Knife | ಎಲ್ಲರ ಅಡುಗೆಮನೆಯಲ್ಲೂ ಸಹ ಚಾಕು ಇದ್ದೇ ಇರುತ್ತದೆ. ಆದರೆ ಆ ಚಾಕುವನ್ನು ಯಾವಾಗಲೂ ಹರಿತವಾಗಿ ಇಡುವುದು ಅತೀ ಮುಖ್ಯವಾಗಿದೆ. ಚಾಕು ಹರಿತವಾಗಿ ಇಲ್ಲದೆ ಇದ್ದರೆ ಅದರಿಂದ ಅಡುಗೆ ಮನೆಯಲ್ಲಿ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಹರಿತವಿಲ್ಲದೆ ಇರುವಂತಹ ಚಾಕು ತುಂಬಾ ಅಪಾಯಕಾರಿಯಾಗಿದ್ದು, ಅಂತಹ ಚಾಕನ್ನು ಬಳಕೆ ಮಾಡುವ ವೇಳೆ ಅದಕ್ಕೆ ಹೆಚ್ಚು ಒತ್ತಡ ಹಾಕಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ಚಾಕು ನಿಮ್ಮ ಕೈನಿಂದ ಜಾರಿ, ನಿಮಗೆ ತೊಂದರೆ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ತಲೆ ಬೋಳಿಸಿಕೊಂಡು 91,300 ಕೂದಲಿನ ಎಳೆಗಳನ್ನು ಎಣಿಸಿದ ವ್ಯಕ್ತಿ; ನಿರುದ್ಯೋಗವೇ ಇದಕ್ಕೆ ಕಾರಣ ಎಂದ ನೆಟ್ಟಿಗರು| viral video
ಹರಿತವಾಗಿರುವಂತಹ ಚಾಕು ಬಳಕೆ ಮಾಡಿದರೆ ಬೇಗನೆ ಅಡುಗೆ ಕೆಲಸ ಸಾಗುತ್ತದೆ. ಆದರೆ ಹರಿತವಿಲ್ಲದೆ ಇರುವ ಚಾಕು ಬಳಸಿದರೆ ಅದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ನಾನಾ ಸಮಸ್ಯೆಯನ್ನು ಸಹ ಅನುಭವಿಸಬೇಕಾಗಿರುತ್ತದೆ.
1. ಸಮಯ ವ್ಯರ್ಥವಾಗುತ್ತದೆ.
2. ಬೇಸರದಿಂದ ಕತ್ತರಿಸುವುದು.
3. ಚಾಕು ಜಾರಿ ಹೋಗುವ ಸಾಧ್ಯತೆ
ಮಂದ ಚಾಕು ನಿಮ್ಮ ಆಹಾರವನ್ನು ಪುಡಿಮಾಡುವ ಮೂಲಕ ಹಣ್ಣು ಅಥವಾ ತರಕಾರಿಯನ್ನು ಕತ್ತರಿಸುವಾಗ ಜಾರುತ್ತದೆ, ಇದರಿಂದಾಗಿ ಖಾದ್ಯವು ರುಚಿಕರವಲ್ಲದಂತೆ ಬಾಸವಾಗುತ್ತದೆ. ನೀವು ಹಣ್ಣು ಅಥವಾ ತರಕಾರಿಯ ಮೇಲೆ ಮಂದ ಚಾಕುವಿನಿಂದ ಒತ್ತಡ ಹೇರಿದಾಗ, ಬ್ಲೇಡ್ ಸುಲಭವಾಗಿ ಮೇಲ್ಮೈಯಿಂದ ಜಾರಿಹೋಗಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ.
ನ್ಯೂಯಾರ್ಕ್‌ನ ಇನ್‌ಸ್ಟಿಟ್ಯೂಟ್ ಆಫ್ ಪಾಕಶಾಲೆಯ ಶಿಕ್ಷಣ ಸಂಸ್ಥೆಯ ವರದಿಯ ಪ್ರಕಾರ, ಮನೆಯಲ್ಲಿ ಅಡುಗೆ ಮಾಡುವವರು ಪ್ರತಿ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ತಮ್ಮ ಚಾಕುಗಳನ್ನು ಹರಿತಗೊಳಿಸಬೇಕು. ವೃತ್ತಿಪರ ಅಡುಗೆಯವರು ಸಾಮಾನ್ಯವಾಗಿ ಪ್ರತಿ ಹತ್ತು ದಿನಗಳಿಗೊಮ್ಮೆ ತಮ್ಮ ಚಾಕುವನ್ನು ಹರಿತಗೊಳಿಸಬೇಕು ಎನ್ನಲಾಗಿದೆ. ಚಾಕುವನ್ನು ಅತಿಯಾಗಿ ಹರಿತಗೊಳಿಸುವುದರಿಂದ ಅದರ ಹಂಚು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಸರಿಯಾದ ಕ್ರಮದಲ್ಲಿ ಹರಿತಗೊಳಿಸಬೇಕಾಗಿರುತ್ತದೆ.
ಮಗ್ಅನ್ನು ತಿರುಗಿಸಿ ತಲೆ ಕೆಳಗೆ ಮಾಡಿದರೆ ಅದರ ಕೆಳಗಿನ ಭಾಗ ಸ್ವಲ್ಪ ಒರಟಾಗಿರುತ್ತದೆ. ಈ ಒರಟು ಮೇಲ್ಮೈಯಲ್ಲಿ ಚಾಕುವನ್ನು ಉಜ್ಜುವ ಮೂಲಕ ಅದರ ಅಂಚನ್ನು ಹರಿತಗೊಳಿಸಬಹುದು.
ನಮ್ಮೆಲ್ಲರ ಮನೆಯಲ್ಲಿ ಕಬ್ಬಿಣದ ರಾಡ್ ಇದ್ದೇ ಇರುತ್ತದೆ. ಮೊದಲನೆಯದಾಗಿ ಕಬ್ಬಿಣದ ರಾಡ್ಅನ್ನು ಬಿಸಿಲಿನಲ್ಲಿ ಇರಿಸಿ. ಇದಾದ ನಂತರ ಚಾಕುವನ್ನು ಉಜ್ಜುವ ಮೂಲಕ ಹರಿತಗೊಳಿಸಬಹುದು.
ಚಾಕುವಿನ ಅಂಚನ್ನು ಹರಿತಗೊಳಿಸಲು ಸ್ಯಾಂಡ್ ಪೇಪರ್ಅನ್ನು ಬಳಸಬಹುದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಸ್ಯಾಂಡ್ ಪೇಪರ್ಅನ್ನು ಒರಟಾದ ಮೇಲ್ಮೈಯಲ್ಲಿ ಉಜ್ಜುವುದರಿಂದ ಚಾಕುವಿನ ಅಂಚನ್ನು ಹರಿತಗೊಳಿಸಬಹುದು. ಅಲ್ಲದೆ ಹಿಡಿದಿರುವ ತುಕ್ಕನ್ನು ಸಹ ಹೋಗಲಾಡಿಸಬಹುದು.
(ಏಜೆನ್ಸೀಸ್)