Vastu tips; ಊಟ ಮಾಡುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತುಕೊಳ್ಳುವುದು ಸಹ ಆರೋಗ್ಯಕ್ಕೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಊಟ ಮಾಡುವಾಗ ಕುಳಿತುಕೊಳ್ಳುವ ದಿಕ್ಕು ಆರೋಗ್ಯ, ಶಕ್ತಿ, ಮತ್ತು ಸಂಪತ್ತಿಗೆ ಸಂಬಂಧಿಸಿದೆ. ಹಾಗಾಗಿ ನೀವು ಊಟ ಮಾಡುವಾಗ ತಪ್ಪು ದಿಕ್ಕಿನಲ್ಲಿ ಕುಳಿತುಕೊಂಡರೆ, ಅದು ಆರೋಗ್ಯದ ಮೇಲೆ ಮಾತ್ರವಲ್ಲದೆ ನಿಮ್ಮ ಸಂತೋಷ, ಸಮೃದ್ಧಿ ಮತ್ತು ಜೀವನದಲ್ಲಿ ಅದೃಷ್ಟದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ನಾವು ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ಸೂಕ್ತ ಎಂಬುದನ್ನು ತಿಳಿಯೋಣ.
ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿಕೊಂಡು ಕುಳಿತುಕೊಂಡು ಊಟ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ. ಇದು ಆರೋಗ್ಯ ಸುಧಾರಣೆ ಮತ್ತು ಜೀರ್ಣಕ್ರಿಯೆಗೆ ಸಹಾಯಕ ಎಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಊಟ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ. ಜೊತೆಗೆ ದೇಹದಲ್ಲಿ ಶಕ್ತಿಯ ಹರಿವನ್ನು ಸಮತೋಲನಗೊಳಿಸುತ್ತದೆ.
ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿಕೊಂಡು ಕುಳಿತರೆ ಸಂಪತ್ತು ಮತ್ತು ಸಮೃದ್ಧಿಗೆ ಒಳ್ಳೆಯದು. ಇದು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ವಾಸ್ತು ಪ್ರಕಾರ ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಊಟ ಮಾಡುವುದರಿಂದ ಮನಸ್ಸು ಸ್ಪಷ್ಟವಾಗುತ್ತದೆ ಎಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಊಟ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ನಿರಂತರ ಹರಿವು ಹೆಚ್ಚಾಗುತ್ತದೆ.
ಇದನ್ನೂ ಓದಿ: ಐಷಾರಾಮಿ ಕಾರು ತೆರಿಗೆ ವಂಚನೆ ಆರೋಪ; ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರ್ ಮನೆ ಮೇಲೆ ದಾಳಿ| Numkhor operation
ಪಶ್ಚಿಮ ದಿಕ್ಕಿನ ಕಡೆಗೆ ಕುಳಿತುಕೊಳ್ಳುವುದು ಸಹ ಸ್ವೀಕಾರಾರ್ಹ ಎಂದು ಹೇಳಲಾಗಿದೆ. ಆದರೆ ಈ ದಿಕ್ಕಿಗೆ ಪೂರ್ವ ಮತ್ತು ಉತ್ತರಕ್ಕಿಂತ ಕಡಿಮೆ ಆದ್ಯತೆ ನೀಡಲಾಗಿದೆ. ಈ ದಿಕ್ಕು ಸಹ ಸ್ಥಿರತೆ ಮತ್ತು ಶಾಂತಿಯನ್ನು ನೀಡುತ್ತದೆ.
ಈ ದಿಕ್ಕಿನ ಕಡೆಗೆ ಮುಖ ಮಾಡಿಕೊಂಡು ಊಟ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಯಮನ ದಿಕ್ಕು ಎಂದು ಹೇಳಲಾಗಿದ್ದು, ಋಣಾತ್ಮಕ ಪರಿಣಾಮ ಬೀರಬಹುದು ಎನ್ನಲಾಗಿದೆ. ಈ ದಿಕ್ಕಿನಲ್ಲಿ ಆಹಾರವನ್ನು ಸೇವಿಸುವುದರಿಂದ ಜೀವನದಲ್ಲಿ ತೊಂದರೆಗಳು, ಅಡೆತಡೆಗಳು ಮತ್ತು ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಇಲ್ಲಿರುವ ಮಾಹಿತಿಯನ್ನು ಧಾರ್ಮಿಕ ನಂಬಿಕೆಗಳು ಆಧ್ಯಾತ್ಯಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)