Jeera Water vs Methi Water Which Drink best 
ಲೈಫ್‌ಸ್ಟೈಲ್

ಜೀರಿಗೆ ನೀರು VS ಮೆಂತ್ಯೆ ಕಾಳಿನ ನೀರು; ಹೊಟ್ಟೆಯ ಕೊಬ್ಬನ್ನು ವೇಗವಾಗಿ ಇಳಿಸಲು ಯಾವುದು ಬೆಸ್ಟ್?..Jeera VS Methi

ಪ್ರಮುಖ ಮುಖ್ಯಾಂಶಗಳು

  • ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಅಥವಾ ಜೀರಿಗೆ ನೀರು ಯಾವುದು ಕುಡಿಯಬೇಕು?
  • ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್​​, ಕ್ಯಾಲೋರಿ ಇಳಿಕೆಗೆ ಜೀರಿಗೆ ನೀರು ಬೆಸ್ಟ್
  • ರಕ್ತದಲ್ಲಿ ಸಕ್ಕರೆ ಗುಣಮಟ್ಟ ನಿಯಂತ್ರಣದಲ್ಲಿಡಲು ಮೆಂತ್ಯೆ ನೀರು ಬೆಸ್ಟ್ ಎನ್ನುತ್ತಾರೆ ತಜ್ಞರು
Jeera Water vs Methi Water Which Drink best: ಭಾರತೀಯರಲ್ಲಿ ಬೊಜ್ಜು ಕರಗಿಸುವುದು ಒಂದು ಸವಾಲಾಗಿ ಪರಿಣಮಿಸಿದೆ. ಸಣ್ಣ ಮಕ್ಕಳಿನಿಂದ ಹಿಡಿದು ಹಿರಿಯವರೆಗೂ ತೂಕ ಇಳಿಸಲು ಮಾಡುವ ಪ್ರಯೋಗ ಒಂದೊಂದಲ್ಲ, ಗ್ರೀನ್​​ ಟೀ ಕುಡಿಯುವುದು, ಬಿಸಿ ನೀರಿಗೆ ಜೇನು ತುಪ್ಪ ಬೆರಸಿ ಕುಡಿಯುವುದು ಹೀಗೆ ತರಹೇವಾರಿ ರೀತಿಯಲ್ಲಿ ಪ್ರಯತ್ನಗಳು ಸಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಮತ್ತು ಜೀರಿಗೆ ನೀರು ಕುದಿಸಿ ಕುಡಿಯುವುದು ಸಹ ಒಂದು ಪ್ರಯೋಗ. ಈಗ ಇದರಲ್ಲಿ ತೂಕ ಇಳಿಸಲು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ

ಜೀರಿಗೆ ನೀರಿನಿಂದಾಗುವ ಪ್ರಯೋಜನಗಳೇನು?

ಬೆಳಗೆದ್ದ ಕೂಡಲೇ ಕುದಿಸಿದ ಅಥವಾ ನೆನಸಿಟ್ಟು ಕುಡಿಯುವ ಜೀರಿಗೆ ನೀರಿನಿಂದ ಜೀರ್ಣಾಂಗ ವ್ಯವಸ್ಥೆಗೆ ಭಾರಿ ಸಹಕಾರಿ. ಇದರಲ್ಲಿರುವ 'ಥೈಮೋಕ್ವಿನೋನ್ ಎಂಬ ಅಂಶವು ಆಂಟಿಆಕ್ಸಿಡೆಂಟ್​ನ್ನು ವೃದ್ಧಿಸಿ ಕರಳಿನಲ್ಲಿ ಕಾಣಿಸಿಕೊಳ್ಳುವ ಉರಿಯೂತ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಇಷ್ಟೇ ಅಲ್ಲದೇ ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಉರಿಯೂತ, ಗ್ಯಾಸ್ಟ್ರಿಕ್​ ಸಮಸ್ಯೆ, ಹೊಟ್ಟೆ ಉಬ್ಬರ ಹಾಗೂ ಕರುಳಿ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿ ಎನ್ನುತ್ತಾರೆ ವೈದ್ಯರು.

ಮೆಂತ್ಯೆ ನೀರಿನಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ?

ಮೆಂತ್ಯೆಯಲ್ಲಿರುವ ಗ್ಯಾಲಕ್ಟೋಮನ್ನನ್' ಎಂಬ ಅಂಶವು ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ, ಈ ಕಾರಣದಿಂದ ಆಗಾಗ್ಗೆ ಸಿಕ್ಕ ಸಿಕ್ಕ ಆಹಾರ ತಿನ್ನೋದು. ದೇಹಕ್ಕೆ ಮಾರಕವಾದ ಕರಿದ ಆಹಾರ, ಪಿಜ್ಜಾ, ಬರ್ಗರ್​ನಂತಹ ಕುರುಕಲು ತಿಂಡಿ ತಿನ್ನೋದನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಇದರಲ್ಲಿರುವ ಅತ್ಯುತ್ತಮ ಆರೋಗ್ಯಕಾರಿ ಅಂಶವು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಹೊಟ್ಟೆಯ ಸುತ್ತಲು ಆವರಿಸಿಕೊಳ್ಳುವ ಜಿಡ್ಡನ್ನು ದೂರಮಾಡುತ್ತದೆ. ಅತಿಯಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ, ಮಧುಮೇಹಿಗಳಿಗೆ ಇದೊಂದು ಮದ್ದು ಇದ್ದಂತೆ.

ಜೀರಿಗೆ ವರ್ಸಸ್ ಮೆಂತ್ಯೆ ಯಾವದು ಬೆಸ್ಟ್​?

ಜೀರಿಗೆ ಮತ್ತು ಮೆಂತ್ಯೆ ಕಾಳು ಬಂದಾಗ ತೂಕ ಇಳಿಕೆಗೆ ಯಾವುದು ಬೆಸ್ಟ್ ಎಂದು ಹೇಳುವುದು ಸ್ವಲ್ಪ ಕಷ್ಟವೇ ಏಕೆಂದರೆ, ಎರಡು ಅಡುಗೆ ಮನೆಯ ಪದಾರ್ಥ ತನ್ನದೇ ವಿಧದಲ್ಲಿ ದೇಹಕ್ಕೆ ಸಹಕಾರಿಯಾಗಿದೆ. ತಿಂದ ಆಹಾರ ಜೀರ್ಣವಾಗಿ ಕ್ಯಾಲೋರಿ ಕರಗಬೇಕು ಎಂದರೆ ಅದಕ್ಕೆ ಜೀರಿಗೆ ನೀರು ಉತ್ತಮವಾಗುತ್ತದೆ. ಅದರಂತೆ, ಪದೇ ಪದೇ ಹಸಿವಾದಂತೆ ಆಗಿ ರಸ್ತೆಯಲ್ಲಿ ಕಂಡ ಅನಾರೋಗ್ಯಕರ ಪದಾರ್ಥಗಳನ್ನು ತಿನ್ನಲು ಬಿಡದೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮೆಂತ್ಯೆ ಬೆಸ್ಟ್​ ಎಂದು ತಜ್ಞರು ಹೇಳುತ್ತಿದ್ದಾರೆ, (ಏಜೆನ್ಸೀಸ್).

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.