ಲೈಫ್‌ಸ್ಟೈಲ್

ಗೋಧಿ ದೋಸೆ ಸೇವನೆಯಿಂದ ಹಲವು ಪ್ರಯೋಜನಗಳು, ಇದರಲ್ಲಿದೆ ಅಧಿಕ ಫೈಬರ್​​ ಅಂಶ

ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ , ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ.


ಇದರ ಸೇವನೆಯಿಂದ ಆಗುವ ಪ್ರಯೋಜನಗಳು


ಗೋಧಿ ದೋಸೆಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆಗೆ ಸಹಕಾರಿಯಾಗಿದೆ.
ದೇಹವು ನಿಶಕ್ತಿಯಿಂದ ಒಳಗಾಗದರೇ ಅಥವಾ ಆಯಾಸ ಎನಿಸಿದರೇ ಅಂಥಹ ಸಂದರ್ಭದಲ್ಲಿ ಉಪಹಾರವಾಗಿ ಗೋಧಿ ದೋಸೆ ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ.


ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಿಸುವುದರಿಂದ ಹೃದ್ರೋಗಿ ಗಳಿಗೂ ಸಹಕಾರಿಯಾಗಿದೆ.ಇದರಲ್ಲಿ ಗ್ಲೂಕ್ಲೋಸ್‌ ಮಟ್ಟ ಕಡಿಮೆ ಇರುವುದರಿಂದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ ಮಧುಮೇಹದಿಂದ ಪಾರು ಮಾಡುತ್ತದೆ.
ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಗೋಧಿ ದೋಸೆ ಮಾಡುವ ವಿಧಾನ:
ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಮಿಶ್ರಣ ಮಾಡಿ ಗಂಟು ಆಗದ ರೀತಿಯಲ್ಲಿ ಕಲಸಬೇಕು ಹೆಚ್ಚು ನೀರು ಹಾಕದೇ, ಕಡಿಮೆಯೂ ಹಾಕದೇ ಸಮತೋಲದಲ್ಲಿ ನೀರು ಹಾಕಿ ಬಳಿಕ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಮಿಶ್ರಣ ಮಾಡಿ ದೋಸೆ ಹಿಟ್ಟು ಮಾಡಿಕೊಳ್ಳ ಬೇಕು. ಸ್ಪಲ್ಪ ಸಮಯದ ನಂತರ ಮಾಮೂಲಿ ದೋಸೆಯಂತೆ ಮಾಡಿ ಸೇವಿಸುವುದರಿಂದ ರುಚಿ ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗಿದೆ.