Sleeping  
ಲೈಫ್‌ಸ್ಟೈಲ್

ಚಳಿಗಾಲದಲ್ಲಿ ರಾತ್ರಿ ಸ್ವೆಟರ್ ಧರಿಸಿ ಮಲಗುವುದು ಒಳ್ಳೆಯದೇ? Sweater

Sleeping With Sweater: ಚಳಿಗಾಲದಲ್ಲಿ ಬೆಚ್ಚಗಿರಲು ಅನೇಕ ಜನರು ರಾತ್ರಿಯಲ್ಲಿ ಸ್ವೆಟರ್ ಧರಿಸಿ ಮಲಗುತ್ತಾರೆ. ಆದರೆ, ರಾತ್ರಿಯಲ್ಲಿ ಸ್ವೆಟರ್ ಧರಿಸಿ ಮಲಗುವುದು ಒಳ್ಳೆಯದೇ? ಎನ್ನುವ ಪ್ರಶ್ನೆ ಹಲವರಿಗೆ ಇರುತ್ತದೆ. ಈ ವಿಷಯದ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎನ್ನುವ ಕುರಿತಾಗಿ ಇಂದು ತಿಳಿದುಕೊಳ್ಳೊಣ...
ರಾತ್ರಿ ಸ್ವೆಟರ್ ಧರಿಸಿ ಮಲಗುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ಮುಖ್ಯವಾಗಿ ನಿಮ್ಮ ದೇಹದ ತಾಪಮಾನ, ಕೋಣೆಯ ತಾಪಮಾನ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
ಚಳಿಗಾಲದಲ್ಲಿ ಕೋಣೆ ಬಹಳ ತಂಪಾಗಿದ್ದರೆ ಅಥವಾ ನಿಮಗೆ ತುಂಬಾ ಚಳಿ ಎನಿಸಿದರೆ ಸ್ವೆಟರ್ ಧರಿಸಿ ಮಲಗುವುದು ಸಹಜವಾಗಿ ಒಳ್ಳೆಯದು. ದೇಹ ತಾಪಮಾನ ಕಡಿಮೆಯಾದಾಗ ನಿದ್ರೆ ಚೆನ್ನಾಗಿ ಬರುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಅನೇಕ ಜನರು ಉಷ್ಣತೆ ಮತ್ತು ಸೌಕರ್ಯಕ್ಕಾಗಿ ಸ್ವೆಟರ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಹೊರಗೆ ಹೋಗುವಾಗ ಸ್ವೆಟರ್ ಧರಿಸುವುದು ಉತ್ತಮ. ಶೀತ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ.
ಒಳಾಂಗಣದಲ್ಲಿ ಸ್ವೆಟರ್ ಧರಿಸುವುದರಿಂದ ನಿಮಗೆ ಬೆವರು ಬರಬಹುದು. ಕೊಳಕು ಅಥವಾ ಹಳೆಯ ಸ್ವೆಟರ್ ಧರಿಸುವುದರಿಂದ ದದ್ದುಗಳು ಮತ್ತು ಕಿರಿಕಿರಿ ಉಂಟಾಗುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಆದ್ದರಿಂದ, ತಜ್ಞರು ಸಡಿಲವಾದ, ಆರಾಮದಾಯಕವಾದ ಸ್ವೆಟರ್ ಧರಿಸಲು ಶಿಫಾರಸು ಮಾಡುತ್ತಾರೆ.
ಸ್ವೆಟರ್ ತುಂಬಾ ದಪ್ಪವಾಗಿದ್ದರೆ ಅಥವಾ ಬಿಗಿಯಾಗಿದ್ದರೆ ದೇಹಕ್ಕೆ ಗಾಳಿ ಹೋಗದೇ ರಾತ್ರಿ ಬೆವರು ಬಂದು ತೊಂದರೆಯಾಗಬಹುದು. ಕೆಲವರಿಗೆ ಅಲರ್ಜಿ, ಚರ್ಮದ ಸಮಸ್ಯೆ ಇದ್ದರೆ ಸ್ವೆಟರ್‌ನ ಉಣ್ಣೆ ಅಥವಾ ಧೂಳು ತೊಂದರೆ ಕೊಡಬಹುದು.
ಮುನ್ನೆಚ್ಚರಿಕೆ:
ಉಣ್ಣೆಯ ಬಟ್ಟೆಗಳಲ್ಲಿರುವ ದಪ್ಪ ನಾರುಗಳು ಮತ್ತು ಸಣ್ಣ ರಂಧ್ರಗಳು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತವೆ. ಚಳಿಗಾಲದಲ್ಲಿ ಉಣ್ಣೆಯ ಬಟ್ಟೆಗಳಲ್ಲಿ ಮಲಗುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಈ ಹೆಚ್ಚಿದ ತಾಪಮಾನವು ಮಧುಮೇಹ ಅಥವಾ ಹೃದಯ ಕಾಯಿಲೆ ಇರುವವರಿಗೆ ಒಳ್ಳೆಯದಲ್ಲ. ಚರ್ಮದ ಅಲರ್ಜಿ ಇರುವವರು ಉಣ್ಣೆಯ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಒಣ ಚರ್ಮ ಹೊಂದಿರುವ ಜನರಿಗೆ ಈ ಸಮಸ್ಯೆ ಹೆಚ್ಚು ತೀವ್ರವಾಗಿರುತ್ತದೆ. ಆದ್ದರಿಂದ, ಮಲಗುವ ಮುನ್ನ ಹಗುರವಾದ ಬಟ್ಟೆಗಳನ್ನು ಧರಿಸುವುದು ಮತ್ತು ನಿಮ್ಮ ಚರ್ಮವನ್ನು ತೇವಾಂಶದಿಂದ ಇಡುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.