ಬೆಂಗಳೂರು: ಇತ್ತಿಚೆಗೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ದೀರ್ಘ ಕಾಲದ ಚಿಕಿತ್ಸೆ ಅನಿವಾರ್ಯ ಮತ್ತು ಥೈರಾಯ್ಡ್ ಸಮಸ್ಯೆ ಹತ್ತು ಹಲವಾರು ರೋಗ ಲಕ್ಷಣಗಳಿಗೆ ದಾರಿ ಮಾಡಿಕೊಡುತ್ತದೆ. ಅದರಿಂದ ಸಾಂಪ್ರದಾಯಿಕ ಚಿಕಿತ್ಸೆ ಫಲಿಸುವುದು ಕಷ್ಟ. ಅದೃಷ್ಟವಶಾತ್, ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಿ ಅದರ ರೋಗಲಕ್ಷಣಗಳನ್ನು ನಿವಾರಿಸಲು ಶತಮಾನಗಳಿಂದ ಬಳಸುತ್ತಿರುವ ಅನೇಕ ಆಯುರ್ವೇದ ಪರಿಹಾರಗಳಿವೆ. ಅವು ಯಾವುವು ಎಂದು ಕೆಳಗೆ ತಿಳಿಸಲಾಗಿದೆ.
1. ಗುಗ್ಗುಲು: ಆಯುರ್ವೇದದಲ್ಲಿ ಶತಮಾನಗಳಿಂದ ಈ ಗಿಡ ಮೂಲಿಕೆಯನ್ನು ಥೈರಾಯ್ಡ್ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಇದು ಸುಧಾರಿಸುತ್ತದೆ. ಇದರೊಂದಿಗೆ ಹಾರ್ಮೋನ್ಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
2. ಅಶ್ವಗಂಧ: ಈ ಮೂಲಿಕೆಯನ್ನು ಆಯುರ್ವೇದದಲ್ಲಿ ಇಮ್ಯೂನಿಟಿ ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಈ ಗಿಡ ಮೂಲಿಕೆಯು ಕೂಡ ಹಾರ್ಮೋನ್ಗಳ ಉತ್ಪಾದನೆಗೆ ಸಹಾಯ ಮಾಡಿ ಥೈರಾಯ್ಡ್ ಗ್ರಂಥಿಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
3. ಶಂಖಪುಷ್ಪಿ: ಥೈರಾಯ್ಡ್ ಸಮಸ್ಯೆಗಳು ಸೇರಿದಂತೆ ಹಲವಾರು ರೋಗಗಳ ಚಿಕಿತ್ಸೆಗೆ ಆಯುರ್ವೇದದಲ್ಲಿ ಈ ಮೂಲಿಕೆಯನ್ನು ಬಳಸಲಾಗುತ್ತದೆ. ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ ಈ ಮೂಲಿಕೆ. ಇದು ಹಾರ್ಮೋನುಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಆಯಾಸ ಮತ್ತು ಖಿನ್ನತೆಯಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ತ್ರಿಫಲ: ಈ ಮೂಲಿಕೆ 3 ಹಣ್ಣುಗಳ ಮಿಶ್ರಣ. ಸಾಮಾನ್ಯವಾಗಿ ಇದನ್ನು ಜೀರ್ಣಕ್ರಿಯೆ ಸುಧಾರಿಸಲು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಥೈರಾಯ್ಡ್ ಗ್ರಂಥಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾರ್ಮೋನುಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
5. ನೆಲ್ಲಿಕಾಯಿ: ದೇಹವನ್ನು ಶುದ್ಧೀಕರಿಸಿ ಥೈರಾಯ್ಡ್ ಸಮಸ್ಯೆಗಳು ಸೇರಿದಂತೆ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತದೆ. ಡಿಪ್ರೆಶನ್ ಮತ್ತು ಆಯಾಸದ ರೋಗಲಕ್ಷಣಗಳನ್ನು ನಿಯಂತ್ರಿಸುತ್ತದೆ. (ಏಜೆನ್ಸೀಸ್)