Sun Tan Removal ಸಾಂದರ್ಭಿಕ ಚಿತ್ರ
Sun Tan Removal: ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕು ಮತ್ತು ಹಾನಿಕಾರಕ ನೇರಳಾತೀತ (UV) ಕಿರಣಗಳ ನೇರ ಪರಿಣಾಮ ನಮ್ಮ ಚರ್ಮದ ಮೇಲೆ ಬೀಳತೊಡಗುತ್ತದೆ. ಬಿಸಿಲಿನಲ್ಲಿ ದೀರ್ಘಕಾಲದವರೆಗೆ ಓಡಾಡುವುದರಿಂದ ತ್ವಚೆಯು ತನ್ನ ನೈಸರ್ಗಿಕ ಕಾಂತಿಯನ್ನು ಕಳೆದುಕೊಂಡು ಟ್ಯಾನಿಂಗ್, ಕಪ್ಪಾಗುವಿಕೆ ಮತ್ತು ಮಂದತೆಗೆ ಒಳಗಾಗುತ್ತದೆ. ಮುಖ ಮತ್ತು ಕೈಕಾಲುಗಳ ಮೇಲಾಗುವ ಈ ಸನ್ ಟ್ಯಾನ್ ಅನ್ನು ನಿವಾರಿಸಲು ಅನೇಕ ಜನರು ತಕ್ಷಣವೇ ಬ್ಯೂಟಿ ಪಾರ್ಲರ್‌ಗಳತ್ತ ಓಡುತ್ತಾರೆ. ದುಬಾರಿ ಸೌಂದರ್ಯವರ್ಧಕಗಳು, ಕೆಮಿಕಲ್ ಬ್ಲೀಚ್‌ಗಳು ಮತ್ತು ಟ್ಯಾನ್ ರಿಮೂವಲ್ ಚಿಕಿತ್ಸೆಗಳಿಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.
ಆದರೆ, ಇಂತಹ ಪಾರ್ಲರ್ ಚಿಕಿತ್ಸೆಗಳು ದುಬಾರಿಯಷ್ಟೇ ಅಲ್ಲ, ಅವುಗಳಲ್ಲಿ ಬಳಸಲಾಗುವ ತೀವ್ರ ಗಾಢತೆಯ ರಾಸಾಯನಿಕಗಳು ದೀರ್ಘಾವಧಿಯಲ್ಲಿ ನಿಮ್ಮ ಸೂಕ್ಷ್ಮವಾದ ಚರ್ಮಕ್ಕೆ ಮತ್ತಷ್ಟು ಹಾನಿಯನ್ನು ಉಂಟುಮಾಡಬಹುದು. ಒಂದು ವೇಳೆ ನೀವೇನಾದರೂ ಟ್ಯಾನಿಂಗ್ ತೆಗೆದುಹಾಕಲು ಪ್ರಯತ್ನಿಸುತ್ತಿದ್ದರೆ ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಬದಲಾಗಿ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಪದಾರ್ಥ ಬಳಸಿಕೊಂಡು ಕಳೆದು ಹೋದ ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ.
ಟೊಮೊಟೊ ಟ್ಯಾನಿಂಗ್ ತೆಗೆಯಲು ಉಪಯುಕ್ತ ಪದಾರ್ಥ!
ಟೊಮೆಟೊಗಳು ರುಚಿಯನ್ನು ಹೆಚ್ಚಿಸುವುದಲ್ಲದೆ, ಚರ್ಮದ ಆರೈಕೆಗೂ ಹಲವು ಪ್ರಯೋಜನಗಳನ್ನು ಹೊಂದಿವೆ. ಅದರಲ್ಲಿರುವ ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಅವುಗಳನ್ನು ಹಚ್ಚುವುದರಿಂದ ಬಿಸಿಲಿನಿಂದ ಸುಟ್ಟ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಅವುಗಳಲ್ಲಿರುವ ವಿಟಮಿನ್ ಸಿ ಚರ್ಮದ ಬಣ್ಣವನ್ನು ಸುಧಾರಿಸಿ, ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಳಸುವುದು ಹೇಗೆ ?
ಹಣ್ಣಾದ ಟೊಮೆಟೋವನ್ನು ಅರ್ಧದಷ್ಟು ಕತ್ತರಿಸಿ ನಿಮ್ಮ ಮುಖ ಮತ್ತು ಕಂದು ಬಣ್ಣದ ಪ್ರದೇಶಗಳಿಗೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ. ಎಸವನ್ನು ಹಾಗೇ ಬಿಟ್ಟು 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ನಂತರ ಮೆದುವಾದ ಬಟ್ಟೆಯಲ್ಲಿ ಒರೆಸಿಕೊಳ್ಳಿ.
ಕಪ್ಪು ಕಲೆಗಳಿಗೆ ಆಲೂಗಡ್ಡೆ ರಾಮಬಾಣ!
ಹಸಿ ಆಲೂಗಡ್ಡೆಯನ್ನು ಟ್ಯಾನಿಂಗ್ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಕ್ಯಾಟೆಕೊಲೇಸ್ ಕಿಣ್ವ, ಚರ್ಮವನ್ನು ನೈಸರ್ಗಿಕವಾಗಿ ಹಗುರಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ವರ್ಣದ್ರವ್ಯ ಮತ್ತು ಟ್ಯಾನ್ ಪ್ರದೇಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಳಸುವುದು ಹೇಗೆ ?
ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಹೊರತೆಗೆಯಿರಿ. ಈ ರಸವನ್ನು ಹತ್ತಿಯಿಂದ ತೆಗೆದುಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ಶುದ್ಧವಾದ ನೀರಿನಿಂದ ತೊಳೆಯಿರಿ. ಇಲ್ಲದಿದ್ದರೆ, ಆಲೂಗಡ್ಡೆಯನ್ನು ತೆಳುವಾಗಿ ಹೆಚ್ಚಿ ನಿಮ್ಮ ಚರ್ಮಕ್ಕೆ ಹಚ್ಚಬಹುದು. ಇದು ನಿಮ್ಮ ಚರ್ಮದಿಂದ ಟ್ಯಾನಿಂಗ್ ತೆಗೆಯಲು ಸಹಾಯ ಮಾಡುತ್ತದೆ.
ಮೊಸರು ನಿಮಗೆ ತಂಪು ಮತ್ತು ಹೊಳಪನ್ನು ನೀಡುತ್ತದೆ.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮವು ಕಿರಿಕಿರಿ ಮತ್ತು ಶುಷ್ಕತೆ ಉಂಟು ಮಾಡುತ್ತದೆ. ಹಾಗಾಗಿ ಚರ್ಮವನ್ನು ಮೊಸರನ್ನು ಹಚ್ಚುವುದರಿಂದ ಅದು ಚರ್ಮವನ್ನು ತಂಪಾಗಿರಿಸುವುದಲ್ಲದೇ, ಅದರ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.