- ಭಾರತೀಯರ ಇಷ್ಟಾದ ಪದಾರ್ಥ ತುಪ್ಪ ತಯಾರಿಕೆಯಲ್ಲಿ ಗೋಲ್ಮಾಲ್
- ಯಾವುದು ಶುದ್ಧ ತುಪ್ಪ ಎಂದು ಪತ್ತೆ ಹಚ್ಚುವುದು ಹೇಗೆ ಗೊತ್ತಾ|
- ಗಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹೊಸ ಮಾಹಿತಿ ರಿಲೀಸ್
Is Your Ghee Pure : ಹಾಲಿನ ಕೆನೆಯು ಬೆಣ್ಣೆಯಾಗಿ, ಬೆಣ್ಣೆ ತುಪ್ಪವಾಗುವ ಒಂದು ಪ್ರಕ್ರಿಯೆ ಎಷ್ಟು ಚಂದ. ಭಾರತೀಯರ ಅಡುಗೆ ಮನೆಗಳಲ್ಲಿ ತುಪ್ಪಕ್ಕೆ ಅದರದ್ದೇ ಆದ ವಿಶೇಷ ಸ್ಥಾನವಿದೆ. ಉತ್ತಮ ಸುವಾಸನೆ, ಪೌಷ್ಟಿಕಾಂಶ ಹಾಗೂ ಆರೋಗ್ಯದ ದೃಷ್ಟಿಯಿಂದ ತುಪ್ಪವನ್ನು ನಿತ್ಯದ ಆಹಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೆಚ್ಚು ಜನರು ಇದನ್ನು ಮನೆಯಲ್ಲೇ ತಯಾರಿ ಮಾಡಿಕೊಂಡರೆ, ಕೆಲವರು ರಿಸ್ಕ್ ಬೇಡ ಎಂದು ಹಾಲಿನ ಅಂಗಡಿಗಳಲ್ಲಿ ಖರೀದಿ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಾರಾಟಗಾರರು ಅಡ್ಡದಾರಿಯಲ್ಲಿ ಹಣ ಗಳಿಕೆ ಮಾಡಲು ಗ್ರಾಹರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ,
ಹೌದು ಮಾರುಕಟ್ಟೆಯಲ್ಲಿ ತುಪ್ಪ ಕಲಬೆರಕೆ ದಂಧೆ ಹೆಚ್ಚಾಗುತ್ತಿರುವುದರಿಂದ ನಾವು ಬಳಸುವ ತುಪ್ಪ ಎಷ್ಟು ಶುದ್ಧವಾಗಿದೆ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ. ತುಪ್ಪದಲ್ಲಿ ಅಗ್ಗದ ಎಣ್ಣೆಗಳು ಅಥವಾ ವನಸ್ಪತಿಯನ್ನು ಬೆರೆಸುವುದರಿಂದ ಅದರ ಗುಣಮಟ್ಟ ಮತ್ತು ಪೌಷ್ಟಿಕಾಂಶ ಕುಸಿಯುವುದಲ್ಲದೆ, ಆರೋಗ್ಯಕ್ಕೂ
ತೊಂದರೆಯಾಗಬಹುದು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಅದರಶುದ್ಧ ಹಾಗೂ ಸ್ವಚ್ಛ ತುಪ್ಪ ಯಾವುದು ಎಂದು ಹೇಗೆ ತಿಳಿದುಕೊಳ್ಳೋದು ಎನ್ನುವದರ ಬಗ್ಗೆ ಎಕ್ಸ್ನಲ್ಲಿ ಪೋಸ್ವೊಂದು ಹಂಚಿಕೊಂಡಿದೆ. ಯಾವ ವಿಧಾನದ ಮೂಲ ಪರಿಶುದ್ಧ ತುಪ್ಪ ಯಾವುದು, ಕಲಬರಕೆ ಯಾವುದು ಕಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಕಲಬೆರಕೆ ತುಪ್ಪ ಪತ್ತೆ ಹಚ್ಚೋದ್ ಹೇಗೆ?
ಒಂದು ಟೆಸ್ಟಿಂಗ್ ಟ್ಯೂಬ್ ತೆಗೆದುಕೊಂಡು ಅದರಲ್ಲಿ 1 ಮಿಲಿ ಲೀಟರ್ ಕರಗಿಸಿದ ತುಪ್ಪವನ್ನು ಹಾಕಿ.
ಅದೇ ಟ್ಯೂಬ್ಗೆ ಈಗ 1 ಮಿಲಿ ಲೀಟರ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ
ಈಗ ಅದಕ್ಕೆ ಅರ್ಧ ಚಮಚ ಸಕ್ಕರೆಯನ್ನು ಮಿಕ್ಸ್ ಮಾಡಿ ಈಗ ಜೋರಾಗಿ ಆ ಟ್ಯೂಬ್ ಅನ್ನು ಕಲಕಿ ಮೂರು ಮಿಶ್ರಣವು ಬೆರೆಯಬೇಕು.
ಪರೀಕ್ಷೆಯ ಉತ್ತರ ಹೀಗಿದ್ಯಾ ನೋಡಿ
ಮೂರು ಮಿಶ್ರಣವನ್ನು ಚೆನ್ನಾಗಿ ಕಲಿಸಿದ ನಂತರ ಅಲ್ಲಿ ಯಾವುದೇ ರೀತಿಯ ಬಣ್ಣ ಬಿಡದೇ ಇದ್ದಾಗ ಅದು ಶುದ್ಧ ತುಪ್ಪ ಎಂದು ಅರ್ಥ.
ಕಲಬೆರಕೆ ಹೀಗಿರತ್ತೆ
ಪರೀಕ್ಷಾ ಟ್ಯೂಬ್ ಕೆಳಭಾಗದಲ್ಲಿ ತುಪ್ಪದ ಬಣ್ಣ ಗಾಢ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ್ದರೆ ಅದು ಕಲಬೆರಕೆ ತುಪ್ಪ ಎಂದು FSSAI ಹೇಳಿದೆ.
ಬಣ್ಣ ಬದಲಾಗೋದು ಯಾಕೆ?
ಹೈಡ್ರೋಕ್ಲೋರಿಕ್ ಆಮ್ಲ ಸಕ್ಕರೆ ಅಣುಗಳನ್ನು ಗ್ಲೂಕೋಸ್ ಮತ್ತು ಫ್ರಕೋಸ್ಟ್ ಎಂದು ವಿಭಜನೆ ಮಾಡುತ್ತದೆ. ಇವು ಫಿನಾಯಲ್, ಎಳ್ಳೆಣ್ಣೆ ಜೊತೆಗೆ ರಿಯಾಕ್ಟ್ ಮಾಡುತ್ತದೆ. ಹೀಗಾಗಿ ಕಲಬೆರಕೆ ತುಪ್ಪ ಯಾವುದು ಎಂದು ಈ ರೀತಿ ತಿಳಿದುಕೊಳ್ಳಬಹುದಾಗಿದೆ ಎನ್ನಲಾಗಿದೆ, (ಏಜೆನ್ಸೀಸ್).