂದ ಏನೆಲ್ಲಾ ಲಾಭ..

1.ಚರ್ಮದ ಬಣ್ಣ ಸುಧಾರಿಸುತ್ತದೆ

ಮುಖಕ್ಕೆ ಮೊಸರು ಹಚ್ಚುವುದರಿಂದ ಮೊಸರು ಚರ್ಮವನ್ನು ಹಗುರಗೊಳಿಸುತ್ತದೆ ಮತ್ತು ಕ್ರಮೇಣ ವರ್ಣದ್ರವ್ಯವನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಬಣ್ಣವನ್ನು ಕೂಡ ಸುಧಾರಿಸುತ್ತದೆ.

2. ಕಪ್ಪು ವೃತ್ತ ಕಡಿಮೆಯಾಗುತ್ತೆ

ಮುಖಕ್ಕೆ ಮೊಸರು ಹಚ್ಚುವುದರಿಂದ ಕಣ್ಣುಗಳ ಸುತ್ತ ಮೊಸರನ್ನು ಹಚ್ಚಿ. ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಇದು ಕಪ್ಪು ವೃತ್ತಗಳನ್ನು ಕಡಿಮೆ ಮಾಡುತ್ತದೆ.

3. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ

ಮೊಸರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತವೆ. ಇದರಿಂದಾಗಿ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

4. ಚರ್ಮ ಹೊಳಪು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಸತ್ತ ಚರ್ಮಕೋಶಗಳನ್ನು ತೆಗದು ಹಾಕುತ್ತದೆ. ಇದರಿಂದ ಮುಖಕ್ಕೆ ತ್ವಚೆಯ ಹೊಳಪನ್ನು ತರುತ್ತದೆ.

5.ಮೊಡುವೆ ಕಡಿಮೆ ಮಾಡಲಿದೆ

ಮೊಸರು ನೈಸರ್ಗಿಕ ಬ್ಯಾಕ್ಟಿರಿಯಾ ವಿರೋಧಿಯಾಗಿದ್ದು ಮತ್ತು ಶೀಲಿಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನುಬ ಬ್ಯಾಕ್ಟಿರಿಯಾದಿಂದ ರಕ್ಷಿಸುತ್ತಿದೆ. ಅಲ್ಲದೆ, ಮೊಡುವೆಗಳನ್ನು ಕೂಡ ಸಹಾಯ ಮಾಡುತ್ತದೆ.

ಮೊಸರು ಮುಖಕ್ಕೆ ಹಚ್ಚೊದೇಗೆ...?

1 ಚಮಚ ಮೊಸರು ತಗೆದುಕೊಂಡು, ಅದಕ್ಕೆ ಒಂದು ಚಿಟಿಕಿ ಅರಿಶಿಣ ಮತ್ತು 1 ಚಮಚ ಕಡಲೆ ಹಿಟ್ಟು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷಗಳ ಬಳಿಕ ಮುಖ ತೊಳೆಯಿರಿ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.