Instagram Instants  
ಲೈಫ್‌ಸ್ಟೈಲ್

'Instagram ‘Instants’ ತಂದಿಟ್ಟ ಫಜೀತಿ; ಫೋಟೋಗಳು ಅಚಾನಕ್ಕಾಗಿ ಅಪ್ಲೋಡ್​ ಆಗುತ್ತಿದ್ದರೆ ಹೀಗೆ ಮಾಡಿ!

ಪ್ರಮುಖ ಮುಖ್ಯಾಂಶಗಳು

  • ಇನ್​ಸ್ಟಾಗ್ರಾಮ್​ ಇನ್​ಸ್ಟಂಟ್ ಫೀಚರ್​ ತಂದ ಫಜೀತಿ
  • ಕನ್ಫರ್ಮ್​ಮೇಷನ್​ ಇಲ್ಲದೆ ಫೋಟೋಗಳು ಅಪ್ಲೋಡ್​​, ಬಳಕೆದಾರರಿಗೆ ತಲೆನೋವು
  • ಇನ್​ಸ್ಟಾಗ್ರಾಮ್​ ಇನ್​ಸ್ಟಂಟ್ ಫೀಚರ್​ ಆಫ್​ ಮಾಡೋದು ಹೇಗೆ?
Instagram Instants : ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಒಡೆತನದ ಮೆಟಾ ತನ್ನ Gen Z ಬಳಕೆದಾರರಿಗಾಗಿ ಇನ್​ಸ್ಟಂಟ್​ (Instagram Instant) ಎಂಬ ಹೊಸ ಫೀಚರ್​  ರಿಲೀಸ್​ ಮಾಡಿತ್ತು. ಇದು ಸ್ನ್ಯಾಪ್​ಚಾಟ್​​ನಂತೆ ಕ್ಷಣಕ್ಕೂ ಮಾಹಿತಿಯನ್ನು ಫಾಲೋವರ್ಸ್​​ಗೆ ನೀಡಬಹುದಾದ ಹೊಸ ಫೀಚರ್​. 
ಆದ್ರೆ ಇದರ ಅವಶ್ಯಕತೆ ಹೆಚ್ಚಿನವರಿಗೆ ಇಲ್ಲ. ಕೆಲವೊಬ್ಬರಿಗೆ ಇದನ್ನು ಹೇಗೆ ಬಳಕೆ ಮಾಡುವುದು ಎಂದು ತಿಳಿಯದೇ ಅಚಾತುರ್ಯದಿಂದ ಗೊಂದಲಕ್ಕೆ ಒಳಗಾಗಿ ಯಾವ್ಯಾವುದೋ ಫೋಟೋಗಳನ್ನು  ಶೇರ್​ ಮಾಡಿಕೊಂಡು ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ನೀವು ಸಹ ಇಂತಹ ಫಜೀತಿಗೆ ಒಳಗಾಗಿದ್ದರೆ  ಈ ಫೀಚರ್ ಅನ್ನು ಹೇಗೆ ಡಿಸೇಬಲ್ (Disable) ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಇನ್​ಸ್ಟಾಗ್ರಾಮ್​ ಇನ್​ಸ್ಟಂಟ್ ಫೀಚರ್?

ಇನ್​ಸ್ಟಾಗ್ರಾಮ್​ ಇನ್​ಸ್ಟಂಟ್ ಎಂದರೆ ಇದೊಂದು ರೀತಿಯ ಸ್ನ್ಯಾಪ್​ಚಾಟ್​ ಫೀಚರ್​ ಇದ್ದಂತೆ. ನಾವು ಕ್ಷಣಕ್ಕೂ ಮಾಹಿತಿ ಹಂಚಿಕೊಳ್ಳಬಹುದು. ಉದಾಹರಣೆಗೆ: ಎಲ್ಲಿದ್ದೇವೆ, ಶಾಪಿಂಗ್​ನಲ್ಲಿ ಕೊಂಡುಕೊಂಡಿದ್ದೇನು, ಸೂರ್ಯನ ಪ್ರಖರತೆ, ಚಂದ್ರನ ಶಾಂತಿಯುತ ಬೆಳದಿಂಗಳು, ನಕ್ಷತ್ರಗಳು, ಮಳೆ, ಸ್ಪೆಷಲ್ ತಿಂಡಿ ಊಟ ಹೀಗೆ ನಾನಾ ರೀತಿಯಲ್ಲಿ ಫಿಲ್ಟರ್​ ಮಾಡದ ಫೋಟೋಗಳನ್ನು ಹಂಚಿಕೊಳ್ಳಬಹುದು. ಇದನ್ನು ನಿಮ್ಮ ಫಾಲೋವರ್​ಗಳು ಕೆಲ ಕ್ಷಣ ನೋಡಬಹುದು. ಇವನ್ನು ಒಂದು ವರ್ಷದವರೆಗೂ Archiveನಲ್ಲಿ ಉಳಿಸಿಕೊಳ್ಳಬಹುದಾಗಿದೆ. 
ನೀವು ಹಂಚಿಕೊಂಡ ಸ್ಟೋರಿಗೆ ನಿಮ್ಮ ಫಾಲೋವರ್ಸ್​ ಲೈಕ್​ ಮತ್ತು ಕಾಂಎಂಟ್ ಮಾಡಬಹುದು. ಇದು ನೇರವಾಗಿ ಡಿಎಂ ಆಗುತ್ತದೆ. ಈ ಫೀಚರ್​ನಲ್ಲಿ ಸ್ಲೀಪ್​ ಮೋಡ್​, ಪೋಷಕರ ಮೇಲ್ವಿಚಾರಣೆ ಸೇರಿದಂತೆ ಹದಿಹರೆಯದ ಬಳಕೆದಾರರ ಬಗ್ಗೆ ಮೇಲ್ವಿಚಾರಣೆ  ಫೀಚರ್​ ಇದೆ.

ಗೌಪತ್ಯ ಬಗ್ಗೆ

ಇನ್​ಸ್ಟಾಗ್ರಾಮ್​ನಲ್ಲಿ  ಪರಿಚಯಿಸಲಾದ ಇನ್​ಸ್ಟಂಟ್​ ಫೀಚರ್​ ಮೂಲಕ ಹಂಚಿಕೊಂಡ ಫೋಟೋ 24 ಗಂಟೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಇದನ್ನು ಸ್ಕ್ರೀನ್​ ರೆಕಾರ್ಡ್​ ಮಾಡಿಕೊಳ್ಳಲಾಗಲಿ, ಸ್ಕ್ರೀನ್​ ಶಾರ್ಟ್​ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಿಯಾಕ್ಷನ್​ ಮತ್ತು ರಿಪ್ಲೈಗಳು ಪ್ರವೈಟ್​ನಲ್ಲಿರುತ್ತದೆ ಎನ್ನಲಾಗಿದೆ. 

ಇನ್​ಸ್ಟಂಟ್ ಫೀಚರ್ ಆಫ್ ಮಾಡೋದು ಹೇಗೆ?

  • ಇನ್​ಸ್ಟಾಗ್ರಾಂ ಆಪ್​ ಓಪನ್​ ಮಾಡಿ ಅಲ್ಲಿ ನಿಮ್ಮ ಪ್ರೊಫೈಲ್​ ಪಿಕ್​ ಮೇಲೆ ಕ್ಲಿಕ್ ಮಾಡಿ
  • ಸೆಟ್ಟಿಂಗ್ಸ್​ಗೆ ಹೋಗಿ, ಅಲ್ಲಿ ಕಂಟೆಂಟ್​   ಫ್ರಿಫರೆನ್ಸ್​ ಓಪನ್​ ಮಾಡಿ, ಸಿಗದೆ ಹೋದರೆ ಸರ್ಚ್​ ಬಟನ್​ ಒತ್ತಿ  Content Prefrence ಎಂದು ಟೈಪ್​ ಮಾಡಿ, ಓಪನ್​ ಮಾಡಿ.
  • ಹೈಡ್​ ಇನ್​ಸ್ಟಾಂಟ್​ ಬಾಕ್ಸ್​ ಎನ್ನುವ ಆಪ್ಷನ್​ ಮೇಲೆ ಕ್ಲಿಕ್ ಮಾಡಿ
  • ಟಾಗಲ್​ ಇನ್​ಬಾಕ್ಸ್​ ಮೇಲೆ ಕ್ಲಿಕ್​ ಮಾಡಿದಾಗ ವಿಕಾರ-ಆಕಾರದಲ್ಲಿ ನಿಮ್ಮ ಪಟ ತೆಗೆದು ತಿಳಿಯದೇ ಪೋಸ್ಟ್​ ಆಗುವ ಪರಿಪಾಟಲನ್ನು ತಪ್ಪಿಸಬಹುದಾಗಿದೆ
ಮಕ್ಕಳ ಸುರಕ್ಷತೆಗಾಗಿ ಹೀಗಿದೆ..
ಹದಿಹರೆಯದ ಮಕ್ಕಳ ಸುರಕ್ಷತೆಗಾಗಿ ಇನ್​ಸ್ಟಾಗ್ರಾಮ್​​ ಟೀನ್​ ಅಕೌಂಟ್ಸ್​ ಮತ್ತು ಫ್ಯಾಮಿಲಿ ಸೆಂಟರ್​ ಅನ್ನು ಪರಿಚಯ  ಮಾಡಿಸಿದೆ.