ಲೈಫ್‌ಸ್ಟೈಲ್

ಕೇಂದ್ರ ಬಜೆಟ್ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸಲು ಸಹಕಾರಿ; ಕ್ವಿಕ್ ಹೀಲ್ ಟೆಕ್ನಾಲಜೀಸ್​ ಸಿಇಓ

ನವದೆಹಲಿ: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ದೇಶದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಇದರಿಂದ ರಾಷ್ಟ್ರೀಯ ಡೇಟಾ ಆಡಳಿತ ನೀತಿಯಲ್ಲಿ ಸ್ಪಷ್ಟವಾದ ಚಿತ್ರಣವನ್ನು ಕಂಡುಕೊಳ್ಳಲು ಸಾಧ್ಯವಿದೆ. ಸ್ವಾವಲಂಬಿ ಮತ್ತು ಸೈಬರ್ ಸುರಕ್ಷಿತ ಭಾರತವನ್ನು 2023-24ರ ಬಜೆಟ್ ಬೆಂಬಲಿಸುತ್ತದೆ ಎಂದು ಕ್ವಿಕ್ ಹೀಲ್ ಟೆಕ್ನಾಲಜೀಸ್​ನ ಸಿಇಓ ಡಾ,.ಕೈಲಾಶ್ ಕಾಟ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

2022ರಲ್ಲಿ, ಭಾರತವು ಸೈಬರ್‌ಟಾಕ್‌ಗಳಲ್ಲಿ ಹೆಚ್ಚಿನ ಅತ್ಯಾಧುನಿಕತೆಯನ್ನು ಕಂಡಿತು. ಇದೇ ವೇಳೆ ಸೈಬರ್ ಕಳ್ಳರು ಸುಧಾರಿತ AI ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲಸ ಮಾಡಿದರು. ಜತೆಗೆ ಭಾರತದಲ್ಲಿನ ವ್ಯವಹಾರಗಳ ಮೇಲೆ ಸೈಬರ್ ತಂತ್ರಜ್ಞಾನ ಬಳಸಿಕೊಂಡು ವಂಚನೆ ಮಾಡುವಂತಹ ಪ್ರಕರಣದಲ್ಲಿ ನಡೆದಿವೆ ಎಂದು ಹೇಳಿದರು.

'ಮೇಕ್ ಎಐ ಫಾರ್ ಇಂಡಿಯಾ' ಮತ್ತು 'ಮೇಕ್ ಎಐ ವರ್ಕ್ ಫಾರ್ ಇಂಡಿಯಾ', ಸರ್ಕಾರಿ ಉದ್ಯೋಗಿಗಳಿಗೆ ಆನ್‌ಲೈನ್ ತರಬೇತಿ ವೇದಿಕೆಗಳು, ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಬಹುದಾದ ಡಿಜಿಟಲ್ ಸೌಕರ್ಯಗಳನ್ನು ರಚಿಸುವ, ಕೃತಕ ಬುದ್ಧಿಮತ್ತೆಗಾಗಿ ಮೂರು ಶ್ರೇಷ್ಠತೆಯ ಕೇಂದ್ರಗಳನ್ನು ಒಳಗೊಂಡಿವೆ. ಮಕ್ಕಳು ಮತ್ತು ಯುವಜನತೆಗೆ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆ ಜತೆಗೆ, ಸೈಬರ್‌ ಸುರಕ್ಷತಾ ಕ್ರಮ ಮೇಕ್ ಇನ್ ಇಂಡಿಯಾ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.