Health Tips | ಪ್ರಸ್ತುತ ಜೀವನ ಶೈಲಿಯಲ್ಲಿ ತೂಕ ಇಳಿಸುವುದು, ಫಿಟ್‌ನೆಸ್ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಪ್ರತಿನಿತ್ಯ ಡಯಟ್ ಫುಡ್ ಸೇವಿಸುವುದು, ಜಿಮ್ಗೆ ಹೋಗುವುದು ಸಾಮಾನ್ಯ. ಹೀಗೆ ಫಿಟ್‌ನೆಸ್ ಟ್ರೈನರ್ ಒಬ್ಬರು ತಾವು ಸೇವಿಸುವ ಬೆಳಗಿನ ಆಹಾರದಿಂದಲೇ 15 KG ತೂಕ ಇಳಿಸಿದ್ದಾರೆ. ಮಹಿಳೆ ಈ ಕುರಿತು ಹಂಚಿಕೊಂಡ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಲಾರಾ ಡೆನ್ನಿಸನ್ ಫಿಟ್‌ನೆಸ್ ಟ್ರೈನರ್ ಇನ್ಟ್ಗ್ರಾಂ ಪೇಜ್ನಲ್ಲಿ ತಾನು ಸೇವಿಸುವ ಆಹಾರ ಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ಬೆಳಗಿನ ಉಪಹಾರವನ್ನು ಸೇವಿಸುವ ಮೂಲಕ 15 KG ತೂಕವನ್ನು ಸುಲಭವಾಗಿ ಇಳಿಸಲು ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ.
ಲಾರಾ ಅನುಸರಿಸಿದ ಉಪಹಾರ ರೆಸಿಪಿ ಇಲ್ಲಿದೆ:
ಅರ್ಧ ಕಪ್ ಓಟ್ಸ್
ಎರಡು ಚಮಚ ಚಿಯಾ ಬೀಜ
ಒಂದು ಕಪ್ ಹಾಲು
ಹಣ್ಣುಗಳು
ಒಂದು ಚಮಚ ಪೀನಟ್ ಬಟರ್
ಮಾಡುವ ವಿಧಾನ:
ಒಂದು ಜಾರ್‌ನಲ್ಲಿ ಅರ್ಧ ಕಪ್ ಓಟ್ಸ್, ಎರಡು ಚಮಚ ಚಿಯಾ ಬೀಜಗಳು, ಒಂದು ಕಪ್ ಹಾಲು ಮತ್ತು ಕತ್ತರಿಸಿದ ಹಣ್ಣುಗಳನ್ನು ತೆಗೆದುಕೊಂಡು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ರಾತ್ರಿಯಿಡೀ ಅದನ್ನು ಫ್ರೀಜ್ನಲ್ಲಿಡಿ. ಬೆಳಿಗ್ಗೆ ಸೇವಿಸುವ ಮೊದಲು ಒಂದು ಚಮಚ ಪೀನಟ್ ಬಟರ್ ಸೇರಿಸಿ ತಿನ್ನಿ.