ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಹೂಕೋಸ್ ಖರೀದಿಸುವ ಮುಂಚೆ ಈ ಟ್ರಿಕ್ ಮಾಡಿ: ಕೀಟಗಳು ಅಡಗಿರುವುದು ತಕ್ಷಣ ಕಾಣುತ್ತವೆ! Cauliflower

Cauliflower BuyingTips : ಚಳಿಗಾಲದಲ್ಲಿ ಮಾರುಕಟ್ಟೆಗಳು ತಾಜಾ ತರಕಾರಿಗಳಿಂದ ಕೂಡಿರುತ್ತದೆ. ಈ ಋತುವಿನಲ್ಲಿ ನಾವು ಅನೇಕ ರೀತಿಯ ತರಕಾರಿಗಳನ್ನು ನೋಡಬಹುದು. ಆದಷ್ಟು ಜನರು ಹೂಕೋಸನ್ನು ಖರೀದಿಸಲು ಮುಂದಾಗುತ್ತಾರೆ ಏಕೆಂದರೆ, ಈ ತರಕಾರಿಯಿಂದ ಬಿಸಿ ಬಿಸಿಯಾದ ಗೋಬಿ, ಪರಾಠ,ಮಂಚೂರಿ, ಪಕೋಡಾದಂತಹ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಹೇರಳವಾಗಿ ಖರೀದಿಸಲು ಬಯಸುತ್ತಾರೆ. ಆದರೆ, ಅನೇಕರು ಎಚ್ಚರಿಕೆಯಿಂದ ಎಷ್ಟೇ ಪರಿಶೀಲನೆ ನಡೆಸಿ ಖರೀದಿಸಿದರೂ, ಈ ಹೂಕೋಸಿನಲ್ಲಿ ಕೀಟಗಳು ಇದ್ದೇ ಇರುತ್ತವೆ.
ಕೆಲವೊಮ್ಮೆ, ಹೂಕೋಸು ಹೊರಗೆ ಸ್ವಚ್ಛವಾಗಿ ಕಂಡರೂ, ಅದರೊಳಗೆ ಸಣ್ಣ ಕೀಟಗಳು ಮತ್ತು ಮರಿಹುಳುಗಳು ಇರಬಹುದು. ಅದನ್ನು ನೀರಿನಿಂದ ತೊಳೆಯುವುದರಿಂದ ಅವು ಹೋಗುವುದಿಲ್ಲ. ಹಾಗಾಗಿ ಸರಿಯಾದ ಹೂಕೋಸು ಖರೀದಿಸುವುದು ಹೇಗೆ ಮತ್ತು ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯಿರಿ.

* ಹಾಲಿನ ಬಿಳಿ ಬಣ್ಣದ ಹೂಕೋಸು ತೆಗೆದುಕೊಳ್ಳಿ

ಯಾವಾಗಲೂ ಹೂಕೋಸನ್ನು ತೆಗೆದುಕೊಳ್ಳುವಾಗ ಹಾಲಿನ ಬಿಳಿ ಬಣ್ಣದ ಹೂಕೋಸು ತೆಗೆದುಕೊಳ್ಳಿ. ಈ ಕೋಸಿನ ಮೇಲೆ ಸಣ್ಣ ಕಪ್ಪು ಅಥವಾ ಗಾಢ ಬಣ್ಣದ ಚುಕ್ಕೆಗಳು ಕಂಡುಬಂದರೂ ಅವುಗಳನ್ನು ಖರೀದಿಸುವುದನ್ನು ತಪ್ಪಿಸಿ. ಏಕೆಂದರೆ, ಅದರಲ್ಲಿ ಶಿಲೀಂಧ್ರ ಅಥವಾ ಕೀಟಗಳು ಇರಬಹುದು.

* ಹೂಕೋಸಿನ ರಚನೆಯನ್ನು ಪರಿಶೀಲಿಸಿ

ಬಿಗಿಯಾಗಿ ಪ್ಯಾಕ್​ ಮಾಡಲಾದ ಹೂಕೋಸುಗಳಲ್ಲಿ ಕೀಟಗಳು ಇರುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಅಂತಹ ಹೂಕೋಸುಗಳನ್ನು ಖರೀದಿಸಿ. ಬದಲಿಗೆ ಹೂಗೊಂಚಲುಗಳು ಸಡಿಲವಾಗಿರುವುದು, ಅಥವಾ ಅವುಗಳ ನಡುವೆ ಅಂತರವಿರುವ ಹೂಕೋಸುಗಳಲ್ಲಿ ಸುಲಭವಾಗಿ ಮೊಟ್ಟೆ ಇಡಬಹುದು.

* ಎಲೆಗಳ ತಾಜಾತನವನ್ನು ಪರಿಶೀಲಿಸಿ

ಮೊದಲು ಹೂಕೋಸನ್ನು ತೆಗೆದುಕೊಳ್ಳುವಾಗ ಎಲೆಗಳನ್ನು ಒಮ್ಮೆ ಪರಿಶೀಲಿಸಿ. ಏಕೆಂದರೆ, ತಾಜಾ, ಕೀಟ-ಮುಕ್ತ ಹೂಕೋಸು ಎಲೆಗಳು ಯಾವಾಗಲೂ ಪ್ರಕಾಶಮಾನವಾದ ಹಸಿರು ಬಣ್ಣದಿಂದ ಕೂಡಿರುತ್ತವೆ. ಆಕಸ್ಮಾತ್​ ಆಗಿ ಎಲೆಗಳು ಜೋತು ಬಿದ್ದಿದ್ದರೆ, ಹಳದಿ ಬಣ್ಣದಲ್ಲಿದ್ದರೆ ಅಥವಾ ರಂಧ್ರಗಳಿಂದ ಕೂಡಿದ್ದರೆ ಅವುಗಳನ್ನು ಈಗಾಗಲೇ ಕೀಟಗಳು ನಾಶ ಮಾಡಿರುತ್ತವೆ ಎಂದು ತಿಳಿದುಬರುತ್ತದೆ.

* ಹೂಕೋಸನ್ನು ತಲೆಕೆಳಗಾಗಿ ತಿರುಗಿಸಿ ಕಾಂಡವನ್ನು ಪರೀಕ್ಷಿಸಿ

ಮಾರುಕಟ್ಟೆಯಲ್ಲಿ ಹೂಕೋಸನ್ನು ತೆಗೆದುಕೊಳ್ಳುವಾಗ ಕಾಂಡಗಳ ರಂಧ್ರವನ್ನು ಪರೀಕ್ಷಿಸಿ. ಅದು ಒಳಗೆ ಟೊಳ್ಳಾಗಿ ಕಂಡುಬಂದರೆ, ಅದರಲ್ಲಿ ಮರಿಹುಳುಗಳು ಅಥವಾ ಹುಳುಗಳು ಇರುವುದು ಖಚಿತ ಹಾಗಾಗಿ ಅಂತಹ ಕೋಸನ್ನು ತೆಗೆದುಕೊಳ್ಳಬೇಡಿ.

* ತೂಕ ಮತ್ತು ವಾಸನೆಯನ್ನು ಗುರುತಿಸುವುದು ಸಹ ಮುಖ್ಯ

ಉತ್ತಮ ಹೂಕೋಸು ಅದರ ಗಾತ್ರದಿಂದಾಗಿ ಕೈಯಲ್ಲಿ ಭಾರವಾಗಿರುತ್ತದೆ. ದುರ್ಬಲ ಹೂಕೋಸು ಹೆಚ್ಚಾಗಿ ಒಣಗಿರುತ್ತದೆ. ಇದನ್ನು ಕೀಟಗಳನ್ನು ತಿನ್ನಲ್ಪಟ್ಟಿರುತ್ತದೆ. ತಾಜಾ ಹೂಕೋಸು ಯಾವುದೇ ನಿರ್ದಿಷ್ಟ ವಾಸನೆಯನ್ನು ಹೊಂದಿರುವುದಿಲ್ಲ. ನೀವು ಖರೀದಿಸಿದಾಗ ಸ್ವಲ್ಪ ಕೆಟ್ಟ ವಾಸನೆ ಬಂದರೆ, ಅದನ್ನು ಖರೀದಿಸಬೇಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.