Ghee: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ವಸ್ತುಗಳು ನಕಲಿ ಮತ್ತು ಕಲಬೆರಕೆಯನ್ನು ಹೊಂದಿರುತ್ತದೆ. ಅಲ್ಲದೆ, ಕೆಲವು ಬಾರಿ ಪರೋಕ್ಷವಾಗಿ ಕೂಡ ಕಲಬೆರಕೆ ಪ್ರೊಡಕ್ಟ್ಗಳನ್ನು ಖರೀದಿ ಮಾಡಿ ಮನೆಗೆ ತಂದಿರುತ್ತವೆ. ಹೀಗಾಗಿ, ಕೆಲ ವಿಭಿನ್ನ ಪ್ರಯತ್ನಗಳಿಂದ ನಕಲಿ ಅಥವಾ ಕಲಬೆರಕೆ ವಸ್ತುಗಳನ್ನು ಕಂಡುಹಿಡಿಯಬಹುದು. ಹೇಗಂತೀರಾ? ಇಲ್ಲಿದೆ ನೋಡಿ..
ಇದೀಗ ಹೋಳಿ ಹಬ್ಬ ಹತ್ತಿರ ಬರುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡ ಕೆಲ ಜನರು ನಕಲಿ ಬ್ರ್ಯಾಂಡ್ಗಳು ಮಾರುಕಟ್ಟೆಯಲ್ಲಿ ಇಳಿಸುತ್ತಾರೆ. ಇದರಲ್ಲಿ ಮುಖ್ಯವಾಗಿ ಕಲಬೆರಕೆ ತುಪ್ಪ. ಹೌದು, ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ದಾಳಿಯಲ್ಲಿ 10 ಸಾವಿರ ಲೀಟರ್‌ಗೂ ಹೆಚ್ಚು ಕಲಬೆರಕೆ ತುಪ್ಪ ಪತ್ತೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ತುಪ್ಪ ತಗೆದುಕೊಳ್ಳಬೇಕೋ ಬೇಡವೋ ಎಂಬುವಂತಾಗಿದೆ.
ಅಲ್ಲದೆ, ಕಲಬೆರಕೆ ತುಪ್ಪ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುವದಲ್ಲದೆ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುವುದು. ಹೀಗಾಗಿ, ಇಂತಹ ಸಮಯದಲ್ಲಿ ತುಪ್ಪವನ್ನು ಖರೀದಿಸುವ ಮೊದಲು ಅದನ್ನು ಗುರುತಿಸುವುದು ಮುಖ್ಯ. ಮಾರುಕಟ್ಟೆಯಲ್ಲಿ ಮಾರಾಟವಾಗುವ ನಕಲಿ ತುಪ್ಪವು ನಿಜವಾದ ತುಪ್ಪದಂತೆಯೇ ಕಾಣುತ್ತದೆ ಮತ್ತು ಅದಕ್ಕೆ ತುಪ್ಪದ ಪರಿಮಳವನ್ನು ನೀಡಲು ಅದರಲ್ಲಿ ಹಲವು ರೀತಿಯ ಕಲಬೆರಕೆ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೋಸ ಹೋಗಬಹುದು. ನಿಜವಾದ ಮತ್ತು ನಕಲಿ ತುಪ್ಪವನ್ನು ಸರಳ ಟ್ರಿಕ್ಸ್ಗಳಿಂದ ಮನೆಯಲ್ಲಿಯೇ ಗುರುತಿಸಿ.
1. ನಿಮ್ಮ ಕೈಯಲ್ಲಿ ಸಲ್ಪ ತುಪ್ಪವನ್ನು ತಗೆದುಕೊಂಡು ಉಜ್ಜಿಕೊಳ್ಳಿ, ತುಪ್ಪ ನಿಜವಾಗಿದ್ದರೆ ಅದು ಕೂಡಲೇ ಕರಗುತ್ತದೆ. ಆಹ್ಲಾದಕಾರ ಸುವಾಸೆಯನ್ನು ಬಿರುತ್ತದೆ.
2. ಒಂದು ವೇಳೆ ನಕಲಿ ತುಪ್ಪವಾಗಿದ್ದರೆ ಕೈಯಲ್ಲಿ ಎಷ್ಟೆ ಉಜ್ಜಿದರೂ ಕರಗುವುದಿಲ್ಲ. ಅಲ್ಲದೆ, ವಿಚಿತ್ರವಾಸ ವಾಸನೆ ಬರಲು ಆರಂಭಿಸುತ್ತದೆ.
3. ಉಗುರು ಬೆಚ್ಚಗಿನ ನೀರಿನಲ್ಲಿ ತುಪ್ಪ ಬೆರೆಸಿ ಪ್ರಯತ್ನಿಸಿ. ನಿಜವಾದ ತುಪ್ಪ ನೀರಿನಲ್ಲಿ ತೇಲಲು ಪ್ರಾರಂಭಿಸುತ್ತದೆ ಮತ್ತು ನೀರಿನ ಮೇಲೆ ಒಂದು ಪದರವನ್ನು ರೂಪಿಸುತ್ತದೆ. ಆದರೆ, ನಕಲಿ ನೀರಿನಲ್ಲಿ ತಕ್ಷಣವೇ ಕರಗಿ ಕೆಳಭಾಗದಲ್ಲಿ ನೆಲೆಗೊಳ್ಳುತ್ತದೆ.(ಏಜೆನ್ಸೀಸ್)