Bollywood: ವ್ಯಾಯಾಮ, ಆಹಾರ ಪದ್ಧತಿ, ಚಿಂತನಶೀಲ ಜೀವನಶೈಲಿ ಇವೆಲ್ಲವೂ ಸದೃಢ ದೇಹವನ್ನು ಪಡೆಯಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಆದರೆ ಈ ಪದ್ಧತಿಯನ್ನು ಹಲವಾರು ನಟ- ನಟಿಯರು ಪಾಲಿಸುತ್ತಾರೆ. ಆದರೆ ಈ ನಟಿಯ ಜೀವನಶೈಲಿಯು ತನ್ನ 77ರ ವಯಸ್ಸಿನಲ್ಲೂ ಫಿಟ್ ಆಗಿರುವ ದೇಹವನ್ನು ಹೊಂದಿರುವುದನ್ನು ತೋರಿಸುತ್ತದೆ. ಹಾಗಿದ್ದರೆ ಯಾರಿರಬಹುದು ಈ ನಟಿ?
ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟಿ ಹೇಮಾ ಮಾಲಿನಿ ತನ್ನ 77 ನೇ ವಯಸ್ಸಿನಲ್ಲಿಯೂ ಲಘು ವ್ಯಾಯಾಮ, ಸಮತೋಲಿತ ಪೋಷಣೆ ಮತ್ತು ಚಿಂತನಶೀಲ ಜೀವನಶೈಲಿಯ ಮೂಲಕ ಸದೃಢರಾಗಿ, ಉತ್ಸಾಹಭರಿತರಾಗಿ ಮತ್ತು ಕಾಂತಿಯುತವಾಗಿ ಕಾಣುವುದರ ಜೊತೆಗೆ ವಯಸ್ಸು ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ.
ಹೇಮಾ ಮಾಲಿನಿ, ತನ್ನ 77 ರ ವರ್ಷ ವಯಸ್ಸಿನಲ್ಲೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ತಮ್ಮ ಹೊಳೆಯುವ ಸೌಂದರ್ಯಕ್ಕೆ ಹೆಸರುವಾಸಿಯಾದ ನಟಿ ಅವರ ಶಿಸ್ತು, ಜೀವನಶೈಲಿ, ನಿಯಮಿತ ವ್ಯಾಯಾಮ, ಸಮತೋಲಿತ ಪೋಷಣೆ ಇವು ಅವರ ದೇಹವನ್ನು ಫಿಟ್ ಆಗಿರಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಈ ಕೆಳಕಂಡಂತೆ ಅವರ ದಿನಚರಿಯನ್ನು ಹಂಚಿಕೊಂಡಿದ್ದಾರೆ.
ಡ್ರೀಮ್ ಗರ್ಲ್ ಹೇಮಾ ತೀವ್ರತೆಗಿಂತ ಸ್ಥಿರತೆಯನ್ನು ಹೆಚ್ಚು ನಂಬುತ್ತಾರಂತೆ. ಇವರು ಪ್ರತಿನಿತ್ಯ ಕಠಿಣ ವ್ಯಾಯಾಮಗಳ ಬದಲು, ಅವರು ತಮ್ಮ ದೇಹವನ್ನು ನಮ್ಯ, ಬಲಿಷ್ಟವಾಗಿಡಲು ವ್ಯಾಯಾಮ, ನಡೆಯುವುದು ಮತ್ತು ಹಿಗ್ಗಿಸುವುದನ್ನು ಮಾಡುತ್ತಾರಂತೆ. ಈ ದಿನಚರಿಗಳು ಅವರ ಚಲನಶೀಲತೆ, ಸ್ನಾಯುಗಳ ಬಲ ಮತ್ತು ಒಟ್ಟಾರೆ ತ್ರಾಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿ ದೀರ್ಘಕಾಲಿನ ಆರೋಗ್ಯವನ್ನು ಉತ್ತೇಜಿಸುತ್ತವೆ.
ಇವರು ಪ್ರತಿನಿತ್ಯ ಕಟ್ಟುನಿಟ್ಟಿನ ಆಹಾರ ಸೇವನೆಯನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಆರೋಗ್ಯಕರ ಆಹಾರಗಳು, ತಾಜಾ ತರಕಾರಿಗಳು, ನೀರು ಕುಡಿಯುವುದನ್ನು ಮಾಡುತ್ತಾರಂತೆ. ಹಾಗೆಯೇ ದೇಹಕ್ಕೆ ಸೀಮಿತವಾದ ಆಹಾರವನ್ನು ಮಾತ್ರ ಸೇವಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ಅವರ ಜಾಗರೂಕ ಆಹಾರ ಪದ್ಧತಿಗಳು ಜೀರ್ಣಕ್ರಿಯೆ, ಚಯಾಪಚಯ ಮತ್ತು ಚೇತರಿಕೆಯನ್ನು ಬೆಂಬಲಿಸುತ್ತವೆ.
ದೈಹಿಕ ಆರೋಗ್ಯವನ್ನು ಮೀರಿ, ಹೇಮಾ ಮಾಲಿನಿ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರಂತೆ. ಅವರು ಮೈಂಡ್ಫುಲ್ನೆಸ್ ಅಭ್ಯಾಸ ಮಾಡುವುದರೊಂದಿಗೆ ನೃತ್ಯ ಮತ್ತು ನಟನೆಯಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಅವರ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವುದರಿಂದ ನಿಜವಾದ ಚೈತನ್ಯ ಬರುತ್ತದೆ ಎಂದು ಹೇಮಾ ತಿಳಿಸಿದ್ದಾರೆ. ವ್ಯಾಯಾಮ, ಪೋಷಣೆ, ಮಾನಸಿಕ ಸ್ವಾಸ್ಥ್ಯ ಮತ್ತು ಸೃಜನಶೀಲತೆಯು ದೇಹವನ್ನು ಫಿಟ್ ಮಾಡಲು ಹಾಗೂ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
ಶಿಸ್ತು, ಆಶಾವಾದ ಮತ್ತು ಚಿಂತನಶೀಲ ಜೀವನಶೈಲಿಯೊಂದಿಗೆ, ಹೇಮಾ ಮಾಲಿನಿ ವಿಶ್ವಾದ್ಯಂತ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.