ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಪಾರ್ಕ್, ಮಾಲ್, ಚಿತ್ರಮಂದಿರ ಎಲ್ಲವೂ ಬಂದ್ ಬಂದ್. ಮನೆಯಿಂದ ಹೊರಗೆ ಕಾಲಿಡುವಂತಿಲ್ಲ, ಊರು, ಟೂರು ಯಾವುದೂ ಇಲ್ಲವೇ ಇಲ್ಲ. ಒಂದೇ ಊರಿನಲ್ಲಿ ಇರುವ ಸಂಬಂಧಿಕರ, ಸ್ನೇಹಿತರ ಮನೆಗೂ ಹೋಗುವಂತಿಲ್ಲ!
ಅದಕ್ಕಾಗಿಯೇ ಈಗೇನಿದ್ದರೂ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಮಂದಿಗೆ ಟಿ.ವಿ, ಕಂಪ್ಯೂಟರ್, ಮೊಬೈಲ್‌ಗಳೇ ಪ್ರಪಂಚ. ಬೆಳಗ್ಗಿನಿಂದ ರಾತ್ರಿಯವರೆಗೆ ಇವುಗಳ ಸ್ಕ್ರೀನ್‌ಗಳೇ ಪಂಚಪ್ರಾಣ. ಟೈಂ ಪಾಸ್‌ಗೆ ಬೇರೆ ದಾರಿ ಗೊತ್ತಿಲ್ಲದಿದ್ದವರಿಗೆ ಇವೆಲ್ಲಾ ಬೇಕೇ ಬೇಕು ಎಂಬುದು ಸತ್ಯವೇ. ಆದರೆ ಇದನ್ನೇ ಪ್ರಪಂಚ ಮಾಡಿಕೊಂಡು, ದಿನಪೂರ್ತಿ ಈ ಸ್ಕ್ರೀನ್‌ಗಳ ಮುಂದೆ ಕುಳಿತುಕೊಳ್ಳುವವರೇ ಇರಲಿ ಎಚ್ಚರ! ಇವುಗಳ ಮುಂದಿನ ನಿಮ್ಮ ದಿನನಿತ್ಯದ ಅವಧಿ (ಸ್ಕ್ರೀನ್‌ಟೈಂ) ಹೆಚ್ಚಿದಂತೆ, ಅವಶ್ಯಕ್ಕಿಂತ ಹೆಚ್ಚಿನ ವೇಳೆ ಇದರ ಮುಂದೆ ಕುಳಿತುಕೊಂಡರೆ ನಿಮ್ಮ ಕಣ್ಣುಗಳು ಸೇರಿದಂತೆ ಆರೋಗ್ಯಕ್ಕೂ ಹಾನಿ ತಪ್ಪಿದ್ದಲ್ಲ. ವೈರಸ್ ಭೀತಿ ಮುಗಿಯುವುದರೊಳಗೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನುವುದು ನೆನಪಿರಲಿ.
ಈ ಸ್ಕ್ರೀನ್‌ಗಳು ಹೊರಸೂಸುವ ವಿಕಿರಣಗಳು ಮೆದುಳಿನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ನಿದ್ದೆಯ ಸಮಸ್ಯೆ ಉಂಟಾಗುತ್ತದೆ. ನಿದ್ರೆ ಏರುಪೇರಾದರೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಇದು ದಾರಿ ಮಾಡಿಕೊಡುತ್ತದೆ ಅಷ್ಟೇ ಅಲ್ಲದೇ, ಹೆಚ್ಚು ಸಮಯ ಸ್ಕ್ರೀನ್ ಮುಂದೆ ಇರುವುದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಖಿನ್ನತೆಯಂಥ ಮಾನಸಿಕ ಕಾಯಿಲೆ ಎಲ್ಲವೂ ಸಾಧ್ಯ ಎಂದು ಎಚ್ಚರಿಸುತ್ತಾರೆ ವೈದ್ಯರು.
ಎರಡು ಗಂಟೆಗೆ ಸೀಮಿತಗೊಳಿಸಿ
ಮಕ್ಕಳಿಗಂತೂ ಸ್ಕ್ರೀನ್‌ಟೈಂ ಹೆಚ್ಚುವಿಕೆ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಇನ್ನು 16 ವರ್ಷ ಮೇಲ್ಪಟ್ಟವರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದರೆ ದಿನಕ್ಕೆ ಎರಡು ಗಂಟೆಗಳು ಮಾತ್ರ ಸ್ಕ್ರೀನ್ ಮುಂದೆ ಕುಳಿತುಕೊಳ್ಳಬಹುದು.
ಆದರೆ ಸಾಮಾನ್ಯ ದಿನಗಳಲ್ಲಿಯೇ ಇದನ್ನು ಅನುಸರಿಸುವವರು ಕಡಿಮೆ. ಅದರಲ್ಲಿಯೂ ಲಾಕ್‌ಡೌನ್‌ನಂಥ ಸಮಯದಲ್ಲಿ ಇವುಗಳ ಮೊರೆ ಹೋಗುವವರು ಸಾಮಾನ್ಯ. ಆದರೆ ಈಚೆಗೆ ನಡೆದಿರುವ ಸಂಶೋಧನೆಯ ಪ್ರಕಾರ, ಸಾಮಾನ್ಯವಾಗಿ ನಾವು ಮೊಬೈಲ್, ಕಂಪ್ಯೂಟರ್, ಟಿ.ವಿ ಯಾವುದೇ ಸ್ಕ್ರೀನ್ ನೋಡುತ್ತಿದ್ದರೂ ಕಣ್ಣನ್ನು ಮಿಟುಕಿಸುವುದು ಕಮ್ಮಿಯೇ. ಅಂದರೆ ಕಣ್ಣು ರೆಪ್ಪೆಯನ್ನು ಆಗಾಗ್ಗೆ ಮುಚ್ಚದೇ ದುರುಗುಟ್ಟುತ್ತ ನೋಡುತ್ತಿರುತ್ತೇವೆ. ಇದರಿಂದಾಗಿ ಸ್ಕ್ರೀನ್‌ಗಳ ಸೂಸುವ ಬೆಳಕಿನಿಂದ ನಮ್ಮ ಕಣ್ಣುಗಳಲ್ಲಿರುವ ನೀರು ಒಣಗುತ್ತದೆ. ಅದು ಕಣ್ಣುಗಳ ಒತ್ತಡಕ್ಕೆ ಕಾರಣವಾಗುತ್ತದೆ. ಇಲ್ಲಿಂದಲೇ ಶುರುವಾಗುವುದು ಅನಾರೋಗ್ಯದ ಸಮಸ್ಯೆ.
ಅಷ್ಟೇ ಅಲ್ಲದೇ, ಈಗ ಹೊರಗಡೆ ಹೋಗಿ ವಾಕಿಂಗ್, ಜಾಗಿಂಗ್ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಇವುಗಳ ಮುಂದೆ ಕುಳಿತುಕೊಂಡು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಿಕೊಂಡಿರೋ ಮುಗಿಯಿತು ಕಥೆ, ದೇಹದಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್ ಸೇರಿದಂತೆ ಅನೇಕ ಬಗೆಯ ಕಾಯಿಲೆಗಳು ದೇಹವನ್ನು ಒಕ್ಕರಿಸುತ್ತವೆ. ಹೊರಗಡೆಯ ಹಸಿರು ಬಣ್ಣುಗಳನ್ನು ನೋಡುವುದರಿಂದ ಕಣ್ಣುಗಳು ನೈಸರ್ಗಿಕ ಬಣ್ಣಕ್ಕೆ ಹೊಂದಿಕೊಂಡು ಆಯಾಸವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಆದರೆ ಮನೆಯೊಳಕ್ಕೇ ಕೂತು ಈ ಸ್ಕ್ರೀನ್‌ಗಳನ್ನೇ ನೋಡುತ್ತಿದ್ದರೆ ಕಣ್ಣುಗಳು ಬಸವಳಿಯುತ್ತವೆ. ಇದು ರೆಟಿನಾದ ಮೇಲೆ ಪರಿಣಾಮ ಬೀರುತ್ತವೆ. ಲಾಕ್‌ಡೌನ್ ಮುಗಿಯುವವರೆಗೂ ಇದನ್ನೇ ನೀವು ಮುಂದುವರೆಸಿದರೆ, ಲಾಕ್‌ಡೌನ್ ಅವಧಿ ಮುಗಿದು ಎಲ್ಲವೂ ನಾರ್ಮಲ್ ಸ್ಥಿತಿಗೆ ಬಂದಾಗ ನಿಮ್ಮ ಕಣ್ಣುಗಳು ಭಾಗಶಃ ದೃಷ್ಟಿದೋಷದಿಂದ ಬಳಲಲೂಬಹುದು ಎಂದಿದೆ ಅಧ್ಯಯನ.
ಅನಿವಾರ್ಯವಾಗಿ ಸ್ಕ್ರೀನ್ ಮುಂದೆ ಕುಳಿತುಕೊಳ್ಳಬೇಕಾದರೆ ಹೀಗೆ ಮಾಡಿ
ಈಗ ಎಲ್ಲೆಲ್ಲೂ ವರ್ಕ್ ಫ್ರಮ್ ಹೋಂ. ಕಂಪ್ಯೂಟರ್ ಮುಂದೆ 8-10 ಗಂಟೆ ಕುಳಿತುಕೊಳ್ಳುವುದು ಅನಿವಾರ್ಯ. ಅಂಥ ಸಂದರ್ಭಗಳಲ್ಲಿ ನೀವು ನಿಮ್ಮ ಕಣ್ಣಿನ ಸುರಕ್ಷತೆಗೆ ಹೀಗೊಂದಿಷ್ಟು ಟಿಪ್ಸ್ ಅನುಸರಿಸಿ, ಸಮಸ್ಯೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಅವುಗಳೆಂದರೆ:
ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಿ
ಲಾಕ್‌ಡೌನ್ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಕರೊನಾ ವೈರಸ್ ತಂದಿಟ್ಟ ಭೀತಿಯ ಬಗ್ಗೆ ವರದಿಗಳಾಗುತ್ತಲೇ ಇರುತ್ತವೆ. ಹಾಗೆಂದು ನೀವು ಪದೇ ಪದೇ ಅದೇ ವರದಿಗಳನ್ನು ನೋಡುತ್ತಿದ್ದರೆ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸಂಗೀತ ಕೇಳುವುದು, ಪುಸ್ತಕ ಓದುವುದು ಇಂಥ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಲು ಇದು ನಿಮಗೆ ಸುಸಮಯ.
ಹೊರಗಡೆ ತಿರುಗಾಡಲು ಸಾಧ್ಯವಿಲ್ಲದಿದ್ದರೇನಂತೆ ಮನೆಯಲ್ಲಿಯೇ ನಿಮ್ಮ ಸ್ಥಳಕ್ಕೆ ಹೊಂದಿಕೊಳ್ಳುವಂಥ ವ್ಯಾಯಾಮ ಮಾಡಿ, ಸಾಧ್ಯವಾದರೆ ಟೆರೇಸ್ ಮೇಲೆ ಹೋಗಿ ತಿರುಗಾಡಿ. ಕೇವಲ ಸ್ಕ್ರೀನ್ ಮುಂದೆ ಕುಳಿತು ಮನಸ್ಸಿನ ಮತ್ತು ದೈಹಿಕವಾಗಿ ಬಳಲುವುದನ್ನು ದೂರ ಮಾಡಿ.(ಏಜನ್ಸೀಸ್)