Water Bottle: ಹಲವು ಜನರು ದೂರದ ಪ್ರಯಾಣದ ವೇಳೆ ಕಾರಿನಲ್ಲಿ ತಮ್ಮ ಅನುಕೂಲಕ್ಕಾಗಿ ಸಾಮಾನ್ಯವಾಗಿ ನೀರಿನ ಬಾಟಲ್ ಅನ್ನು ಇಟ್ಟುಕೊಂಡಿರುತ್ತಾರೆ. ಯಾಕೆಂದ್ರೆ ತುರ್ತು ಸಂದರ್ಭದಲ್ಲಿ ಬಾಟಲಿಯಲ್ಲಿನ ನೀರು ಉಪಯೋಗಕ್ಕೆ ಬರುತ್ತವೆ ಎಂದು. ಆದರೆ, ನೀವು ನೀರಿನ ಬಾಟಲಿಯಿಂದ ಸಲ್ಪ ಹುಷಾರ್ ಇರಬೇಕಾಗುತ್ತೆ. ಅದಕ್ಕೆ ಕಾರಣವೂ ಇದೆ.
ಹೌದು, ಏಕೆಂದರೆ, ಕಾರು ಇರುವವರು ಪ್ರಯಾಣ ಮಾಡುವಾಗ ಬಾಯಾರಿಕೆಯಾದಾಗ ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುತ್ತಾರೆ. ಕೆಲವರಿಗೆ ಎಷ್ಟು ಸಮಯದ ಹಿಂದೆ ತಮ್ಮ ಕಾರಿಗೆ ನೀರು ಹಾಕಿದ್ದೇವೆಂದು ನೆನಪಿರುವುದಿಲ್ಲ. ಆದರೆ, ಕಾರುಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಏರೆಕೆಯಾಗುತ್ತಲೇ ಇದೆ. ಇದರಿಂದ ಕಾರಿನಲ್ಲಿದ್ದ ನೀರು ಬಹುಬೇಗನೆ ಹಿಟ್ ಆಗಿ ಬಿಡುತ್ತದೆ. ಇಂತಹ ನೀರು ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಹೊಸ ಅಧ್ಯಯನದ ವರದಿ ಹೇಳಿದೆ. ಅಲ್ಲದೆ, ವೈದ್ಯರು ಕೂಡ ಎಚ್ಚರಿಕೆ ಕೂಡ ನೀಡುತ್ತಿದ್ದಾರೆ.
ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ದೀರ್ಘಕಾಲದವರೆಗೆ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ ಎಂದು ಹೇಳುತ್ತದೆ. ಅಲ್ಲದೆ, ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಮತ್ತೊಂದು ಅಧ್ಯಯನ ಹೇಳೋದು ಪ್ಲಾಸ್ಟಿಕ್ ಉತ್ಪನ್ನಗಳು ಬಿಸಿನೀರಿನೊಂದಿಗೆ ಸಂಪರ್ಕಕ್ಕೆ ಬಂದಾಗ, ಅವು ಪ್ರತಿ ಲೀಟರ್‌ಗೆ ಟ್ರಿಲಿಯನ್‌ಗಟ್ಟಲೆ ನ್ಯಾನೊಪರ್ಟಿಕಲ್‌ಗಳನ್ನು ನೀರಿಗೆ ಬಿಡುಗಡೆ ಮಾಡುತ್ತವೆ. ಇಂತಹ ನೀರು ದೀರ್ಘಕಾಲದವರೆಗೆ ಸೇವಿಸಿದಾಗ, ಈ ರಾಸಾಯನಿಕಗಳು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಪಡಿಸಬಹುದು ಮತ್ತು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಹೇಳಿದೆ.
ಬಾಟಲಿಯಲ್ಲಿದ್ದ ನೀರನ್ನು ಬಹುಬೇಗ ಖಾಲಿ ಮಾಡಬೇಕು. ಬಿಸಿಲಿನ ತಾಪ ಮತ್ತು ಕಾರಿನ ಹಿಟ್ಗೆ ನೀರು ಬೇಗನೆ ಬಿಸಿಯಾಗುತ್ತೆ. ಹೀಗಾಗಿ, ತಣ್ಣಗೆ ಇದ್ದಾಗಲೇ ನೀರು ಸೇವಿಸಿ, ಬಿಸಿಯಾದಾಗ ಬೇಡ. ಕಾರಿನಲ್ಲಿ ಎರಡ್ಮೂರು ದಿನ ಬಾಟಲ್ ಇಟ್ಟುಕೊಳ್ಳಬೇಡಿ. ಯಾಕೆಂದರೆ ನಿಮಗೆ ತಿಳಿಯದೇ ಮತ್ತೊಬ್ಬರು ಕುಡಿಯಬಹುದು. ತುರ್ತು ಸಂದರ್ಭದಲ್ಲಿ ಮಾತ್ರ 48 ಗಂಟೆಯೊಳಗೆ ಮಾತ್ರ ಬಾಟಲಿ ನೀರು ಸೇವಿಸಿ.(ಏಜೆನ್ಸೀಸ್)