ಲೈಫ್‌ಸ್ಟೈಲ್

Weight Loss Tips | ನೀವು ತೂಕ ಇಳಿಸಿಕೊಳ್ಳಬೇಕು ಅಂದ್ಕೊಂಡಿದೀರಾ? ಹಾಗಾದ್ರೆ ನಿಮ್ಮ ಆಹಾರದಲ್ಲಿ ಈ ಪಲ್ಯ ಇರಲೇಬೇಕು…!

ಬೆಂಗಳೂರು: ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸುವುದು ಬಹಳ ಕಷ್ಟ ಎಂಬುದು ನಮಗೆಲ್ಲಾ ತಿಳಿದಿದೆ. ತೂಕ ಹೆಚ್ಚಿದ ನಂತರ ನಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಬೊಜ್ಜು ಮತ್ತು ಹೆಚ್ಚಾದ ದೇಹ ತೂಕದಿಂದ ಬಳಲುತ್ತಿದ್ದರೆ ಆಹಾರದಲ್ಲಿ ಹೂಕೋಸನ್ನು ಬಳಸಲು ಮರೆಯದಿರಿ. ಹೂಕೋಸಿನ ಸೇವನೆಯಿಂದ ಕೆಳಗೆ ಹೇಳಿರುವ ಸಮಸ್ಯೆಗಳು ಸೇರಿದಂತೆ ಹಲವಾರು ರೋಗಗಳು ಶಮನವಾಗುತ್ತವೆ. ಅಲ್ಲದೆ ಬಹು ಬೇಗ ದೇಹ ತೂಕ ಕಡಿಮೆ ಆಗುತ್ತದೆ.

ತೀವ್ರ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ತೀವ್ರ ರಕ್ತದೊತ್ತಡ ಆಗುವುದು ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡದಿಂದ. ಪೊಟ್ಯಾಸಿಯಮ್ ಹೆಚ್ಚಿರುವ ಆಹಾರ ತಿನ್ನುವುದರಿಂದ ತೀವ್ರ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಪೊಟ್ಯಾಸಿಯಮ್ ಹೆಚ್ಚಿರುವ ಹೂಕೋಸನ್ನು ಇದಕ್ಕಾಗಿ ಬಳಸಬಹುದು. ರಕ್ತನಾಳ ಬ್ಲಾಕ್ ಆಗುವುದನ್ನು ಪೊಟ್ಯಾಸಿಯಮ್ ತಡೆಯುತ್ತದೆ. ತಜ್ಞರ ಪ್ರಕಾರ, ತೀವ್ರ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಯನ್ನು ಹೆಚ್ಚಿಸುತ್ತದೆ. ಹೂಕೋಸು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇರಿಸುತ್ತದೆ.

ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ

ದೇಹದ ತೂಕವನ್ನು ಕಳೆದುಕೊಳ್ಳಲು ಹೂಕೋಸನ್ನು ಉಪಯೋಗಿಸಬಹುದು. ಇದರಲ್ಲಿ ಕಂಡುಬರುವ ಅಗತ್ಯವಾದ ಪೋಷಕಾಂಶದ ನಾರು ಹೊಟ್ಟೆಗೆ ವರದಾನ. ಇದನ್ನು ಸೇವಿಸುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಹಾಗೆ ಇರುತ್ತದೆ. ಇದರೊಂದಿಗೆ ಪದೇ ಪದೇ ತಿನ್ನುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಆಹಾರದ ಚಾರ್ಟ್ ಪ್ರಕಾರ, 100 ಗ್ರಾಂ ಹೂಕೋಸುಗಳಲ್ಲಿ ಕೇವಲ 25 ಕ್ಯಾಲೋರಿಗಳು ಕಂಡುಬರುತ್ತವೆ. ಇದು 92 ಪ್ರತಿಶತ ನೀರು ಮತ್ತು 2.5 ಪ್ರತಿಶತ ಫೈಬರ್ ಹೊಂದಿರುತ್ತದೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಹೂಕೋಸನ್ನು ಆಹಾರದಲ್ಲಿ ಬಳಸಬಹುದು.

ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ

ನೀವು ಹೊಟ್ಟೆಯ ಅಸ್ವಸ್ಥತೆಗಳಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ತಡೆದುಹಾಕಲು ಹೂಕೋಸನ್ನು ಉಪಯೋಗಿಸಿ. ಹೂಕೋಸಿನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದರೊಂದಿಗೆ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.