ಲೈಫ್‌ಸ್ಟೈಲ್

ಬಲೂನ್‌ನಂತೆ ಉಬ್ಬುವ ಪೂರಿ ಮಾಡೊದೇಗೆ? ಇಲ್ಲಿದೆ ಸರಳ ವಿಧಾನ..| Puri

Puri: ಪೂರಿ ಇದು ದಕ್ಷಿಣ ಭಾರತ ಶೈಲಿಯ ರೆಸಿಪಿ. ಪೂರಿ ಎಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾದ ಆಹಾರ. ಬಲೂನ್‌ನಂತೆ ಉಬ್ಬುವ ಪೂರಿ ಮಾಡುವ ವಿಧಾನ ಇಲ್ಲಿದೆ..

ಸಾಮಗ್ರಿಗಳು (6-8 ಪೂರಿಗಳಿಗೆ)

ಗೋಧಿಹಿಟ್ಟು 1 ಕಪ್

ನೀರು ¼ ಕಪ್ + ಅಗತ್ಯ ಪ್ರಮಾಣದಂತೆ

ಸಕ್ಕರೆ ¼ ಕಪ್​

ಎಣ್ಣೆ 2 ಸ್ಪೂನ್​

ಉಪ್ಪು(ರುಚಿಗೆ ತಕ್ಕಷ್ಟು)

ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ

ಒಂದು ಬೌಲ್‌ನಲ್ಲಿ ಗೋಧಿಹಿಟ್ಟು, ಸಕ್ಕರೆ, ಎಣ್ಣೆ (ಸಲ್ಪ ಪ್ರಮಾಣದಲ್ಲಿ) ಮತ್ತು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ.

¼ ಕಪ್ ನೀರನ್ನು ಕ್ರಮೇಣ ಸೇರಿಸಿ, ಮೊದಲುಮಿಕ್ಸ್ ಮಾಡಿ, ನಂತರ ಹೆಚ್ಚಿನ ನೀರನ್ನು ಸೇರಿಸಿ ಉಂಡೆಯಂತೆ ಕಲಿಸಿದ ಹಿಟ್ಟನ್ನು ಪಕ್ಕಕ್ಕೆ ಇಡಿ.

ಕಲಿಸಿದ ಹಿಟ್ಟನ್ನು10 ರಿಂದ 15 ನಿಮಿಷಗಳು ಹಾಗೆಯೇ ಮುಚ್ಚಿಡಬೇಕು.

ಹಿಟ್ಟನ್ನು ರೋಲ್​(ವೃತ್ತಾಕಾರದಂತೆ) 6 ಅಥವಾ8 ಸಮಾನ ಭಾಗಗಳಾಗಿ ವಿಭಜಿಸಿ, ತೆಳ್ಳಗೆ ಮಣಿ ಮೇಲೆ ಒತ್ತಿ ಪಕ್ಕಕ್ಕೆ ಇರಿಸಿ.

ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿ, ಮಧ್ಯಮ ಬೆಂಕಿಯ ಮೇಲೆ ಇರಿಸಿ. ಎಣ್ಣೆಯ ಪ್ರಮಾಣ ಅಗತ್ಯಕ್ಕಿಂತ ಹೆಚ್ಚು ಇರಲಿ (ಪೂರಿ ಮುಳುಗುವಂತೆ).

ರೋಲ್ ಮಾಡಿದ ಪೂರಿಯನ್ನು ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ, ಅದು ಮೇಲೆ ಬರುವಾಗ ಸೌಮ್ಯವಾಗಿ ಪೂರಿ ಮೇಲೆ ಒತ್ತಿ,  ಉಬ್ಬುವಂತೆ ಮಾಡಿ. ಬಳಿಕ ಪೂರಿಯನ್ನು ತಿರುಗಿಸಿ, ಇನ್ನೊಂದು 30 ಸೆಕೆಂಡುಗಳು ಹಾಗೇ ಬಿಟ್ಟು ಬಂಗಾರದ ಬಣ್ಣ ಬರುವಂತೆ ಮಾಡಿ. ಹೊರ ತೆಗೆಯಿರಿ. ಇದೀಗ ಬಿಸಿಬಿಸಿ ಪೂರಿ ಸರ್ವ್​ ಮಾಡಲು ಸಿದ್ಧ. (ಏಜೆನ್ಸೀಸ್​)