ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over Thinking). ಈ ಅತೀಯಾದ ಯೋಚನೆ ನಾವು ಮಾಡುವ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿ, ಸಂಬಂಧಗಳಲ್ಲಿನ ಗೊಂದಲಗಳಾಗಲಿ ಅಥವಾ ಭವಿಷ್ಯದ ಚಿಂತೆಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ವಿಷಯಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ. ಅತೀಯಾದ ಯೋಚನೆ ನಮಗೆ ಗೊತ್ತಿಲ್ಲದೆ ನಮ್ಮ ದೇಹ ಹಾಗೂ ಮನಸ್ಸಿಗೆ ಹೇಗೆ ದಣಿವು ನೀಡುತ್ತದೆ ಎನ್ನುವ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...
ಅತಿಯಾಗಿ ಯೋಚಿಸುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ದೈಹಿಕ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ನಿರಂತರ ಚಿಂತೆಯು ನಿದ್ರಾಹೀನತೆ, ತಲೆನೋವು, ಅಧಿಕ ರಕ್ತದೊತ್ತಡ ಮತ್ತು ಇತರ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಯೋಚಿಸದೆ ಆರೋಗ್ಯವಾಗಿರಲು ಮಾರ್ಗವನ್ನು ಕಂಡುಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ನಿಜವಾಗಿ, ಆಲೋಚನಾ ಕ್ರಮವನ್ನು ಸರಿಪಡಿಸುವುದು ಸುಲಭವಲ್ಲ.. ಏಕೆಂದರೆ.. ಯಾರಿಗಾದರೂ ಯಾವಾಗಲೂ ಏನಾದರೂ ಸಮಸ್ಯೆ ಇರುತ್ತದೆ.. ಒಂದನ್ನು ಪರಿಹರಿಸಿದರೆ.. ಇನ್ನೊಂದು ಹೊಸ ಸಮಸ್ಯೆ ಬರುತ್ತಲೇ ಇರುತ್ತದೆ.. ಅದಕ್ಕಾಗಿಯೇ.. ಯೋಚಿಸುತ್ತಾ.. ದಾರಿ ಹುಡುಕುವುದು ಉತ್ತಮ.
ಒಂದು ಘಟನೆ, ಸಮಸ್ಯೆ ಅಥವಾ ಸನ್ನಿವೇಶದ ಬಗ್ಗೆ ನೀವು ಪದೇ ಪದೇ ಯೋಚಿಸುತ್ತಿದ್ದರೆ, ಪರಿಹಾರವನ್ನು ಹುಡುಕುವ ಬದಲು ನೀವು ಅದರಲ್ಲಿ ಸಿಲುಕಿಕೊಳ್ಳುತ್ತೀರಿ.. ಸರಳವಾಗಿ ಹೇಳುವುದಾದರೆ ನೀವು ಅತಿಯಾದ ಆಲೋಚನೆಗೆ ಬಲಿಯಾಗುತ್ತೀರಿ.. ಮೇಲಾಗಿ, ನೀವು ಸಣ್ಣ ವಿಷಯಗಳ ಬಗ್ಗೆ ಚಿಂತಿಸಿದರೆ. ನಿಮ್ಮ ದೈನಂದಿನ ಜೀವನದಲ್ಲಿ ಬೇರೆ ಕೆಲಸ, ವಿಚಾರಗಳಿಗೆ ಅವಕಾಶವೇ ಇಲ್ಲದಂತಾಗುತ್ತದೆ.
ಅತಿಯಾಗಿ ಯೋಚಿಸುವ ಲಕ್ಷಣಗಳು:
ಒಂದು ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು.. ಭವಿಷ್ಯದ ಬಗ್ಗೆ ಏನನ್ನೋ ಕಲ್ಪಿಸಿಕೊಳ್ಳುವುದು.. ಯಾವುದೋ ಸಮಸ್ಯೆಯನ್ನು ನಿರೀಕ್ಷಿಸುವುದು.. ಯಾವುದನ್ನಾದರೂ ಸಂಪರ್ಕಿಸುವುದು.. ಯೋಚಿಸುವುದು. ಇವೆಲ್ಲವೂ ಅತಿಯಾಗಿ ಯೋಚಿಸುವ ಲಕ್ಷಣಗಳು.
ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಧ್ಯಾನವು ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ನಿಮ್ಮ ಮಾತನ್ನು ಕೇಳುವ, ನಿಮ್ಮನ್ನು ಅರ್ಥಮಾಡಿಕೊಳ್ಳುವ, ನಿಮಗೆ ಯಾವಾಗಲೂ ಸರಿಯಾದ ರೀತಿಯಲ್ಲೇ ಸಲಹೆ ಕೊಡುವ ಸ್ನೇಹಿತರೋ-ಸಂಬಂಧಿಗಳೋ ಇದ್ದಾರೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಮನಸ್ಸಿನ ಮೇಲಿನ ಹೊರೆಯನ್ನು ಇಳಿಸಿಕೊಳ್ಳಬಹುದು.
ನೀವು ಏನೇನೋ ಬದಲಾಗಬೇಕೆಂದು ಬಯಸುವುದು ಸಹಜ. ಅದಕ್ಕಾಗಿ ನಿಮ್ಮ ಮನಸ್ಸು ಬಹಳಷ್ಟು ಯೋಚನೆ ಮಾಡುತ್ತಿರುತ್ತದೆ. ಆದರೆ ಒಮ್ಮೆಯಾದರೂ ಬೇರೆ ರೀತಿ ಯೋಚಿಸಬಹುದಾ ಎಂದು ಪ್ರಯತ್ನಿಸಿ. ಇದು ಆಗದಿದ್ದರೆ ಮತ್ತೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ನಿರ್ಧರಿಸಿ. ಇದರಿಂದ ನಿಮ್ಮ ಯೋಚನೆಗೆ ಪರಿಹಾರ ಅಥವಾ ಅದರಿಂದ ಮುಕ್ತಿ ಸಿಗುತ್ತೆ.
ಸಾಮಾನ್ಯವಾಗಿ ನಾವು ಭವಿಷ್ಯದ ಬಗ್ಗೆ ಚಿಂತಿಸುತ್ತೇವೆ ಮತ್ತು ವರ್ತಮಾನವನ್ನು ಆನಂದಿಸಲು ಮರೆಯುತ್ತೇವೆ. ನಿಮ್ಮ ಜೀವನದ ಪ್ರಸ್ತುತ ಕ್ಷಣದತ್ತ ಗಮನಹರಿಸಿ. ಸಮಸ್ಯೆಗಳ ಬಗ್ಗೆ ಪದೇ ಪದೇ ಯೋಚಿಸುವ ಬದಲು, ಅವುಗಳನ್ನು ಪರಿಹರಿಸಲು ಇರುವ ಮಾರ್ಗ ಕಂಡುಕೊಳ್ಳಿ.
ಅತಿಯಾಗಿ ಯೋಚಿಸಲು ನಕಾರಾತ್ಮಕ ಚಿಂತನೆಯೇ ಮುಖ್ಯ ಕಾರಣ. ನಿಮ್ಮ ಮನಸ್ಸನ್ನು ಧನಾತ್ಮಕವಾಗಿ ಯೋಚಿಸಲು ತರಬೇತಿ ನೀಡಿ.. ನೀವು ಹೋರಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿ.