ಆರೋಗ್ಯದ ವಿಚಾರ ಯಾವಾಗ ಯಾರಿಗೆ ಹೇಗೆ ಅನಾರೋಗ್ಯ ಕಾಡುತ್ತದೋ ಗೊತ್ತಾಗಲ್ಲ. ಅಂಥ ಪರಿಸ್ಥಿತಿ ಇತ್ತೀಚಿನದ್ದು. ಅಸ್ಸಾಂನ ಏಳು ವರ್ಷದ ಬಾಲಕ ಸಾಗರ್ ದೋರ್ಜಿಗೆ ಕಾಡಿದ ಸಮಸ್ಯೆ ಭಿನ್ನವಾದುದು. ಆತನ ಕಣ್ಣಗುಡ್ಡೆಗಳು ಊದಿಕೊಂಡು, ರಕ್ತ ಹೊರಬಂದು ಹೊರಬಂದು ದೃಷ್ಟಿ ಕಳೆದುಕೊಂಡಿದ್ದ!
ಈ ವಿಲಕ್ಷಣ ಆರೋಗ್ಯ ಸಮಸ್ಯೆಯಿಂದಾಗಿ ಬಾಲಕ ನೋವು ಉಣ್ಣುತ್ತಿದ್ದರೆ, ಕುಟುಂಬ ನೆಮ್ಮದಿ ಕಳೆದುಕೊಂಡಿತ್ತು. ಇದು ಏನು ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ ಎನ್ನುತ್ತಾರೆ ಬಾಲಕನ ತಂದೆ ಪ್ರಕಾಶ್, ತಾಯಿ ಕುಸುಮಾ ದೋರ್ಜಿ. ಈ ವಿಚಾರ ಸುದ್ದಿಯಾದಾಗ ಅಸ್ಸಾಂನ ರಾಜ್ಯ ಸಚಿವ ಹಿಮಂತ ಬಿಸ್ವಾ ಗಮನಸೆಳೆಯಿತು. ಅವರು ಈ ಮಗುವನ್ನು ಬೆಂಗಳೂರಿಗೆ ಕರೆದೊಯ್ದು ಕೀಮೋಥೆರಪಿ ಚಿಕಿತ್ಸೆ ಕೊಡಿಸಿದರು. ಇದನ್ನು ಲುಕೇಮಿಯಾ ಎಂದು ಡಾಕ್ಟರ್ಗಳು ಆಗ ಗುರುತಿಸಿದ್ದರು.
ಬ್ರಿಟಿಷ್ ಇನ್ವೆಸ್ಟ್ಮೆಂಟ್ ಬ್ಯಾಂಕರ್ ನೀತಾ ಶಿವಾ ಅವರ ಗಮನವನ್ನೂ ಈ ಸ್ಟೋರಿ ಸೆಳೆದ ಕಾರಣ, ಈ ಮಗುವಿನ ಚಿಕಿತ್ಸೆಯ ವೆಚ್ಚವನ್ನು ಅವರು ಭರಿಸಿದ್ದರು. ಸೂಕ್ತ ಚಿಕಿತ್ಸೆಯ ನಂತರ ಸಾಗರ್ಗೆ ದೃಷ್ಟಿ ಮರಳಿದ್ದು, ಎಲ್ಲ ಮಕ್ಕಳಂತೆ ಈತನೂ ತನ್ನ ಚಟುವಟಿಕೆ ಮುಂದುವರಿಸಿದ್ದಾನೆ.

ಏನಾಗಿತ್ತು: ಸಾಗರ್ನ ಪಾಲಕರು ಹೇಳುವ ಪ್ರಕಾರ, ಆರಂಭದಲ್ಲಿ ಡಾಕ್ಟರ್ಗಳಿಗೆ ಈ ರೋಗ ಏನು ಎಂಬುದು ಗೊತ್ತಾಗಿರಲಿಲ್ಲ. ಬೆಂಗಳೂರಿನ ಡಾಕ್ಟರ್ಗಳು ಅಕ್ಯೂಟ್ ಮೆಲೋಯ್ಡ್ ಲ್ಯುಕೇಮಿಯಾ ಎಂದು ಡಯಾಗ್ನಸ್ ಮಾಡಿದ್ದರು. ಇದು ವಿರಳ ಪ್ರಕರಣವಾಗಿದ್ದು, ಕಣ್ಣಿನ ರಕ್ತನಾಳಗಳು ಊದಿಕೊಂಡು ಕಣ್ಣಗುಡ್ಡೆ ಹೊರಬಂದಿದ್ದವು. ಮಗು ದೃಷ್ಟಿಯನ್ನೂ ಕಳೆದುಕೊಂಡಿದ್ದ. ಡಾಕ್ಟರ್ಗಳು ಆಸೆ ಬಿಟ್ಟಿದ್ದರು. ಆದರೆ ನಮಗೆ ಮಗನ ಮೇಲೆ ನಂಬಿಕೆ ಇತ್ತು.
ಸಹೋದರಿ ಇಪಾದೇವಿ ದಾನಿಯಾದ ಪರಿಣಾಮ ಸಾಗರ್ ಬೋನ್ ಮ್ಯಾರೋ ಚಿಕಿತ್ಸೆ ಪಡೆದುಕೊಳ್ಳುವುದು ಸಾಧ್ಯವಾಯಿತು. ಮಗುವಿನ ಚಿಕಿತ್ಸೆಗೆ ಕೇಂದ್ರ ಸರ್ಕಾರ ನೆರವು ನೀಡಿತ್ತು. ಅಲ್ಲದೆ, ಬ್ರಿಟಿಷ್ ಇನ್ವೆಸ್ಟ್ಮೆಂಟ್ ಬ್ಯಾಂಕರ್ ನೀತ ಶಿವಾ ಕೂಡ ಹಣ ನೀಡಿದ್ದು, ನಾಲ್ಕು ವರ್ಷಗಳಿಂದ ಸಹಾಯ ನೀಡುತ್ತ ಬಂದಿದ್ದಾರೆ. ಬ್ರಿಟನ್ನ ಜನ ತುಂಬ ನೆರವು ನೀಡಿದ್ದಾರೆ. ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ ಎಂದು ಡೇಲಿ ಮೇಲ್ಗೆ ತಿಳಿಸಿದ್ದಾರೆ.
ಸಾಗರ್ನ ದೃಷ್ಟಿ ಮರಳುವುದಕ್ಕೆ ಬ್ರಿಟಿಷ್ ಸರ್ಜನ್ ಕೆನ್ ನಿಶ್ಚಲ್ ಮತ್ತು ರಾಮಪ್ಪ ಮುರಳೀಧರ್ ಎಂಬ ಹೈದರಾಬಾದ್ನ ಎಲ್ವಿ ಪ್ರಸಾದ್ ಹಾಸ್ಪಿಟಲ್ನ ಡಾಕ್ಟರ್ ಕಾರಣ. ಬೆಂಗಳೂರಿನಲ್ಲಿ ಡಾ.ಸುನೀಲ್ ಭಟ್ ಸಾಗರ್ನ ಲ್ಯುಕೇಮಿಯಾಕ್ಕೆ ಚಿಕಿತ್ಸೆ ಕೊಟ್ಟಿದ್ದರು. ಈ ಚಿಕಿತ್ಸೆ ಸಾಗರ್ಗೆ ದೊರಕಿ ಮೂರು ವರ್ಷಗಳಾಗಿದ್ದು, ಆತನ ಕ್ಯಾನ್ಸರ್ ಬಹುತೇಕ ಗುಣವಾಗಿದೆ. (ಏಜೆನ್ಸೀಸ್)