- ಚಿಕನ್ ಸ್ಕಿನ್‌ನಲ್ಲಿ ಕೊಬ್ಬು, ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ವಿಟಮಿನ್ 'ಇ' ಪೋಷಕಾಂಶಗಳಿವೆ.
- ಡೀಪ್ ಫ್ರೈ ಮಾಡಿದ ಚಿಕನ್ ಸ್ಕಿನ್‌ಗಿಂತ ಗ್ರಿಲ್ ಅಥವಾ ಬ್ರೇಕ್ ಮಾಡಿದ ಚಿಕನ್ ಸೇವಿಸುವುದು ಉತ್ತಮ.
- ಕ್ಯಾಲೋರಿ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವುದರಿಂದ ಮಿತವಾಗಿ ತಿನ್ನುವುದು ಸೂಕ್ತ.
Chicken Skin Benefits : ನಾನ್ವೆಜ್ ಪ್ರಿಯರಿಗೆ ಚಿಕನ್, ಮಟನ್ ಬೀಫ್ ಎಂದರೆ ತಿಂದರೆ ಸಾಕು, ಅದರಲ್ಲಿ ಒಳ್ಳೇದು ಯಾವುದು, ಪೋಷಕಾಂಶ ಹೆಚ್ಚಿಸುವ ಭಾಗ ಯಾವುದು ಎನ್ನುವ ಬಗ್ಗೆ ಅರಿವಿರೋದಿಲ್ಲ. ಆದರೆ, ಕೆಲವೊಮ್ಮೆ ದೇಹಕ್ಕೆ ಯಾವುದು ಬೆಸ್ಟ್ ಎನ್ನುವ ರೂಪುರೇಷೆ ಹಾಕಿಕೊಳ್ಳೋದು ಮುಖ್ಯ.
ಸಾಮಾನ್ಯವಾಗಿ ಕೆಲವರಿಗೆ ಚಿಕನ್ ಸ್ಕಿನ್ ರುಚಿ ಎನಿಸಿದರೆ, ಇನ್ನೂ ಕೆಲವರಿಗೆ ಅದನ್ನು ತಿನ್ನಲು ಇಷ್ಟವಾಗೋದಿಲ್ಲ. ಆದರೆ, ಚಿಕನ್ ಸ್ಕಿನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅಲ್ಲವೇ? ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.
ಚಿಕನ್ ಸ್ಕಿನ್ನಲ್ಲಿದೆ ಪೋಷಕಾಂಶ
ಚಿಕನ್ ಸ್ಕಿನ್‌ನಲ್ಲಿ ಕೊಬ್ಬಿನಾಂಶ ಇರುತ್ತದೆ. ಇದರಲ್ಲಿ ಅನ್-ಸ್ಯಾಚುರೇಟೆಡ್ ಫ್ಯಾಟ್ ಕೂಡ ಸ್ವಲ್ಪ ಮಟ್ಟಕ್ಕೆ ಇರುತ್ತದೆ. ಇಷ್ಟೇ ಅಲ್ಲದೆ, ಇದರ ಜೊತೆಗೆ ವಿಟಮಿನ್ ಇ ಸ್ವಲ್ಪ ಪ್ರಮಾಣದಲ್ಲಿದ್ದು, ಇವು ದೇಹಕ್ಕೆ ಪ್ರೋಟೀನ್ ಹಹಾಗೂ ದೇಹಕ್ಕೆ ಶಕ್ತಿ ನೀಡುವ ಕ್ಯಾಲೋರಿಯಾಗಿದೆ.
ಚಿಕನ್ ಸ್ಕಿನ್ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ದೇಹವು ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ.ಸ್ಕಿನ್‌ನೊಂದಿಗೆ ಬೇಯಿಸಿದ ಚಿಕನ್ ಹೆಚ್ಚು ಜ್ಯೂಸಿ ಹಾಗೂ ರುಚಿಕರವಾಗಿರುತ್ತದೆ.ಆರೋಗ್ಯವಂತ ವ್ಯಕ್ತಿಗಳು ಮಿತ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ.
ಚಿಕನ್ ಸ್ಕಿನ್ ತಿನ್ನುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆ
ಚಿಕನ್ ಸ್ಕಿನ್‌ನಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿರುವುದರಿಂದ ಇದನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ.
ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಚಿಕನ್ ಬದಲಾಗಿ ಪರ್ಯಾಯ ಮಾಂಸ ಸೇವನೆ ಮಾಡುವುದು ಉತ್ತಮ. ಚಿಕನ್ನಿಂದಾಗಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಸಾಧ್ಯತೆ ಇರಲಿದೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವವರು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.
ಹೇಗೆ ತಿಂದರೆ ಬೆಸ್ಟ್
ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದ ಚಿಕನ್ ತಿನ್ನುವುದಕ್ಕಿಂತಲೂ ಗ್ರಿಲ್ ಮಾಡಿದ ಚಿಕನ್ ಆಯ್ಕೆ ಮಾಡಿಕೊಳ್ಳಬೇಕು. ವಾರಕ್ಕೊಮ್ಮೆ ಚಿಕನ್ ತಿನ್ನುವುದು ಸಮತೋಲಿತ ಆಹಾರಕ್ಕೆ ಸಹಾಯವಾಗುತ್ತದೆ. ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನದೇ ನಿಯಂತ್ರಿತವಾಗಿ ತಿನ್ನಬೇಕು.
ಆರೋಗ್ಯ ತಜ್ಞರು ಹೇಳೋದೇನು?
ಅಪರೂಪಕ್ಕೊಮ್ಮೆ ಚಿಕನ್ ಸ್ಕಿನ್ ತಿನ್ನಬಹುದು.ಆದರೆ ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಚಿಕನ್ ಸ್ಕಿನ್ ಲೆಸ್ ತಿನ್ನೋದೆ ಬೆಸ್ಟ್.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.