ಲೈಫ್‌ಸ್ಟೈಲ್

ದೀಪಾವಳಿಗೆ ಮಾಡಿ ಸಿಹಿಸಿಹಿಯಾದ ಅಕ್ಕಿಹಿಟ್ಟಿನ ಸ್ವೀಟ್...  Rice Flour Sweet

Rice Flour Sweet : ದೀಪಾವಳಿ ಹಬ್ಬಕ್ಕೆ ಮನೆಯಲ್ಲಿ ಲಡ್ಡು, ಕಜ್ಜಾಯ, ಪೊಂಗಲ್ ಹೀಗೆ ಬಗೆಬಗೆಯ ಸಿಹಿ ತಿಂಡಿಗಳನ್ನು ತಯಾರಿಸುತ್ತೇವೆ. ಎಲ್ಲರೂ ಅಂನ್ಕೋತಾರೆ ಅಕ್ಕಿ ಹಿಟ್ಟು ಪ್ರಯೋಜನಕ್ಕೆ ಬರಲ್ಲ ಎಮದು. ಆದರೆ ಅದೇ ಅಕ್ಕಿ ಹಿಟ್ಟಿನಿಂದ ಸಿಹಿ ತಿಂಡಿಯನ್ನು ತಯಾರಿಸಬಹುದು. ಅದು ಹೇಗೆ ಅಂತಿರಾ. ಇಲ್ಲಿದೇ ನೋಡಿ ಸರಳ ವಿಧಾನ.

ಬೇಕಾಗುವ ಸಾಮಗ್ರಿಗಳು

ತುಪ್ಪ - ಸ್ವಲ್ಪ

ಏಲಕ್ಕಿ - 2 ಟೀಸ್ಪೂನ್

ಸಕ್ಕರೆ - 1 ಕಪ್

ಹಾಲು - 4 ಕಪ್

ಅಕ್ಕಿ ಹಿಟ್ಟು - 2 ಕಪ್

ಮಾಡುವ ವಿಧಾನ

ಅಕ್ಕಿ ಹಿಟ್ಟನ್ನು ಅಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ. ನಂತರ ಬಾಣಲಿಯಲ್ಲಿ ಹಾಲು, ಸಕ್ಕರೆ, ತುಪ್ಪ, ಏಲಕ್ಕಿ, ಕಲರ್ ಬರಲು ಸ್ವಲ್ಪ ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಸಕ್ಕರೆ ಪೂರ್ತಿಯಾಗಿ ಕರಗಿದ ಮೇಲೆ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಗಂಟು ಆಗದಂತೆ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಒಂದು ಪ್ಲೇಟ್​ಗೆ ತುಪ್ಪವನ್ನು ಹಚ್ಚಿ ಹಾಕಿ, ಸ್ವಲ್ಪ ಬಿಸಿ ಇರುವಾಗಲೇ ಕೈಗೆ ತುಪ್ಪ ಹಚ್ಚಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಮಾಡಿಕೊಳ್ಳಿ.

ನಂತರ ಉಂಡೆಯನ್ನು ಸ್ವಲ್ಪ ತಣ್ಣಗಾದ ಮೇಲೆ ಸಕ್ಕರೆ ಪುಡಿಯಲ್ಲಿ ಮುಳುಗಿಸಿ. ಮನೆಯಲ್ಲೇ ಗರಿಗರಿಯಾದ ಸ್ವಾಧೀಷ್ಟಕರ ಅಕ್ಕಿ ಹಿಟ್ಟಿನ ಸಿಹಿ ಲಾಡು ಸವಿಯಲು ಸಿದ್ಧವಾಗುತ್ತದೆ.