weight gain Recipe 
ಲೈಫ್‌ಸ್ಟೈಲ್

ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಪ್ರೊಟೀನ್​ ಪನ್ನೀರ್​ ರೋಲ್​ ಸೇವಿಸಿ! weight gain Recipe

weight gain Recipe: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಒತ್ತಡ, ಸಮಯದ ಅಭಾವ, ಮಾನಸಿಕ ಖಿನ್ನತೆ ಈ ರೀತಿಯಂತಹ ಸಮಸ್ಯೆಗಳಿಂದಾಗಿ ಮಾನವನು ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ತೂಕ ಏರಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಆದರೂ ತೂಕ ಹೆಚ್ಚಿಸುವಲ್ಲಿ ವಿಫಲವಾಗಿರುತ್ತಾರೆ. ಅಂತವರು ಪೌಷ್ಟಿಕಾಂಶ ತುಂಬಿರುವಂತಹ ಆಹಾರಗಳನ್ನು ಸೇವಿಸುವುದರಿಂದ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಈ ಪ್ರೊಟೀನ್​ ಪನ್ನೀರ್​ ರೋಲ್​ ಸೇವಿಸಿ...

ಬೇಕಾಗುವ ಪದಾರ್ಥಗಳು

* 200 ಗ್ರಾಂ ಪನ್ನೀರ್
* 1 ಕಪ್​ ಗೋಧಿ ಹಿಟ್ಟು
* 50 ಗ್ರಾಂ ಚೀಸ್​
* ಪುದೀನಾ ಸೊಪ್ಪು
* ಕೊತ್ತುಂಬರಿ ಸೊಪ್ಪು
* ಉಪ್ಪು
* ಮೆಣಸಿನಕಾಯಿ
* ಜೀರಿಗೆ
2 ಚಮಚ ಹಾಲು
* ಐಚ್ಛಿಕ (ಟೊಮ್ಯಾಟೊ, ಬಾದಾಮಿ, ಬೇಬಿ ಕಾರ್ನ್)

ಮಾಡುವ ವಿಧಾನ

ಮೊದಲು ಒಂದು ಬೌಲ್​ ತೆಗೆದುಕೊಳ್ಳಿ ಅದಕ್ಕೆ ಗೋಧಿ ಹಿಟ್ಟು ಹಾಕಿ 1 ಚಮಚ ಬೆಣ್ಣೆ ಹಾಗೂ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿರಿ 10 ನಿಮಿಷ ನೆನೆಯಲು ಬಿಡಿ. ನಂತರ ಮತ್ತೊಂದು ಬೌಲ್​ಗೆ ಸಣ್ಣಗೆ ಕತ್ತರಿಸಿದ ಪನ್ನೀರ್​, ಉಪ್ಪು, ಮೆಣಸಿನಕಾಯಿ, ಜೀರಿಗೆ, ಚೀಸ್, ಬೇಬಿ ಕಾರ್ನ್ ಸೇರಿಸಿ ಬೇಯಿಸಿ ನಂತರ ಮಿಶ್ರಣ ಮಾಡಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಕಲಸಿರಿ.
ಈಗ ಹಿಟ್ಟನ್ನು ತೆಗೆದುಕೊಂಡು ಅದನ್ನು ದುಂಡಾಕಾರದಲ್ಲಿ ರೊಟ್ಟಿಯನ್ನು ಉದ್ದಿಕೊಂಡು ಬೇಯಿಸಿಕೊಳ್ಳಿ. ನಂತರ, ಅದಕ್ಕೆ ಮಾಡಿಟ್ಟುಕೊಂಡಿರುವ ಮಸಾಲವನ್ನು ಹಾಕಿ ರೋಲ್​ ಮಾಡಿ ಸೇವಿಸಿರಿ. (ಏಜೆನ್ಸೀಸ್​)