ಲೈಫ್‌ಸ್ಟೈಲ್

IRCTC Tour Package: ಕಡಿಮೆ ಖರ್ಚಲ್ಲಿ ಅಜಂತಾ-ಎಲ್ಲೋರಾ ಪ್ರವಾಸ, ಪ್ಯಾಕೇಜ್ ಹೀಗಿದೆ

  • IRCTCಯಿಂದ ಅಜಂತಾ-ಎಲ್ಲೋರಾ ಬಂಪರ್ ಟೂರ್

  • ನಾಲ್ಕು ದಿನ ಮಹಾರಾಷ್ಟ್ರ ಸುತ್ತುವ ಆಸೆ ಹೊತ್ತವರಿಗೆ ಗುಡ್​ನ್ಯೂಸ್

  • ಕಡಿಮೆ ದರದಲ್ಲಿ ಅಜಂತಾ ಎಲ್ಲೋರಾ ನೋಡಲು ಅವಕಾಶ

ಪ್ರಾಚೀನ ಕಾಲದ ಗುಹೆಗಳು ಹಾಗೂ ಪ್ರಸಿದ್ಧ ದೇವಾಲಯ, ಕೋಟೆ ನೋಡಲು ಬಯಸುವ ಪ್ರವಾಸಿಗರಿಗೆ ಗುಡ್​ನ್ಯೂಸ್​​. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್​​ಸಿಟಿಸಿ) ಮಾರ್ವೆಲ್​ ಆಫ್​ ಮಹಾರಾಷ್ಟ್ರ ಹೆಸರಿನಲ್ಲಿ ಕಡಿಮೆ ದರದಲ್ಲಿ ಪ್ರವಾಸದ ಯೋಜನೆಯನ್ನು ಜಾರಿ ಮಾಡಿದೆ. ಇದು ಹೈದರಾಬಾದ್‌ನ ಕಾಚಿಗುಡದಿಂದ ಈ ಪ್ರವಾಸ ಆರಂಭವಾಗಲಿದೆ.

  • ಎಷ್ಟು ದಿನ ಈ ಪ್ರವಾಸ ಇರಲಿದೆ?

ಮಾರ್ವೆಲ್​ ಆಫ್​ ಮಹಾರಾಷ್ಟ್ರ ಪ್ರವಾಸವು ಮೂರು ರಾತ್ರಿಗಳು ಹಾಗೂ ನಾಲ್ಕು ದಿನಗಳ ಕಾಲ ಇರಲಿದೆ. ಪ್ರತಿ ಶುಕ್ರವಾರ ಸಂಜೆ 6:30 ಕ್ಕೆ ಕಾಚಿಗುಡದ ರೈಲು ನಿಲ್ದಾಣದಿಂದ 17064 ಅಜಂತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭವಾಗುತ್ತದೆ ಎನ್ನಲಾಗಿದೆ.

  • ಏನೆಲ್ಲ ನೋಡಲು ಅವಕಾಶ?

ಇನ್ನೂ ಶನಿವಾರ ಬೆಳಿಗ್ಗೆ ಬೆಳಿಗ್ಗೆ 5:25 ಕ್ಕೆ ಛತ್ರಪತಿ ಸಂಭಾಜಿನಗರಕ್ಕೆ ರೈಲು ತಲುಪುತ್ತದೆ. ಅಲ್ಲಿ ಖಾಸಗಿ ಹೋಟೆಲ್​​ನಲ್ಲಿ ತಿಂಡಿ ಮುಗಿಸಿಕೊಂಡ ನಂತರ ಎಲ್ಲೋರ ಗುಹೆ ಮತ್ತು ಗುಹೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ. ಸಂಜೆ ಐತಿಹಾಸಿಕ ಪ್ರಸಿದ್ಧ ಬೀಬಿ ಮಕ್ಬರಾ ವೀಕ್ಷಣೆಗೆ ಅವಕಾಶ ಇರುತ್ತದೆ. ರಾತ್ರಿ ಸಂಭಾಜಿನಗರದ ಹೋಟೆಲ್​​ನಲ್ಲಿ ತಂಗಲು ಸೌಲಭ್ಯವಿರಲಿದೆ.

ಭಾನುವಾರ ಬೆಳಿಗ್ಗೆ ತಿಂಡಿ ನಂತರ ಚೆಕ್​​ಔಟ್​​​​ ಇರುತ್ತದೆ. ಸುಮಾರು 100 ಕಿ.ಮೀ ದೂರದಲ್ಲಿರುವ ಅಜಂತಾ ಗುಹೆ ನೋಡಲು ಸೌಲಭ್ಯ ಕಲ್ಪಿಸಲಾಗುತ್ತದೆ.ರಾತ್ರಿ 10:45 ಕ್ಕೆ 17063 ರೈಲಿನಲ್ಲಿ ಕಾಚಿಗುಡಕ್ಕೆ ಹೊರಡುತ್ತೀರಿ. ಸೋಮವಾರ ಬೆಳಿಗ್ಗೆ 9:45 ಕ್ಕೆ ಕಾಚೆಗುಡಕ್ಕೆ ಆಗಮಿಸುವುದರೊಂದಿಗೆ ಪ್ರವಾಸವು ಮುಕ್ತಾಯಗೊಳ್ಳುತ್ತದೆ.

  • ಪ್ಯಾಕೇಜ್ ದರ ಹೀಗಿದೆ (ಜುಲೈ 2026 ರಿಂದ ಜಾರಿಗೆ ಬಂದಿರುವಂತೆ)

  • 1 ರಿಂದ 3 ಪ್ರಯಾಣಿಕರಿಗೆ: ಕಂಫರ್ಟ್ (3AC): ಸಿಂಗಲ್ ಶೇರಿಂಗ್ 22,730, ಅವಳಿ ಹಂಚಿಕೆ 13,340, ಟ್ರಿಪಲ್ ಶೇರಿಂಗ್​​ 10,700 ರಿಂದ ಪ್ರಾರಂಭ.

  • ಸ್ಟ್ಯಾಂಡರ್ಡ್ : ಸಿಂಗಲ್ ಶೇರಿಂಗ್ 21,230ರೂ., ಇಬ್ಬರಿಗೆ ಹಂಚಿಕೆ 11,830ರೂ., ಟ್ರಿಪಲ್ ಶೇರಿಂಗ್ 9,200ರೂ. ರಿಂದ ಆರಂಭ. 4 ರಿಂದ 6 ಪ್ರಯಾಣಿಕರಿಗೆ ಕಂಫರ್ಟ್: ಟ್ವಿನ್ ಹಂಚಿಕೆ 10,810ರೂ., ಟ್ರಿಪಲ್ ಶೇರಿಂಗ್ 10,150.

(ಹಾಸಿಗೆ ಇರುವ ಅಥವಾ ಇಲ್ಲದ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ವಿಶೇಷ ದರಗಳು ಅನ್ವಯಿಸುತ್ತವೆ).

  • ಪ್ಯಾಕೇಜ್‌ನಲ್ಲಿ ಏನೆಲ್ಲ ಸೌಲಭ್ಯಗಳಿದೆ

  • ರೈಲು ಪ್ರಯಾಣ

  • ಎಸಿ ವಾಹನ ಸೌಲಭ್ಯ

  • ಒಂದು ರಾತ್ರಿ ಹೋಟೆಲ್ ವಸತಿ

  • ಎರಡು ಉಪಹಾರಗಳು

  • ಪ್ರಯಾಣ ವಿಮೆ

  • ಪ್ರೇಕ್ಷಣೀಯ ಸ್ಥಳಗಳಿಗೆ ಸಾರಿಗೆ, ಟೋಲ್‌ಗಳು, ಪಾರ್ಕಿಂಗ್ ಮತ್ತು ಜಿಎಸ್‌ಟಿ

  • ಪ್ಯಾಕೇಜ್‌ನಲ್ಲಿ ಒಳಗೊಳ್ಳದ ಅಂಶಗಳು

  • ಮಧ್ಯಾಹ್ನ ಹಾಗೂ ರಾತ್ರಿಯ ಊಟ ಮತ್ತು ರೈಲಿನಲ್ಲಿ ಆಹಾರ

  • ಪ್ರವಾಸ ಮಾರ್ಗದರ್ಶಿಮತ್ತು ಹೆಚ್ಚುವರಿ ಮನರಂಜನಾ ಚಟುವಟಿಕೆಗಳ ಖರ್ಚುಗಳು

  • ಹೆಚ್ಚಿನ ಮಾಹಿತಿಗಾಗಿ ಐಎಸ್​ಆರ್​ಟಿಸಿ ವೆಬ್​ಸೈಟ್​ಗೆ ಭೇಟಿ ನೀಡಿ (ಏಜೆನ್ಸೀಸ್).