ಬೆಂಗಳೂರು: ಚಳಿಗಾಲ ಶುರುವಾಗಿದೆ. ಈಗ ಮುಂಜಾನೆ ಎದ್ದು ಹೊರಗೆ ಬಂದರೆ ಫುಲ್ ಚಳಿ.. ಚಳಿ ವಾತಾರವಣ ಇರುತ್ತದೆ. ಈ ಚಳಿಯಲ್ಲಿ ಒಂದು ಕಪ್ ಚಹಾ ಬೇಕು ಅಂತ ಅನ್ನಿಸೋದು ಸಹಜ. ಕೆಲವರು ಚಳಿಗಾಲದಲ್ಲಿ ಸ್ವಲ್ಪ ಹೆಚ್ಚು ಟೀ ಕುಡಿಯುತ್ತಾರೆ. ಚಳಿಗಾಲದಲ್ಲಿ ಬೆಚ್ಚಗಿನ ಚಹಾವನ್ನು ಕುಡಿಯುವುದು ಆಹ್ಲಾದಕರವಾಗಿರುತ್ತದೆ.
ಕೆಲವರು ಕಷಾ, ಹಾಲು ಮತ್ತು ಚಹಾವನ್ನು ಕುಡಿಯುತ್ತಾರೆ. ಆದರೆ ನಾವಿಂದು ಚಳಿಗಾಲದಲ್ಲಿ ಆರೋಗ್ಯಕರವಾಗಿರುವ ಹಾಗೂ ನಿಮ್ಮನ್ನು ಚಳಿಗಾಲದಲ್ಲಿ ಕಾಡುವ ಸೋಂಕಿನಿಂದ ದೂರ ಇಡಲು ಒಂದು ಚಳಿಗಾಲದ ಸ್ಪೆಷಲ್ ಟೀ ಮಾಡುವುದನ್ನು ಹೇಳುತ್ತೇವೆ.
2) ನಂತರ ಪುಡಿಮಾಡಿದ ಶುಂಠಿ ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ. ಅದರಲ್ಲಿ ಒಂದು ಕಪ್ ಹಾಲು ಸುರಿಯಿರಿ. ಹಾಲು ಕಲಕಿ.. ಚೆನ್ನಾಗಿ ಕುದಿಯಲು ಬಿಡಿ. ಬೇಕಾದಲ್ಲಿ ಹಾಲು ಸೇರಿಸಿಕೊಳ್ಳಿ... ಇಲ್ಲವಾದರೆ ಹಾಗೆ ಸೇವನೆ ಮಾಡಬಹುದು.
3) ಇದನ್ನು ಚೆನ್ನಾಗಿ ಕುದಿಯಲು ಬಿಡಬೇಕು. ಅದು ಎರಡು ಕಪ್ ಚಹಾ ಆಗುವವರೆಗೆ ಕುದಿಯಲು ಬಿಡಿ. ಸಕ್ಕರೆಯನ್ನು ಈಗಾಗಲೇ ಸೇರಿಸಲಾಗಿದೆ ಆದ್ದರಿಂದ ಈ ಚಹಾಕ್ಕೆ ಸಕ್ಕರೆ ಸೇರಿಸುವ ಅಗತ್ಯವಿಲ್ಲ. ಟೀ ಕುಡಿದರೆ ರುಚಿಕರವಾಗಿರುತ್ತದೆ.
ವಿಶೇಷವಾಗಿ ಚಳಿಗಾಲದಲ್ಲಿ ನೀವು ಪುಡಿಮಾಡಿದ ಶುಂಠಿ ಮತ್ತು ಮೆಣಸುಗಳಿಂದ ಮಾಡಿದ ಚಹಾವನ್ನು ಕುಡಿಯಬಹುದು. ಶೀತ ಮತ್ತು ಕೆಮ್ಮಿನ ಚಿಕಿತ್ಸೆಯಲ್ಲಿ ಈ ಚಹಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೂ ಸಹ ನೀವು ಈ ಚಹಾವನ್ನು ಕುಡಿಯಬಹುದು. ಇದು ದೇಹಕ್ಕೆ ಒಳ್ಳೆಯದು. ಜೀರ್ಣಕ್ರಿಯೆ ಸಮಸ್ಯೆಯೂ ನಿವಾರಣೆಯಾಗುತ್ತದೆ. ಚಳಿಗಾಲದಲ್ಲಿ ದಾಲ್ಚಿನ್ನಿ ಟೀ ಕುಡಿಯುವುದು ತುಂಬಾ ಒಳ್ಳೆಯದು.