ಲೈಫ್‌ಸ್ಟೈಲ್

ಬಾಲಿವುಡ್​ ತಾರೆ ಕರೀನಾ ಕಪೂರ್​ನಂತೆ ಫಿಟ್​ ಆಗಿರಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ! Simple Habits

Simple Habits : ಇಂದಿನ ದಿನಗಳಲ್ಲಿ ಜನರು ಆದಷ್ಟು ಫಿಟ್ ಆಗಿರಲು ಬಯಸುತ್ತಾರೆ. ಹಾಗೆಯೇ ಅದಕ್ಕೆ ಅನುಕೂಲವಾಗುವಂತೆ ಇರಲು ಪ್ರಯುತ್ನಿಸುತ್ತಾರೆ. ಫಿಟ್​ ಆಗಿರುವುದು ನಾವು ಒಳಗಿನಿಂದ ಹೇಗೆ ಭಾವಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ನಿಮ್ಮ ದೇಹವನ್ನು ಆರೋಗ್ಯಕರ ಆಹಾರಗಳನ್ನು ನೀಡಿದಾಗ ಶಕ್ತಿಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ನಿಮ್ಮ ಮನಸ್ಥಿತಿ ಸುಧಾರಿಸಿ ಗಮನವನ್ನು ತೀಕ್ಷ್ಣವಾಗಿಸುತ್ತದೆ. ಹಾಗಾಗಿ ನೀವೇನಾದರೂ, ದೇಹವನ್ನು ಫಿಟ್​ ಆಗಿಸಲು ಪ್ರಯತ್ನ ಪಟ್ಟರೆ ಸರಳ ವಿಷಯಗಳನ್ನು ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಅಳವಡಿಸಿಕೊಡಿಸಿಕೊಳ್ಳಿ..

ಇತ್ತೀಚೆಗೆ, ಕರೀನಾ ಕಪೂರ್ ಅವರಂತಹ ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿರುವ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್, ದೇಹವನ್ನು ಫಿಟ್​ ಆಗಿಟ್ಟುಕೊಳ್ಳಲು 3 ಸರಳ ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅದು ಯಾವುದು ಎಂದು ನೋಡೋಣ ಬನ್ನಿ..

ಆಹಾರ

ಪೌಷ್ಟಿಕತಜ್ಞರು ಸೂಚಿಸುವ ಪ್ರಕಾರ, ವಾರಕ್ಕೆ 3 ಬಾರಿಯಾದರೂ ಆಹಾರದಲ್ಲಿ ಬೇರು ತರಕಾರಿಗಳನ್ನು ಸೇರಿಸಬೇಕೆಂದು ಶಿಫಾರಸ್ಸು ಮಾಡುತ್ತಾರೆ. ಅದರಲ್ಲಿ ಅರ್ಬಿ, ಕಾನ್ಫಾ, ಸುರಾನ್, ರಟಾರು ಮುಂತಾದ ಬೇರು ತರಕಾರಿಗಳು ಕೃಷಿ ಮತ್ತು ಕಾಡಿನ ಆಹಾರಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಬ್ರೊಕೊಲಿ, ಅರುಗುಲಾ, ಆವಕಾಡೊ ಮತ್ತು ಶತಾವರಿಗಳನ್ನು ಜನರು ಮರೆತುಹೋಗಿದ್ದಾರೆ. ಅವುಗಳನ್ನು ಮರಳಿ ತಂದು ಆಹಾರಗಳಲ್ಲಿ ಬಳಸಿ ಎಂದು ತಿಳಿಸಲಾಗಿದೆ.

*  ಉತ್ಕರ್ಷಣ ನಿರೋಧಕ ಚಟುವಟಿಕೆ

ಚಳಿಗಾಲದಲ್ಲಿ ಎಥೇಚ್ಛವಾಗಿ ಜನರು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದರೆ, ಈ ಪರಿಣಾಮದಿಂದಾಗಿ ಮೂಗು ಸೋರುವಿಕೆ ಮತ್ತು ಚರ್ಮ ಮತ್ತು ಕೂದಲಿನಲ್ಲಿ ನೆತ್ತಿಯ ಮೇಲೆ ಸಿಪ್ಪೆ ಸುಲಿಯದಂತೆ ತಡೆಯಬಹುದು. ಹಾಗೆಯೇ ತರಕಾರಿಗಳು ಒಳಗಿನಿಂದ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಪೌಷ್ಟಿಕತಜ್ಞೆ ತಿಳಿಸಿದ್ದಾರೆ.

* ಪ್ರಿಬಯಾಟಿಕ್

ಬೇರು ತರಕಾರಿಗಳನ್ನು ಸೇವಿಸುವುದರಿಂದ ಚಳಿಗಾಲದಿಂದ ಉಂಟಾಗುವ ಅನಿಲ ಮತ್ತು ಉಬ್ಬುವಿಕೆಗೆ ವಿದಾಯ ಹೇಳಬಹುದು. ಇದು ಕರುಳಿನ ಆರೋಗ್ಯವನ್ನು ಸರಳ ಮತ್ತು ನೈಸರ್ಗಿಕ ರೀತಿಯಲ್ಲಿ ಸರಿಪಡಿಸಲು ಸಹಾಯ ಮಾಡುತ್ತದೆ.

* ಹಾರ್ಮೋನುಗಳ ಆರೋಗ್ಯ

ಈ ತರಕಾರಿಗಳನ್ನು ಸೇವಿಸುವುದರಿಂದ ಹಾರ್ಮೋನುಗಳ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತವೆ. ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಅಸಮತೋಲನವನ್ನು ಎದುರಿಸುತ್ತಿದ್ದರೆ, ನೀವು ಪೆರಿಮೆನೋಪಾಸ್, ಋತುಬಂಧ, ಬಿಳಿ ಮುಟ್ಟನ್ನು ಹೊಂದಿದ್ದರೆ ಅಥವಾ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಈ ರೀತಿಯ ಆಹಾರಗಳನ್ನು ಸೇವಿಸಿರಿ.

ವ್ಯಾಯಾಮ

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗೆಯೇ, ಸಂಜೆ ಅಥವಾ ರಾತ್ರಿ ಊಟದ ಮುನ್ನ ಕೆಲ ಸಮಯದ ಕಾಲ ನಡೆಯುವುದನ್ನು ಮಾಡಿ. ಇದು ದೇಹವನ್ನು ಫಿಟ್​ ಆಗಿಡಲು ಸಹಾಯ ಮಾಡುತ್ತದೆ.

ತಜ್ಞರ ಪ್ರಕಾರ, ಪ್ರತಿದಿನ 30 ನಿಮಿಷಗಳ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಿ ನಿದ್ರೆಯನ್ನು ಸುಧಾರಿಸುತ್ತದೆ.

ನಿದ್ರೆ

ಅಂತಿಮವಾಗಿ, ಪೌಷ್ಟಿಕತಜ್ಞರು ಸೂಚಿಸುವ ಪ್ರಕಾರ, 30 ನಿಮಿಷಗಳ ಮೊದಲು ಎಲ್ಲಾ ಪರದೆಗಳಿಂದ ದೂರವಿರಬೇಕು. ಇಲ್ಲದಿದ್ದರೆ, ನಿಮ್ಮ ದೇಹವು ಫಿಟ್​ ಆಗಿರುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಇದು ನಿಮಗೆ ವಿಶ್ರಾಂತಿ ಪಡೆಯಲು ಹಾಗೂ ದಿನದ ಬಗ್ಗೆ ಯೋಚನೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಏನು ಮಾಡಬೇಕು ಎಂಬುದರ ಬಗ್ಗೆ ಗಮನಹರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.