ಲೈಫ್‌ಸ್ಟೈಲ್

ಬ್ರಾಂಕೈಟಿಸ್​ಗೆ ಹೋಮಿಯೋಕೇರ್ ಪರಿಹಾರ

ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ. ಇದರಿಂದ ಶ್ವಾಸಕೋಶದ ಒಳಗಿರುವ ನಳಿಕೆ ಇಲ್ಲವೇ ಗಾಳಿ ಕೊಳವೆಯಲ್ಲಿ ಉರಿಯೂತ ಉಂಟಾಗುತ್ತದೆ ಹಾಗೂ ಗಾಳಿ ಕೊಳವೆಗಳು ಕಿರಿದಾಗುತ್ತವೆ. ಕೊಳವೆಗಳು/ ನಳಿಕೆಗಳು ಚಿಕ್ಕದಾಗುತ್ತವೆ, ಇದು ಬ್ರಾಂಕೈಟಿಸ್ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಗಾಳಿಯನ್ನು ಎಳೆದುಕೊಳ್ಳುವುದಕ್ಕೆ, ಹಾಗೆಯೇ ಉಸಿರಾಡುವುದಕ್ಕೆ ತೊಂದರೆ ಪಡುವಂತಾಗುವುದು.

ಸಮಸ್ಯೆ ಉಂಟಾಗಲು ಕಾರಣಗಳು: ವೈರಸ್, ಬ್ಯಾಕ್ಟೀರಿಯಾ ಹಾಗೂ ಗಾಳಿಯಲ್ಲಿನ ಅಂಶಗಳು ಧೂಮಪಾನ,  ತಂಬಾಕು ಸೇವನೆ, ಬ್ಯಾಕ್ಟೀರಿಯಾ ಸೋಂಕು, ಶ್ವಾಸಕೋಶಕ್ಕೆ ಕಿರಿಕಿರಿಯನ್ನುಂಟುಮಾಡುವ ವಸ್ತುಗಳು, ದೇಹದ ರೋಗ ನಿರೋಧಕ ಶಕ್ತಿಯು ಕಡಿಮೆ ಇದ್ದಲ್ಲಿ ಆನುವಂಶೀಕವಾಗಿ ಬರುವಂಥ ಸಾಧ್ಯತೆ, ಮಾಲಿನ್ಯಯುಕ್ತ ವಾತಾವರಣದಲ್ಲಿ ಕೆಲಸ ಮಾಡುವುದು, ಕೀಟನಾಶಕ ಸಂಪರ್ಕ ಹೊಂದಿದಾಗ.

ಬ್ರಾಂಕೈಟಿಸ್​ನಿಂದ ಆಗುವ ಪರಿಣಾಮಗಳು:

ನ್ಯುಮೋನಿಯಾ: ವಯಸ್ಕರದಲ್ಲಿ ಧೂಮಪಾನ ಮಾಡುವವರಲ್ಲಿ, ರೋಗನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಬ್ರಾಂಕೈಟಿಸ್ ಸಮಸ್ಯೆಯ ಲಕ್ಷಣಗಳು

ನಿರಂತರವಾಗಿ ಕೆಮ್ಮುವುದು ಹಾಗೂ ಕಫ ಕೂಡ ಕಾಣಿಸಿಕೊಳ್ಳಬಹುದು, ಚಳಿಯಾವುದು ಹಾಗೂ ಜ್ವರ ಕಾಣಿಸಿಕೊಳ್ಳುವುದು, ಎದೆ ಹಿಡಿದುಕೊಂಡ ಅನುಭವ ಗಂಟಲು ಕೆರೆತ, ದೇಹದಲ್ಲಿ ಆಯಾಸ ಹಾಗೂ ದೇಹ ನೋವು ಮೂಗು ಮುಚ್ಚಿಕೊಳ್ಳುವುದು, ವಾರಪೂರ್ತಿ ಕೆಮ್ಮು, ಚಳಿಗಾಲದಲ್ಲಿ ಹೆಚ್ಚು ಸಮಸ್ಯೆ.

ಮುಂಜಾಗ್ರತಾ ಕ್ರಮಗಳು

ಪೌಷ್ಟಿಕಯುಕ್ತ ಆಹಾರ ಸೇವನೆ, ಮಾನಸಿಕ ಒತ್ತಡದಿಂದ ದೂರ ಇರುವುದು, ಧೂಮಪಾನ ಮಾಡದಿರುವುದು, ಧೂಳು, ಹೊಗೆ, ಮಾಲಿನ್ಯದಿಂದ ದೂರ ಇರುವುದು. ಶುದ್ಧವಾದ ಗಾಳಿ, ನೀರು ಹಾಗೂ ಆರೋಗ್ಯಯುತ ಪರಿಸರದಲ್ಲಿರುವುದು, ಯೋಗ, ಪ್ರಾಣಾಯಾಮ ಹಾಗೆಯೇ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಹಾಗೂ ಜೀವನಕ್ರಮಗಳನ್ನು ಅಳವಡಿಸಿಕೊಳ್ಳುವುದು. ಮಾಲಿನ್ಯ ಅಧಿಕವಾದ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ಎಣ್ಣೆ ಪದಾರ್ಥಗಳಿಂದ ದೂರ ಇರುವುದು ಇತ್ಯಾದಿ.

ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸೆ

ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು. ಬೆನ್ನು ನೋವಿನ ಸಮಸ್ಯೆ ಮತ್ತೆ ಬಾರದಂತೆ ಗುಣಪಡಿಸಲಾಗುವುದು. ಇದರಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.